ಅರಕಗೂಡಿನಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ 21 ನೇ ಸಾಹಿತ್ಯ ಸಮ್ಮೇಳನ

0

ಅರಕಗೂಡಿನಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ 21 ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸೋಮವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಶಾಸಕ ಎ.ಟಿ.ರಾಮಸ್ವಾಮಿ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

ಸರಕಾರಿ ಶಾಲೆಗಳಲ್ಲಿ ಮಾತೃಭಾಷೆ ಶಿಕ್ಷಣ ಕಡ್ಡಾಯಗೊಳ್ಳಬೇಕಿದೆ.ಸಮ್ಮೇಳನಾಧ್ಯಕ್ಷರಾದ ಆರ್.ಕೆ.ಪದ್ಮನಾಭ ಒತ್ತಾಯ

ಅರಕಲಗೂಡು : ಆಂಗ್ಲ ಮಾಧ್ಯಮಕ್ಕೂ ಇಂಗ್ಲೀಷ್ ಕಲಿಕೆಗೂ ಯಾವ ಸಂಬಂಧವೂ ಇರುವುದಿಲ್ಲ.ಹಾಗಾಗಿ ಇಲ್ಲಿ ಸರಕಾರ ಬಹಳ ಜಾಗರೂಕರಾಗಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಕಲಿಕೆಗೆ ಪೂರಕವಾಗಿರುವ ಕನ್ನಡ ಭಾಷೆಯ,ಸಂಸ್ಕೃತಿಯ ಪಠ್ಯವನ್ನು ಅಳವಡಿಸುವ ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ಸಂಗೀತ ವಿದ್ವಾನ್ ಹಾಗೂ 21ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಆರ್.ಕೆ.ಪದ್ಮನಾಭ ಸಲಹೆ ಮಾಡಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅನಕೃ ವೇದಿಕೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು,ಸ್ವಾಭಾವಿಕವಾಗಿ ಮಕ್ಕಳು ಕನ್ನಡ ಮಾತನಾಡುವಂತಾಗಬೇಕಾದರೇ ನಾವು ಕಲಿಯುವ ಶಾಲೆಗಳಲ್ಲಿ ಕನ್ನಡ ಭಾಷ ಅಧ್ಯಯನ ಕಡ್ಡಾಯವಾಗಿರಬೇಕಾಗುತ್ತದೆ.ಶಾಲಾ ಹಂತದಲ್ಲಿ ಕನ್ನಡಕ್ಕೆ ಆದ್ಯತೆ,ಮನ್ನಣೆ ಇರಬೇಕಿದೆ.ಪಠ್ಯದಲ್ಲಿ ಮಹಾನ್ ಸಂಗೀತ ವಿದ್ವಾಂಸರು,ಸಾಹಿತಿಗಳು,ಜಾನಪದ ಮೇರು ಕಲಾವಿದರು,ಚಿತ್ರ ಕಲಾವಿದರು,ಕ್ರೀಡಾಪಟುಗಳು,ಕನ್ನಡ ನಾಡಿನ ಶ್ರೇಷ್ಠ ಅರ್ಹ ವಿದ್ವಾಂಸರ ಬದುಕು ಹಾಗು ಕೊಡುಗೆಯನ್ನು ತಿಳಿಸುವಂತಹ ಪಠ್ಯಕ್ರಮ ನಮ್ಮಲ್ಲಿ ಕಡ್ಡಾಯವಾಗಿ ಬರಬೇಕಿದೆ.ಇಲ್ಲಿ ಯಾವುದೇ ರಾಜಕೀಯ ಪ್ರವೇಶವಾಗದೆ ಜಾತ್ಯಾತೀತವಾಗಿ ಇಂತಹ ಶಿಕ್ಷಣ ಮಕ್ಕಳಿಗೆ ದೊರೆಯಬೇಕು.ಆಗ ಮಾತ್ರ ನಮ್ಮತನವನ್ನು ನಾವು ಉಳಿಸಿಕೊಳ್ಳಬಹುದಾಗಿದೆ.ಇದು ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾಗಬೇಕು.ನಾನು ಸೇರಿದಂತೆ ಇಲ್ಲಿನ ವೇದಿಕೆಯಲ್ಲಿ ಉಪಸ್ಥಿತರಿರುವವರ ನಾಲ್ಕನೇ ತರಗತಿವರೆಗಿನ ಶಿಕ್ಷಣ ಕನ್ನಡ ಮಾದ್ಯಮದಿಂದಲೇ ಆಗಿದೆ.5ನೇ ತರಗತಿಗೆ ಬಂದಾಗ ಮಾತ್ರ ಎಬಿಸಿಡಿ ಕಲಿತಿದ್ದೇವೆ ಎಂದರು.
ಇAದಿನ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿದರೇ ಪ್ರತಿ ವರ್ಷವೂ ಕೂಡ ಪಠ್ಯದ ಬದಲಾವಣೆಯನ್ನು ಕಾಣಬಹುದಾಗಿದೆ.ನಾವು ಕಲಿತಿರುವ ಶಿಕ್ಷಣವನ್ನು ಒಂದೆರಡು ವರ್ಷಗಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ.ಇದು ಹಲವಾರು ವರ್ಷಗಳಿಂದಲೂ ಮುಂದುವರಿದುಕೊAಡು ಬಂದಿದೆ.ಯಾವುದೇ ಸರಕಾರ ಆಡಳಿತ ನಡೆಸಲಿ ಭದ್ರವಾದ ಶಿಕ್ಷಣ ಸಿದ್ಧಾಂತಕ್ಕೆ ಬದ್ಧವಾಗಿರಬೇಕಾಗುತ್ತದೆ.ಶಿಕ್ಷಣದ ಜೊತೆಯಲ್ಲಿ ಸಂಗೀತದ ಸೇರ್ಪಡೆಯು ಕಡ್ಡಾಯವಾಗಬೇಕಿದೆ.ಎಷ್ಟೋ ಶಾಲೆಗಳಲ್ಲಿ ಸಂಗೀತ ಶಿಕ್ಷಕರಿಲ್ಲ.ಶಿಕ್ಷಣ ಇಲಾಖೆ ಈ ದೃಷ್ಠಿಯಲ್ಲಿ ಅರ್ಥಪೂರ್ಣ ಕಾನೂನನ್ನು ಜಾರಿಗೊಳಿಸಬೇಕಾಗುತ್ತದೆ ಎಂಬುದು ನನ್ನ ವಿನಂತಿಯಾಗಿದೆ ಎಂದು ಹೇಳಿದರು.
ಇಂದಿನ ಪರಿಸ್ಥಿತಿಯಲ್ಲಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳು ಎಂಬುದು ಸತ್ಯದ ವಿಷಯ.ನಾನು ಹೇಳುತ್ತಿರುವುದು ಆಂಗ್ಲ ಭಾಷೆಯ ವಿರುದ್ಧವಲ್ಲ.ಕನ್ನಡ ಭಾಷೆಯ ಪ್ರೇಮದಿಂದ,ಕಳಕಳಿಯಿಂದ ಮತ್ತು ಅವಶ್ಯಕತೆಯಿಂದ. ಗ್ರಾಮಾಂತರ ಪ್ರದೇಶಗಳ ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳನ್ನು ಮಕ್ಕಳ ಸಂಖ್ಯೆ ಇಳಿಕೆ ಹಿನ್ನೆಲೆ ನೂರಾರು ಶಾಲೆಗಳನ್ನು ಮುಚ್ಚಲಾಗಿದೆ.ಮತ್ತೊಷ್ಟು ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ದೂರವೇನಿಲ್ಲ.ಇದು ಪೋಷಕರ ಮೌಢ್ಯವೋ ಅಥವಾ ಸರಕಾರದ ವೈಫಲ್ಯವೋ ಏನೂ ತಿಳಿಯಲಾರದ ಪರಿಸ್ಥಿತಿ.ಈ ದೃಷ್ಠಿಯಿಂದ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ವಿಶೇಷ ಸವಲತ್ತು ನೀಡಿ ಶಾಲೆಗಳ ಉಳಿವಿಗೆ ಸರಕಾರ ಪ್ರಯತ್ನಿಸಬೇಕಿದೆ ಎಂಬುದು ನನ್ನ ಅನಿಸಿಕೆ ಮತ್ತು ಪ್ರಾರ್ಥನೆಯಾಗಿದೆ ಎಂದು ತಿಳಿಸಿದರು.


ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯವಾಗಬೇಕಿದೆ : ಇತ್ತೀಚಿನ ಎಲ್ಲಾ ವ್ಯವಹಾರಗಳು ಬ್ಯಾಂಕ್ ಮೂಲಕವೇ ಆಗುತ್ತಿರುವುದು ಸಂತಸದ ವಿಷಯವಾಗಿದ್ದರೂ ಕೂಡ ನಮ್ಮ ದೇಶದಲ್ಲಿನ ಬಹುತೇಕ ಮಂದಿ ರೈತರೇ ಆಗಿದ್ದಾರೆ.ಈ ಹಿಂದೆ ಇರ‍್ಯಾರು ಶಿಕ್ಷಣ ಕಲಿತವರಲ್ಲ.ಸಣ್ಣ ಪ್ರಮಾಣದ ಹಣಕ್ಕಾಗಿ ದಿನವಿಡಿ ಬ್ಯಾಂಕ್‌ಗೆ ಅಲೆಯಬೇಕಿದೆ.ಕರ್ನಾಟಕ ರಾಜ್ಯದ ಎಲ್ಲಾ ರಾಷ್ಟ್ರಿಕೃತ ಬ್ಯಾಂಕ್‌ಗಳಲ್ಲಿ ಹಿಂದಿ ಸೇರಿದಂತೆ ಇತರೆ ಭಾಷಿಕ ಅಧಿಕಾರಿ,ನೌಕರರೇ ಇದ್ದಾರೆ.ಇವರೊಂದಿಗೆ ವ್ಯವಹಾರ ನಡೆಸಲು ಕಷ್ಟವಾಗಿ ಎಷ್ಟೋ ಯೋಜನೆಗಳ ಆರ್ಥಿಕ ನೆರವು ಪಡೆದುಕೊಳ್ಳಲು ಸಾಧ್ಯವಾಗದೇ ವಂಚನೆಗೆ ಮುಗ್ದ ಜನರು ಒಳಗಾಗುತಿದ್ದಾರೆ.ರಾಜ್ಯದಲ್ಲಿನ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಕುರಿತು ತರಬೇತಿ ಆಗಬೇಕಿದೆ.ಈ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕಿದೆ ಎಂದು ಪದ್ಮನಾಭ ಅವರು ವಿನಂತಿ ಮಾಡಿದರು.
ಕರ್ನಾಟಕ ಸಂಗೀತ ಕಚೇರಿ ಏರ್ಪಡಿಸಿ :ಪ್ರಸ್ತುತದಲ್ಲಿ ಅನೇಕ ವಿದ್ವಾಂಸರು ವೇದಿಕೆಗಳಲ್ಲಿ ಕನ್ನಡ ಕೃತಿಗಳನ್ನೆ ಆಧರಿಸಿ ಸಂಗೀತ ಕಚೇರಿಗಳನ್ನು ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆ.ರಾಜ್ಯದ ಯಾವುದೇ ಜಿಲ್ಲೆ,ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನಿಷ್ಠ ಒಂದು ಕನ್ನಡ ಕೃತಿಗಳ ಕರ್ನಾಟಕ ಸಂಗೀತ ಕಚೇರಿಗಳನ್ನು ಏರ್ಪಡಿಸಬೇಕಿದೆ.ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಬೇಕಿದೆ ಎಂದು ಅವರು ಮನವಿ ಮಾಡಿದರು.

