18 ರಿಂದ 44 ವಯ್ಯಸಿನವರ ಲಸಿಕಾಕರಣವನ್ನು ದಿನಾಂಕ 14/05/2021 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

0

ಸಾರ್ವಜನಿಕರ ಮಾಹಿತಿಗಾಗಿ:

ದಿನಾಂಕ: 07.05.2021 ರಿಂದ ರಾಜ್ಯ ಸರ್ಕಾರವು ಭಾರತ ಸರ್ಕಾರದಿಂದ 45+ ವಯೋಮಾನದವರ ಲಸಿಕಾಕರಣಕ್ಕಾಗಿ ಹಂಚಿಕೆಯಾದ ಲಸಿಕೆಗಳನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಲು ನಿರ್ಧರಿಸಿರುತ್ತದೆ.

ಇಂದು ರಾಜ್ಯ ಸರ್ಕಾರವು ನೇರವಾಗಿ 18 ರಿಂದ 44 ವರ್ಷದ ವಯೋಮಾನದ ಫಲಾನುಭವಿಗಳ ಲಸಿಕಾಕರಣಕ್ಕೆ ಖರೀದಿಸಿದ ಪೂರ್ಣ ದಾಸ್ತಾನನ್ನು ಸಹ 2ನೆಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಬಳಕೆಗೆ ವಿನಿಯೋಗಿಸಲು ನಿರ್ಧರಿಸಿದೆ

ಆದ್ದರಿಂದ ರಾಜ್ಯದಲ್ಲಿ ಇರುವ ಎಲ್ಲಾ ಲಸಿಕೆಗಳ (ಕೇಂದ್ರ ಸರ್ಕಾರದಿಂದ ಒದಗಿಸಲಾದ ಹಾಗೂ ರಾಜ್ಯ ಸರ್ಕಾರದಿಂದ ನೇರವಾಗಿ ಖರೀದಿಸಿದ) ಪೂರ್ಣ ದಾಸ್ತಾನನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಲು ನಿರ್ಧರಿಸಿರುತ್ತದೆ.

ಈ ಹಿನ್ನೆಲೆಯಲ್ಲಿ, 18 ರಿಂದ 44 ವರ್ಷ ವಯೋಮಾನದವರ ಕೋವಿಡ್ ಲಸಿಕಾಕರಣವನ್ನು (ಈಗಾಗಲೇ ಲಸಿಕೆಗಾಗಿ ಸಮಯ ನಿಗಧಿಪಡಿಸಿಕೊಂಡವರೂ ಸೇರಿದಂತೆ) ದಿನಾಂಕ 14.05.2021 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಕವಾಗಿ ಸ್ಥಗಿತಗೊಳಿಸಲಾಗಿದೆ.

ಈ ಆದೇಶವು ಕೋವಿಡ್ ಲಸಿಕಾಕರಣ ನಡೆಸುತ್ತಿರುವ ಎಲ್ಲಾ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಿಗೆ ಅನ್ವಯಿಸುತ್ತದೆ.

For the information of general public

The state government on 07.05.2021 decided to utilize the complete supply of vaccines provided by Govt. of India for vaccination of persons above 45+ years, for vaccinating beneficiaries who were due for second dose.

Today the state government has decided that the vaccine procured directly by the state for vaccination of persons between 18 to 44 years will be utilized for vaccination of beneficiaries who are due for second dose.

Therefore all vaccines available with the state government (ie. supplied by Gol & procured directly by state) will be utilized for vaccination of beneficiaries due for 2nd dose.

In this regard vaccination for 18 to 44 age group (including those who have already booked appointment) will be temporarily suspended from 14.05.2021 till further orders.

This order will be applicable for COVID vaccination at all Government COVID vaccination centers in state.

LEAVE A REPLY

Please enter your comment!
Please enter your name here