ಹಾಸನ / ಬೇಲೂರು : ಇಂದು (3 ಮೇ 2021 ಗುರುವಾರ) ಅರೇಹಳ್ಳಿಯ ಕೋವಿಡ್ ಸೆಂಟರಿನಲ್ಲಿ
ಕೆ.ಎಸ್. ಲಿಂಗೇಶ್ (ಸ್ಥಳೀಯ ಶಾಸಕರು) ಎರಡು ಕಾನ್ಸಂಟ್ರೇಟರ್ ಗಳನ್ನು ಕೋವಿಡ್ ಸೆಂಟರಿಗೆ ನೀಡಿ ಆಕ್ಸಿಜನ್ ಸಿಲಿಂಡರ್’ಗಳನ್ನು ಒದಗಿಸುವ ವಾಗ್ದಾನ ಮಾಡಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್ ರವರು ಮಾತನಾಡಿ
🌳🌳🌳 “ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯು (ಹೆಚ್ ಅರ್ ಎಸ್ ಸಂಸ್ಥೆ) ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವುದರ ಜೊತೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾ ಆರೋಗ್ಯ ಸೇವೆಗೈಯುತ್ತಿರುವುದನ್ನು ಕಂಡು ನಾವು ಪ್ರಭಾವಿತರಾಗಿದ್ದೇವೆ, ಜಿಲ್ಲೆಯಾದ್ಯಂತ ಈ ಸೇವೆಯನ್ನು ವ್ಯಾಪಕಗೊಳಿಸಿ, ಇತರರಿಗೂ ಇದು ಮಾದರಿಯಾಗಲೆಂದು ಇದರ ಪ್ರಚಾರ ನಡೆಸುತ್ತೇವೆ.
ಇದನ್ನು ನೋಡಿ ಎಲ್ಲಾ ಎನ್.ಜಿ.ಒ. ಸ್ಥಳೀಯ ಸಂಘ ಸಂಸ್ಥೆಗಳು ಮುಂದೆ ಬಂದು ಕೋವಿಡ್ ಸೆಂಟರ್ ಗಳಲ್ಲಿ ಕೆಲಸ ನಿರ್ವಹಿಸುವಂತಾಗಲಿ. ಸ್ವಯಂ ಸೇವಾ ಸಂಸ್ಥೆಗಳು ಸರಕಾರದ ಸಹಯೋಗದಿಂದ ಕೆಲಸ ಮಾಡಲು ಮುಂದಾದರೆ ಸರಕಾರದ ಮೇಲಿರುವ ಹೊರೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಬಹುದು. ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರವಿಕುಮಾರ್ ಡಿ ಹೆಚ್ ಒ ಡಾ|| ವಿಜಯ್, ತಹಸೀಲ್ದಾರ್ ನಟೇಶ್,ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಡಾ||ನರಸೇಗೌಡ, ಡಾ||ಮಮತಾ, ನಟರಾಜ್ ರತ್ನಮ್ಮ ಜಿಲ್ಲಾ ಪಂಚಾಯತ್ ಸದಸ್ಯರು, ಪಿ ಡಿ ಒ ಸಂತೋಷ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, 🌳🌳🌳🌳ಹೆಚ್. ಆರ್. ಎಸ್ ನ ವಲಯ ಸಂಚಾಲಕರಾದ ಮುಜೀಬುರ್ರಹ್ಮಾನ್, ಅಸಿಸ್ಟೆಂಟ್ ಕ್ಯಾಪ್ಟನ್ ಅಬ್ರಾರ್ ಅಹ್ಮದ್, ಹೆಚ್ ಆರ್ ಎಸ್ ಗ್ರೂಪ್ ಲೀಡರ್ ಹೈದರ್ ಅಲಿ ಮತ್ತು ಸದಸ್ಯರು ಉಪಸ್ಥಿತರಿದ್ದರು.