ಭಾಷೆಯು ಕೇವಲ ಸದ್ದಲ್ಲ, ಆತ್ಮದ ಅಭಿವ್ಯಕ್ತಿ
ಡಾ.ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ | ೨೧ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ
ಅರಕಲಗೂಡು: ಭಾಷೆ ಕೇವಲ ಸದ್ದಲ್ಲ, ಅದು ಆತ್ಮದ ಅಭಿವ್ಯಕ್ತಿ ಎಂದು ಹಿರಿಯ ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೆಖರ್ ಹೇಳಿದರು.
ಪಟ್ಟಣದಲ್ಲಿ ನಿರ್ಮಿಸಿರುವ ಕಾದಂಬರಿ ಸಾರ್ವಭೌಮ ಅನಕೃ ವೇದಿಕೆಯಲ್ಲಿ ಆಯೋಜಿಸಿರುವ ೨೧ ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಗಿ ಸಸಿ ನಾಟಿ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹೆಮ್ಮೆಯ ಕನ್ನಡವನ್ನು ಹ್ಲದಯ ತುಂಬಿಕೊಂಡು ಜೀರ್ಣಿಸಿಕೊಮಡರೆ ಮಾತ್ರ ಅದಕ್ಕೆ ಬೆಲೆ ಮತ್ತು ನೆಲೆ. ಭಾಷಣಗಳಿಂದ ಭಾಷೆ ಬೆಳೆಯಲಾರದು. ಅದನ್ನು ಬಳಸಿದರೆ ಮಾತ್ರ ಬೆಳೆಯುತ್ತದೆ ಎಂದು ಹೇಳಿದರು.
ಹಳ್ಳಿಗಳು ಇಂದು ಹಳ್ಳಿಗಳಾಗಿ ಉಳಿಯದೇ ಕುರೂಪ, ವಿರೂಪಗಳು ಆವರಿಸಿ ಅರಾಜಕತೆ ಎದ್ದು ಕಾಣುತ್ತಿದೆ. ಸಾಮಾಜಿಕ ಜಾಲ ತಾಣಗಳನ್ನು ಆಕ್ಷೇಪಿಸುವ ಕಾವನ್ನು ನಾವು ದಾಟಿ ಹೋಗಿದ್ದು ಅನಿವಾರ್ಯವಾಗಿ ಒಪ್ಪಿಕೊಳ್ಳೇಬೇಕಿರುವ ಸಂದಿಗ್ದ ಸ್ಥಿತಿಯಲ್ಲಿದ್ದೇವೆ. ಆದರೆ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಹೇಳಿಕೊಡಬೇಕಿದೆ ಎಂದು ತಿಳಿಸಿದರು.


ಮಹಾ ನಗರದಲ್ಲಿ ಕನ್ನಡ ಮಾಯವಾಗುತ್ತಿದೆ ಎಂಬ ಕಾಲವನ್ನೂ ದಾಟಿರುವ ನಾವು ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸಂದರ್ಭವನ್ನು ನೋಡುವಂತಾಗಿದೆ. ನಮ್ಮೂರಿನ ಶಾಲೆಯನ್ನು ಅಚ್ಚ ಕನ್ನಡ ಶಾಲೆಯಾಗಿ ಉಳಿಸಿಕೊಳ್ಳುವುದು ಸವಾಲಾಗಿದೆ. ನಾವು ವೇಗದ ಬದುಕಿಗೆ ಒಗ್ಗಿಕೊಂಡಿರುವುದರಿಂದ ನೆನಪಿನ ಭಂಡಾರವನ್ನು ಅಳಿಸುತ್ತಿದ್ದೇವೆ. ಅಂತೆಯೇ ನಮ್ಮ ಊರು, ಕೇರಿ, ಹಳ್ಳಿಗಳನ್ನು ನಾವು ಮರೆಯುತ್ತಿದ್ದೇವೆ. ಮನುಕುಲದ ಬೇರು ಮರೆತರೆ ಭವಿಷ್ಯಕ್ಕೆ ಅತೀ ದೊಡ್ಡ ನಷ್ಟವಾಗಲಿದೆ. ಕನ್ನಡಿಗರೆಲ್ಲರೂ ಒಂದು ಎಂಬುದನ್ನು ಸಾಮುದಾಯಿಕವಾಗಿ ಸಾಬೀತು ಪಡಿಸಲು ಸಾಹಿತ್ಯ ಸಮ್ಮೇಳನಗಳು ಒಳ್ಳೆಯ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಕನ್ನಡದ ಅನ್ನ ತಿನ್ನುವ ಜನಕ್ಕೆ ಈ ನೆಲದ ಭತ್ತದ ನೆನಪಾಗಬೇಕು. ಮೊಳಕೆ ಒಡೆಯುವ ಕೆಲಸ ಮಾಡಿದ್ದರೆ ನಾಟಿ ಮಾಡಿದ ಭತ್ತ ಕೊಳೆತು ಹೋಗುತ್ತದೆ. ಸಾಹಿತ್ಯ ಲೋಕಕ್ಕೂ ಇದೇ ಮಾತು ಅನುಕರಣೆಯಾಗಕುತ್ತದೆ. ಸಾಹಿತ್ಯವು ನಡೆದರೆ ಗದ್ಯ, ಕುಣಿದರೆ ಪದ್ಯ, ಬಣ್ಣಿಸಿದರೆ ಕಾವ್ಯ, ಮರೆ ಮಾಡಿದರೆ ನಾಟಕ, ಮುಗ್ಗರಿಸಿದರೆ ವಿಡಂಭನೆ, ಬುರಡೆ ಬಿಟ್ಟರೆ ಪುರಾಣ ಹೀಗೆ ಎಲ್ಲ ರೂಪದಲ್ಲೂ ಕಳೆಕಟ್ಟಿದ ಕನ್ನಡವನ್ನು ಬಳಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ಬೀದಿಯಲ್ಲಿ ಕುಳಿತ ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಒಳಗೆ ಕರೆದು ಅನ್ನ ಹಾಕಿ ಬೆಳೆಸಿದ ಕಿರ್ತಿ ಅ.ನ.ಕೃಷ್ೞರಾಯರಿಗೆ ಸಲ್ಲುತ್ತದೆ. ಕರ್ನಾಟಕದ ತಂದೆ ತಾಯಿಗಳ ನಾಡು ಎನ್ನುವುದಕ್ಕೆ ಇಂತಹ ನೂರಾರು ಉದಾಹರಣೆಗಳು ಸಿಗುತ್ತವೆ. ಸಾಹಿತ್ಯ ಕ್ಷೇತ್ರದಿಂದ ಸಂಗೀತವನ್ನು ದೂರವಿಡಬಾರದು. ಅ.ನ.ಕೃ ಅವರು ಹಾಲ್ಯಾಂಡ್ನಿಂದ ಪೋಲ್ಯಾಂಡಸ್ ವರೆಗೆ ಪ್ರಖ್ಯಾತರು. ಎಲ್ಲ ವಿಷಯಗಳಲ್ಲೂ ಪರಿಣಿತರಾಗಿದದ್ ಅವರನ್ನು ಹಾಲುಚಿಡ ತವರಲ್ಲಿ ನೆನಪು ಮಾಡಿಕೊಳ್ಳದಿದ್ದರೆ ತವರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು.


