72 ವರ್ಷಗಳಿಂದ ಸ್ಥಳಿಯ ರೈತ ಬೆಳೆಗಾರರಿಗೆ ಸೌಲಭಗಳನ್ನು ಒದಗಿಸುತ್ತಾ ಬಂದಿರುವ ಸಂಘ

0

ಸಕಲೇಶಪುರ : ವ್ಯವಸಾಯೋತ್ಪನ್ನ ಮಾರಾಟ ಸಂಘದ ಕಚೇರಿಯಾಗಿ ಗೋದಾಮನ್ನು ಅಕ್ಟೋಬರ್ 29ರಂದು ಉದ್ಘಾಟಿಸಲಾಗುವುದು ಎಂದು ಸಂಘದ ಅಧ್ಯಕ್ಷ ಲೋಹಿತ್ ಕೌಡಳ್ಳಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಘವು 72 ವರ್ಷಗಳ ಸ್ಥಳಿಯ ರೈತ ಬೆಳೆಗಾರರಿಗೆ ಸೌಲಭಗಳನ್ನು ಒದಗಿಸುತ್ತಾ ಯಶಸ್ವಿಯಿಂದ ಮುನ್ನಡೆಯುತ್ತಿದೆ ಕೇವಲ 200 ಷೇರುದಾರರಿಂದ ಪ್ರಾರಂಭವಾದ ಸಂಘ ಪ್ರಸ್ತುತ 1300 ಷೇರುದಾರರನೂಳಗೊಂಡಿದೆ ರೈತರಿಗೆ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಸಾವಯುವ ಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದೆ ಸಂಘವು ವ್ಯಾಪಾರ ವಹಿವಾಟು ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದೆ.ಕೊರೋನ ಸಮಯದಲ್ಲಿ ವಾರಿಯರ್ ಗಳಾಗಿ ಕರ್ತವ್ಯ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದೇವೆ.ಕೋವಿಡ್ ಸಮಯದಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅವರು ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದ್ದೇವೆ ಎಂದರು.

2 ವರ್ಷದ ನನ್ನ ಅಧ್ಯಕ್ಷತೆ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ.ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದೆ ಬರುವ ಅಧ್ಯಕ್ಷರಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಸಹಕಾರ ಸಂಘದ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚು ಗೊಳಿಸುವ ದೃಷ್ಟಿಯಿಂದ ವಿಸ್ತಾರವಾಗಿರುವ ಸಂಘದ ಸ್ವಂತ ಕಟ್ಟಡಕ್ಕೆ ಕಛೇರಿ ಮತ್ತು ಗೋದಾಮನ್ನು ಸ್ಥಳಾಂತರಿಸಲಾಗುತ್ತಿದೆ ಅ 29 ರ ಶುಕ್ರವಾರ ಬೆಳಗ್ಗೆ 10.30 ಕ್ಕೆ ವಾರ್ಷಿಕ ಮಹಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.

LEAVE A REPLY

Please enter your comment!
Please enter your name here