ಹಾಸನ ಸೆ : ಕಂದಾಯ ಸಚಿವರಾದ ಆರ್. ಅಶೋಕ್ ಅವರು ಸೆ.26 ರಿಂದ ಸೆ.28ರವರೆಗೆ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಲಿರುವರು.
ಸೆ.26 ರಂದು ಮ.12 ಗಂಟೆಗೆ ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ನಂತರ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಚಿವರು ಹಾಸನದಲ್ಲಿ ವಾಸ್ತವ್ಯ ಮಾಡುವರು.
ಸೆ. 27 ರಂದು ಮ.12 ಗಂಟೆಗೆ ಬೇಲೂರಿನ ಚೆನ್ನಕೇಶವ ದೇವಸ್ಥಾನ ದಾಸೋಹ ಭವನದಲ್ಲಿ ಬೇಲೂರು ತಾಲ್ಲೂಕು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವ ಸಚಿವರು ಅಂದು ಮ.2.45 ಕ್ಕೆ ಹಾಸನಕ್ಕೆ ಆಗಮಿಸಿ ಸ್ಥಳೀಯ ಕಾರ್ಯ ಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು.
ಸೆ.28 ರಂದು ಮ.12 ಗಂಟೆಗೆ ಹಾಸನದಿಂದ ಬೆಂಗಳೂರಿಗೆ ತೆರಳುವರು.
#rashok #Karnatakagovt #hassan #hassannews