ಜಾನಪದ ವಿದ್ವಾಂಸ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ದೊರೆತರು ಅದರ ಸ್ವಾಯತ್ತೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸೋತಿರುವುದು ನಾಡಿನ ದುರಂತ. ಒಂದು ದೇಶಕ್ಕೆ ಒಂದೇ ಭಾಷೆ ಎಂಬ ನೀತಿ ಒಪ್ಪಿಕೊಳ್ಳಲಾಗದು. ಒಂದು ಭಾಷೆ ಮೂಲಕ ಇಡೀ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಅಪಾಯಕಾರಿಯಾಗಿದೆ. ಹಿಂದಿ ಹೇರಿಕೆ ಮೂಲಕ ಅನ್ಯ ಭಾಷೆ ಮಾತನಾಡುವ ರಾಜ್ಯಗಳ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್.ಮಲ್ಲೇಡ ಅವರು ಆಶಯ ನುಡಿಗಳನ್ನಾಡಿ, ಕನ್ನಡ ನಾಡು-ನುಡಿ ಕೆಲಸಕ್ಕೆ ಹೊರಟಾಗ ಸಹೃದಯಿ ಮನಸ್ಮ್ಸಗಳು ಜತೆಯಾಗುತ್ತವೆ ಎಂಬುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಿದೆ. ಸರ್ವಾಧ್ಯಕ್ಷರ ಆಯ್ಕೆ ಸಂದರ್ಭ ಜಿಲ್ಲೆಯ ಅನೇಕ ಮಹತ್ವದ ಲೇಖಕಕರ ಹೆಸರುಗಳು ಪ್ರಸ್ತಾಪವಾಗಿ ಖುಷಿಯಾಯಿತು. ಅಚಿತಹ ಮೇರು ಸಾಹಿತಿಗಳನ್ನು ಕೊಡುವ ಗಟ್ಟಿ ನೆಲ ನಮ್ಮ ಹಾಸನ ಎಂದು ಹೇಳಲು ಹೆಮ್ಮೆ. ಡಾ. ಆರ್.ಕೆ.ಪದ್ಮನಾಭ್ ಅವರು ೭೦೦ ಭಾವಗೀತೆಗಳಿಗೆ ಸ್ವತಃ ರಚಿಸಿ ರಾಗ ಸಂಯೋಜಿಸಿ ಹಾಡಿದ್ದಾರೆ. ಅತ್ಯಂತ ಶ್ರೇಷ್ಟ ವಾಗ್ಯಯಕಾರರಿವರು. ಅವರ ಹಾಡುಗಳನ್ನು ಕೇಳುತ್ತಿದ್ದರೆ ಕಣ್ಣಂಚಲ್ಲಿ ನೀರು ಹರಿಸುತ್ತದೆ. ಮೇರು ದಿಗ್ಗಜರು, ಶ್ರೇಷ್ಠರಿಂದ ಪ್ರಶಸ್ತಿಗಳನ್ನು ಅವರು ಸ್ವೀಕರಿಸಿದ್ದರೂ ಎಲ್ಲಿಯೂ ಹೇಳಿಕೊಳ್ಳದ ಪ್ರತಿಭೆಯಿಂದ ಈ ಜಿಲ್ಲೆಯ ಕ್ಭಿರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದೆ. ಅಚಿತಹವರು ನಮ್ಮ ಅವಧಿಯಲ್ಲಿ ಸಮ್ಮೇಳನಾರ್ಧಯಕ್ಷರಾಗಿರುವುದು ನಮ್ಮ ಹೆಮ್ಮೆ. ಆದರೆ ಇಂತಹ ಸುಂದರ ಕಾರ್ಯಕ್ರಮಗಳನ್ನು ಪಟ್ಟಣದ ಜನರು ನೇರ ಕಣ್ಣಿನಿಂದ ನೋಡದಿರುವುದು ಬೇಸರದ ಸಂಗತಿ. ಇದೇ ಕಾರಣಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಪ್ರದೇಶದಲ್ಲಿ ಆಯೋಜನೆಗೊಳ್ಳಬೇಕಿದೆ ಎಂದರು.


ಸಮಾರಂಭದ ಅಧ್ಯಕ್ಷೆ ವಹಿಸಿದ್ದ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕಲಾ ದಿಗ್ಗಜರನ್ನು ಕೊಟ್ಟ ರುದ್ರಪಟ್ಟಣ ಗ್ರಾಮ ಸಂಗೀತ ಲೋಕದ ತವರುಮನೆಯಾಗಿದೆ. ಈ ಕ್ಷೇತ್ರದ ಮೂಲಕ ಸಂಗೀತ ಸಾಧನೆ ಮಾಡಿ ದೇಶದ ಕಿರ್ತಿ ಹೆಚ್ಚಿಸಿದ ಮೇರು ಕಲಾವಿದರು ಜನ್ಮ ತಾಳಿದ್ದಾರೆ. ಅಂಕಗಳ ಆಧಾರದಲ್ಲಿ ಬುದ್ಧಿಮತ್ತೆ ಅಳೆಯಲು ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ವಿದ್ವಾನ್ ಆರ್.ಕೆ.ಪದ್ಮನಾಭ್ ಸಾಕ್ಷಿಯಾಗಿದ್ದಾರೆ. ನೂರು ಜನ್ಮಕ್ಕೆ ಆಗುವಷ್ಟು ಸಾಹಿತ್ಯದ ಕೆಲಸಗಳನ್ನು ಮಾಡಿರುವ ಅನಕೃ ಅವರನ್ನು ಪಡೆದ ನಾವೇ ಧನ್ಯರು. ರಾಷ್ಟçದ ಪ್ರಧಾನಿಯಾಗಿರುವ ದೇವೇಗೌಡರನ್ನು ಕೊಡುಗೆಯಾಗಿ ನೀಡಿದ ಈ ಮಣ್ಣಲ್ಲಿ ಕನ್ನಡದ ಕಂಪು ಹರಡಿಸುವ ಈ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲಿ ಎಂದು ಹಾರೈಸಿದರು.
ವಿವಿಧ ಸಾಹಿತಿಗಳು ರಚಿಸಿದ ಮೂರು ಕೃತಿಗಳನ್ನು ಸಮಾರಂಭದ ವೇದಿಕೆಯಲ್ಲಿ ಲೋಕಾರ್ಪಣೆ ಮಾಡಲಾಯಿತು. ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದಾ ಪ್ಲಥ್ವಿರಾಜ್, ಉಪಾಧ್ಯಕ್ಷೆ ರಶ್ಮಿ ಮಂಜು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಕಸಾಪ ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗವಡ, ಹಿರಿಯ ಸಾಹಿತಿ ಸುಬ್ಬು ಹೊಲೆಚಿರ್, ಕಲಾವಿದ ಮೇಟಿಕೆರೆ ಹಿರಿಯಣ್ಣ ಇತರರಿದ್ದರು. ಬನುಮಾ ಗುರುದತ್, ನಾಡಗೀತೆ ಹಾಡಿದರು. ನಾಗಮಣಿ ಪ್ರಾರ್ಥಿಸಿದಿರು. ಕಸಾಪ ತಾಲೂಕು ಅಧ್ಯಕ್ಷ ಅನಿಲ್ ಗೌಡ ಸ್ವಾಗತಿಸಿದರು. ವಿದೂಷಿ ರಂಜನಿ ಕೀರ್ತಿ ಅವರು ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.

ಹೇಳಿಕೆಗಳು:
ನಾಡಗೀತೆಯನ್ನು ಮಕ್ಕಳು ಹಾಡಬೇಕು, ಉಳಿದವರೆಲ್ಲರೂ ಕೈ ಕಟ್ಟಿ ನಿಲ್ಲಬೇಕು ಎಂಬ ಭಾವನೆ ಕೆಲವರಲ್ಲಿದೆ. ಆದರೆ ಭಾರತ ಜನನಿಯ ತನ್ಮಜಾತೆ ಎಂಬ ಸಾಲುಗಳನ್ನು ಹಾಡಿದರೆ ಮೈ ರೋಮಾಂಚನವಾಗುತ್ತದೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿನಗೂ ಅನುಭವಿಸಬೇಕು
ಡಾ.ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಸಾಹಿತಿ

ಸಾಹಿತ್ಯದಿಂದ ಸಮಾಜ ಬದಲಾವಣೆ ಆಗಬೇಕೆಂಬ ಅಪೇಕ್ಷೆ ಇದೆ. ಸೌಹಾರ್ದದ ವಾತಾವರಣ ನಿರ್ಮಾಣ ಮಾಡಲು ಸಾಹಿತ್ಯ ಲೋಕ ಕೆಲಸ ಮಾಡಬೇಡಕಿದೆ. ಪ್ರೀತಿ, ವಿಶ್ವಾಸದ ಜಾಗದಲ್ಲಿ ಅಸಹನೆ, ಅಸಹಕಾರ, ಅಸೂಯೆ ತುಂಬಿ ಹೋಗಿದೆ. ಇದನ್ನು ಇಲ್ಲವಾಗಿಸಲು ಸಾಮರಸ್ಯದೆಡೆ ಕೊಂಡೊಯ್ಯುವ ಬರಹಗಳು ಹೆಚ್ಚಾಗಬೇಕಿದೆ. ಸಮಜದ ಪ್ರಸ್ತುತ ತಲ್ಲಣಗಳ ನಡುವೆ ಮುಖಾಮುಖಿಯಾಗಿವ ಸಾಹಿತ್ಯ ರಚನೆಗೆ ಯುವ ಸಾಹಿತಿಗಳು ಮುಂದಾಗಬೇಕು
ಡಾ.ಹಂಪನಹಳ್ಳಿ ತಿಮ್ಮೇಗೌಡ, ಜಾನಪದ ವಿದ್ವಾಂಸ
ಹೇಳಿಕೆ:
ಬಾಹುಬಲಿಯನ್ನು ನಾವು ಕಂಡು, ಸ್ಪರ್ಶಿಸಿರಬಹುದು. ಆದರೆ ಅವನಿಂದ ನಾವು ಕಲಿತಿದ್ದೇನೆ, ಕೊಳಕು ತೊಳೆಯುವ ಹೇಮಾವತಿಯನ್ನು ನಾವು ಹೊಂದಿದ್ದೇವೆ. ಆದರೆ ಕೊಳಕನ್ನು ತೊಳೆದುಕೊಂಡಿದ್ದೇವೆಯೇ ಎಂಬ ಆತ್ಮ ವಿಮರ್ಷೆ ಮಾಡಿಕೊಳ್ಳಬೇಕು. ಶಿಲ್ಪ ಕಲೆಗಳ ನಾಡಿನವರು ಎಂದು ಹೇಳಿಕೊಳ್ಳುವುದಲ್ಲ. ನಮ್ಮ ನೆಲದ ಮಹಿಮೆಯನ್ನು ಅರಿತು ನಡೆಯಬೇಕು ಎಂಬ ಭಾವನೆ ಈ ನೆಲದ ಮಗನಾಗಿ ನನ್ನನ್ನು ಬಹಳವಾಗಿ ಕಾಡುತ್ತಿದೆ.
ಸುಬ್ಬು ಹೊಲೆಯಾರ್, ಹಿರಿಯ ಸಾಹಿತಿ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಂದಿ ಹೇರಿಕೆ ಸರಿಯಲ್ಲ
ಹಿರಿಯ ವಿದ್ವಾಂಸ ಡಾ.ಪದ್ಮನಾಭ್ ಆಕ್ರೋಶ | ಸಮ್ಮೇಳನಾಧ್ಯಕ್ಷರ ಭಾಷಣದ ಮುಖ್ಯಾಂಶಗಳು
ಅರಕಲಗೂಡು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಂದಿ ಹೇರಿಕೆ ಸರಿಯಲ್ಲ ಎಂದು ಹಿರಿಯ ಸಂಗೀತ ವಿದ್ವಾಂಸ ಡಾ. ಆರ್.ಕೆ.ಪದ್ಮನಾಭ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿರುವ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಅವರು ಮಾತನಾಡಿ, ದೇಶದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಳೀಯ ಭಾಷೆಗಳ ಬಳಕೆ ಅಗತ್ಯವಿದೆ. ಆದರೆ ಸಲ್ಲದ ಸಬೂಬುಗಳನ್ನು ಹೇಳುವ ಮೂಲಕ ಬ್ಯಾಂಕ್ಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ತುಂಬಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಎಷ್ಟೇ ಹೊರೆ ಹೊರಸಿದರೂ ಕನ್ನಡಿಗರು ಸ್ವೀಕರಿಸುತ್ತಾರೆ ಎಂಬ ಭ್ರಮೆಯೇ ಇದಕ್ಕೆಲ್ಲ ಕಾರಣವಾಗಿದೆ. ಸಮ್ಮೇಳನಗಳ ಮೂಲಕ ಇಂತಹ ಚರ್ಚೆಗಲಾಗಿ ಬದಲಾವಣೆ ತರಬೇಕು.
ಕನ್ನಡದ ಬಾಷೆ ಬಳಕೆ ಮಾಡುವ ರೀತಿಯನ್ನು ನಾವು ಅರ್ಥೈಸಿಕೊಲ್ಳಬೇಕು. ಬರೆದಷ್ಟೂ ಕನ್ನಡದ ಮೇಲಿನ ಅಭಿಮಾನ ಹೆಚ್ಚಾಗುತ್ತಲೇ ಇರುತ್ತದೆ. ಕನ್ನಡದ ಲಯ ಬೇರೆ ಬಾಷೆಗಳಲ್ಲಿ ಸಿಗಲಾರದು. ಭಾಷೆಯ ಅಂತರಂಗಕ್ಕೆ ಹೋದಾಗ ಮಾತ್ರ ಬಾವಾಭಿವ್ಯಕ್ತತೆ ಅರ್ಥವಾಗುತ್ತದೆ. ಸರ್ಕಾರದ ಕನ್ನಡ ಶಾಲೆಗಳನ್ನು ಮುಚ್ಚುವ ಸಂದರ್ಭ ಬಂದಿದೆ. ಇದೇ ಬೆಳವಣಿಗೆ ಮುಂದುವರಿದರೆ ೨೫ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳೇ ಇಲ್ಲದಂತಾಗುತ್ತದೆ. ಸರ್ಕಾರ ಮತ್ತು ಪೋಕಷರು ಕಟಿಬದ್ಧರಾಗಬೇಕು. ಕನ್ನಡದ ಬಗ್ಗೆ ಕೀಳರಿಮೆ ಬಿಡಬೇಕು. ಪ್ರಾಥಮಿಕ ಶಿಕ್ಷಣವನ್ನಾದರೂ ಮಕ್ಕಳಿಗೆ ಕನ್ನಡದಲ್ಲಿ ಕೊಡಿಸಬೇಕು ಎಂದು ಮನವಿ ಮಾಡಿದರು.


ಸಂಗೀತದ ಹೃದಯವೇ ಕನ್ನಡ ಭಾಷೆಯಾಗಿದೆ. ಇವುಗಳ ನಡುವೆ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಸಂಗೀತ ಮತ್ತು ಸಾಹಿತ್ಯಕ್ಕೆ ಒಟ್ಟೊಟ್ಟಿಗೆ ಕೊಂಡೊಯ್ಯಬೇಕು. ಸಂಗೀತ ವಿದ್ವಾಂಸನನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯಕೆ ಮಾಡಿರುವುದು ಸಾಹಿತ್ಯ ಪ್ರಪಂಚಕ್ಕೆ ಹೊಸ ಸಂದೇಶ ನೀಡಿದಂತಾಗಿದೆ. ನನ್ನ ಜನ್ಮ ಇಂದಿಗೆ ಸಾರ್ಥಕವಾಗಿದೆ ಎಂಬ ಭಾವ ಮೂಡುತ್ತಿದೆ. ನನಗೆ ಜನ್ಮ ನೀಡಿದ ಅರಕಲಗೂಡನ್ನು ಸಂಗೀತ ಸಮ್ರಾಜ್ಯ ನಿರ್ಮಾಣ ಮಾಡಬೇಕು ಎಂಬ ಕನಸಿದೆ. ಅನಕೃ ಅವರ ಮನೆಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅವರ ಹೆಸರಿನಲ್ಲಿ ಏನಾದರೂ ಕೊಡುಗೆ ನೀಡಬೇಕಿದೆ ಎಂದು ಆಶಿಸಿದರು.

ಸಾಮಾಜಿಕ ಜಾಲತಾಣ ಬಳಕೆ ಹಾದಿ ಒಳ್ಳೆಯ ದಿಕ್ಕಿನೆಡೆ ಸಾಗಬೇಕು

ಅರಕಲಗೂಡು: ಕೊಡುಗೆಗಳ ಜತೆಗೆ ಅಪಾಯಕಾರಿ ಸನ್ನಿವೇಶಗಳನ್ನು ತಂದೊಡ್ಡಿರುವ ಸಮಾಜಿಕ ಜಾಲತಾಣಗಳನ್ನು ಬಳಸುವ ಹಾದಿ ಒಳ್ಳೆಯ ದಿಕ್ಕಿನೆಡೆ ಸಾಗಬೇಕು ಎಂದು ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಪ್ರಸ್ತುತ ವಿದ್ಯಾಮಾನಗಳು ಮತ್ತು ಜವಾಬ್ದಾರಿ ಕುರಿತ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಅರಿವಿನ ಎಚ್ಚರ ಕುರಿತು ಅವರು ಮಾತನಾಡಿದರು.
ಸಾಮಾಜಿಕ ಜಾಲ ತಾಣಗಳು ನಮ್ಮನ್ನು ಬಹುಮಟ್ಟಿಗೆ ಆವರಿಸಿವೆ. ಅದರ ವೇದಿಕೆಗಳನ್ನು ಬಳಸದೇ ಇರುವವರನ್ನು ಹುಡುಕುವಂತಾಗಿದೆ. ಇದೇ ವೇಗದಲ್ಲಿ ನಕಲಿ ಖಾತೆಗಳು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿವೆ. ಶೇ.98 ಯುವಕರು ಸಾಮಾಜಿಕ ಜಾಲ ತಾಣಗಳ ದಾಸರಾಗಿದ್ದು ಆ ಪೈಕಿ ಶೇ.10 ಮಂದಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಅದರ ಮೂಲ ಹುಡುಕಿ ಚಿಕಿತ್ಸೆ ನೀಡಲಾಗದ ಸ್ಥತಿ ಬಂದಿರುವುದು ಆತಂಕಕಾರಿ ಎಂದರು.
ಭಾರತದ ಶೇ.75 ಕ್ಕೂ ಹೆಚ್ಚು ಮಂದಿ ಆನ್‌ಲೈನ್ ಅವಲಂಬಿಸಿದ್ದು ಶೇ.35ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲ ತಾಣಗಳ ಮೂಲಕ ಜೀವನ ಕ್ರಮ ಕಂಡುಕೊಳ್ಳುತ್ತಿದ್ದಾರೆ. ಶೇ.57ಕ್ಕೂ ಹೆಚ್ಚು ಮಂದಿ ಅಚಿತರ್ಜಾಲದ ಮೂಲಕ ಸ್ನೇಹ ಸಂಪಾದನೆ ತತೃಪ್ತಿ ನೀಡುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಅತಿಯಾದರೆ ಅಮೃತವೂ ವಿಷವಾಗಲಿ ಎಂಬುದನ್ನು ಮರೆಯಬಾರದು. ಆದರೆ ಸಾಮಾಜಿಕ ಜಾಲ ತಾಣಗಳು ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತಿವೆ ಎಂಬುದನ್ನೂ ಒಪ್ಪಿಕೊಳ್ಳಬೇಕಿದೆ ಎಂದು ಹೇಳಿದರು.


ಕಚ್ಚಾ ಬಾದಾಮ್ ಹಾಡಿದ ಬಡ್ಯಾಕರ್ ಅವರು ಗಂಗೂಲಿಯಿಂದ ಸನ್ಮಾನ ಸ್ವೀಕರಿಸಲು, ಮೈಸೂರಿನ ಲಲಿತ ಮಹಲ್ ಮುಂದೆ ವಯೋಲಿನ್ ನುಡಿಸುವ ಮ್ಯಾಜಿಕ್ ಬಾಬೂ ಜಗತ್ತಿಗೆ ಪರಿಚಯವಾಗಿದ್ದು, ಹಳ್ಳಿಯ ಹುಡುಗಿ ಬಾಲಿವುಡ್ ಚಿತ್ರಗಳಿಗೆ ಹಾಡುವಂತಾಗಲು ಸಾಮಾಜಿಕ ಜಾಲ ತಾಣಗಳು ಕಾರಣವಾಗಿವೆ. ಹೀಗೆ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ಅಪಾಯವಿಲ್ಲ. ಆದರೆ ಆನ್‌ಲೈನ್ ಕ್ಲಾಸ್ ಹೆಸರಲ್ಲಿ ದಿನವಿಡೀ ಸ್ಮಾರ್ಟ್ ಫೋನ್ ಬಳಕೆ ಮಾಡುವ ನಮ್ಮ ಮಕ್ಕಳು ಅದರಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸದಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.
ಪತ್ರಿಕೆಗಳು ಮತ್ತು ಉದ್ಯಮಶೀಲತೆ ವಿಷಯದ ಕುರಿತು ದಾವಣಗೆರೆ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಶಿವಕುಮಾರ್ ಕಣಸೋಗಿ ಮಾತನಾಡಿ, ಉದ್ಯಮಶಿಲತೆಯಲ್ಲಿ ಕ್ರಿಯಾಶೀಲ ವ್ಯವಸ್ಥೆ ನಿರ್ಮಾಣ ಮಾಡಬೇಕಿರುವ ಜವಾಬ್ದಾರಿ ಪತ್ರಿಕೋದ್ಯಮದ ಮೇಲಿದೆ. ಕಡಿಮೆ ಕರ್ಚಿನಲ್ಲಿ ಲಾಭ ಗಳಿಸಲು ಡಿಜಿಟಲ್ ತಂತ್ರಜ್ಞಾನ ಸುಲಭ ಮಾರ್ಗವಾಗಿದೆ. ತಂತ್ರಜ್ಞಾನದ ಬುದ್ದುವಚಿತಿಕೆ ಇದ್ದರೆ ಮಾದ್ಯಮವನ್ನು ಉದ್ಯಮವನ್ನಾಗಿ ಮಾಡಬಹುದು. ಸಾಂಪ್ರದಾಯಿಕ ಮುದ್ರಣ ಮಾಧ್ಯಮದ ಜತೆಗೆ ಈಚೆಗೆ ಪ್ರವರ್ಧಮಾನಕ್ಕೆ ಬಂದಿರುವ ಡಿಜಿಟಲ್ ಮಿಡಿಯಾ ಶ್ರಮ ರಹಿತ ಉದುಮಶಿಲತೆಗೆ ಸಹಕಾರಿಯಾಗಿದೆ. ಆದರೆ ನಮ್ಮ ಆಸಕ್ತಿ, ಅಭಿರುಚಿ ಇದಕ್ಕೆ ಪೂರಕವಾಗಿರುತ್ತದೆ. ಸೇವಾ ವಲಯದಲ್ಲಿದ್ದ ಪತ್ರಿಕೋಧ್ಯಮ ಈಗ ಲಾಭದಾಯಕ ಉದದಿಮೆಯಾಗಿದ್ದು ಜಾಗತಿಕ ಮಟ್ಟದಲ್ಲಿಯೂ ಪ್ರಭಾವ ಬೀರಿದೆ. ಡಿಜಿಟಲ್ ತಂತ್ರಜ್ಞಾನ ಪತ್ರಿಕೋಧ್ಯಮದ ಜತೆಗೆ ಎಲ್ಲ ಕ್ಷೇತ್ರದಲ್ಲೂ ಹಾಸು ಹೊಕ್ಕಾಗಿದೆ. ಊಟ ಮಾಡಲು ಕಷ್ಟವಾದರೆ ಅದಕ್ಕೂ ಯಂತ್ರ ಬರುವ ಪರವರ್ತನೆಯ ಕಾಲದಲ್ಲಿ ನಾವಿದ್ದೇವೆ. ಮಾಧ್ಯಮದ ಉದ್ಯಮ ಶಿಲತೆಗೆ ಡಿಜಿಟಲ್ ತಂತ್ರಜ್ಞಾನ ಅವಕಾಶಗಳ ಜತೆಗೆ ಹೊಸ ಸಮಸ್ಯೆಗಳನ್ನೂ ಸೃಷ್ಟಿಸಿವೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ ಅಧ್ಯಕ್ಷತೆ ವಹಿಸಿದ್ದರು., ತಾಲೂಕು ಸಂಘದ ಅಧ್ಯಕ್ಷ ಅ.ರ.ಸುಬ್ಬರಾವ್, ಪತ್ರಕರ್ತರಾದ ಶೀವಕುಮಾರ್, ಹೆತ್ತೂರು ನಾಗರಾಜ್, ಶಿವಣ್ಣ, ಮಹೇಶ್, ಹಿರಿಯ ಕಲಾವಿದ ಮೇಟಿಕೆರೆ ಹಿರಿಯಣ್ಣ ಇತರರಿದ್ದರು.

ಭಾವಲೋಕ ಸೃಷ್ಟಿಸಿದ ಕವಿಗೋಷ್ಠಿ
ಅರಕಲಗೂಡು: ಅಪ್ಪುಗೆಯಲ್ಲಿ ಅಮ್ಮ ತನ್ನ ಮಗಳಿಗೆ ಹೇಳುವ ಸಾಂತ್ವನ, ಬಾನು-ಭಾನುಗಳ ನಯ ಸಾಲೆನಿಸಿದರೂ ಕರಾಳ ಸತ್ಯ ದರ್ಶನ, ಹೆಣ್ಣಿನ ಆಂತರ್ಯ, ಹೆಣ್ಣಿನ ಬಣ್ಣನೆ, ವೇದನೆ-ಸಂವೇದನೆ, ಪ್ರಣಯ, ಹುಟ್ಟು-ಸಾವಿನ ಮರ್ಮ ಹೀಗೆ ನಿಲುಕಿದ ವಿಚಾರಗಳಿಗೆ ಕಾವ್ಯದ ರೂಪ ನೀಡಿದ ಕವಿಗಳು ತಮ್ಮ ಕವನಗಳ ಮೂಲಕ ಭಾವ ಲೋಕವನ್ನೇ ಸೃಷ್ಟಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದಲ್ಲಿ ನಡೆಯುತ್ತಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಹಿರಿಯ, ಕಿರಿಯ ಕವಿಗಳು ಸಾಹಿತ್ಯಾಸಕ್ತರ ಹ್ಲದಯ ಭಾವಕ್ಕೆ ಲಗ್ಗೆ ಇಟ್ಟರು.
ಸಾಮರಸ್ಯದ ಸಂದೇಶ, ಕನ್ನಡ ಪ್ರೇಮ, ಯುವ ಜಾಗೃತಿ, ಮೊಬೈಲ್ ಉಪಯೋಗ ಮತ್ತು ದುರ್ಬಳಕೆ, ಪ್ರೇಮಿಗಳ ಪಿಸಿ ಮಾತುಗಳ ಮಾಧುರ್ಯ, ಬದಲಾವಣೆಯ ಅನಾವರಣ, ಬಿದಿರ ಬೆಡಗು, ಬಡ ಹೆಣ್ಣು ಮಕ್ಕಳ ಕರಾಳ ಬದುಕು, ಆತ್ಮಹತ್ಯೆ ಹೀಗೆ ಹಲವು ವಿಷಯಗಳ ಕುರಿತು ಕವಿಗಳು ಕವನಗಳನ್ನು ಮಂಡಿಸಿದರು.
ಪತ್ರಿಕೋಧ್ಯಮ ಅದ್ಯಾಪಕಿ ಡಾ.ಭವ್ಯಾ ನವೀನ್ ಅವರು ಆಶಾಯ ನುಡಿಗಳನ್ನಾಡಿ,. ಆರೋಗ್ಯಕರ ವಾತಾವರಣ ಸೃಷ್ಟಿಸಿ ಬೆಳೆಸುವಂತಾಗಬೇಕಿರುವ ಸಾಹಿತ್ಯವು ಆಂತರ್ಯದ ಭಾಷೆಯಾಗಿದೆ. ಸಾಹಿತ್ಯದ ಬಾಗವಾಗಿರುವ ಕವನಗಳು ಭಾಷಾ ಪ್ರೌಢಿಮೆ, ಲಾಲಿತ್ಯ, ಲಯಗಳ ಸಮ್ಮಿನವಾಗಬೇಕೇ ಹೊರತು ಪ್ರಾಸ ಹುಡುಕಿ ಹೋಗುವ ಸಾಲುಗಳಾಗಬಾರದು. ದಾಖಲೀಕರಣ ಕಾವ್ಯದ ಮೂಲ ಲಕ್ಷಣವಾಗಿದೆ. ರಾಜರು, ರಾಜಕಾರಣಿಗಳ ಕತೆ ಹೇಳಲು ಇತಿಹಾಸವಿದೆ. ಆದರೆ ನಮ್ಮ ನೋವು, ಸಂತೋಷ, ಅನುಭವಗಳನ್ನು ಸಾಹಿತ್ಯದ ಮೂಲಕ ಕೇಳಬಹುದು. ಇದೇ ಕಾರಣಕ್ಕೆ ಸಾಹಿತ್ಯವನ್ನು ಸಾಮಾನ್ಯ ಜನರ ಇತಿಹಾಸ ಎಂದು ಹೇಳಲಾಗುತ್ತದೆ ಎಂದರು.

ಕವನ ವಾಚಿಸಿದರು:
ಜ್ಯೋತಿ ಹೆರಗು, ಕೆ.ಪಿ.ಮಹದೇವಿ, ಗೊರೂರು ಅನಚಿತರಾಜು, ಧರಣೇಶ್, ಪ್ರಶಾಂತ್ ಹೊಳೆಹೊನ್ನೂರು, ಹರ್ಷಿಯಾ ಬಾನು, ಎಂ.ಕುಸುಮಾ, ಯಶೋಧ, ಎಂ.ಜೆ.ಅಣ್ಣಮ್ಮ, ಎಚ್.ಎಸ್.ಅರ್ಚನಾ, ಜಯಂತಿ ಚಂದ್ರಶೇಖರ್, ಸುಜಲಾದೇವಿ, ಎಂ.ಎಸ್.ಮಾರುತಿ, ಪರಮೇಶ್ ಮಡಬಲು, ಪಿಡಿಒ ಗಿರೀಶ್ ಕುಮಾರ್, ದರ್ಶಿನಿ, ಮಧು ಕೆ.ದೇವರಾಜ್, ಆರ್.ಬಿ.ರಂಗನಾಥ್, ರೂಪಾ ಮಂಜುನಾಥ್ ಕವನ ವಾಚಿಸಿದರು.
ಹಿರಿಯ ಸಾಹಿತಿ ಸುಬ್ಬು ಹೊಲೆಚಿರ್ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಕುಮಾರ್, ಬೊಮ್ಮೇಗೌಡ, ಎಚ್.ಎಸ್.ಸ್ಮಿತಾ, ನಾಗಮಣಿ, ಸವಿತಾ ಶ್ರಿಧರ್ ಇತರರಿದ್ದರು.

LEAVE A REPLY

Please enter your comment!
Please enter your name here