ಹಾಸನ: ಸರ್ಕಾರದ ಆದೇಶದಂತೆ ಕೆಎಂಎಫ್ ವತಿಯಿಂದ ರೈತರಿಂದ ನೇರವಾಗಿ ಮೆಕ್ಕೆಜೋಳವನ್ನು ಖರೀದಿಸುತ್ತಿದ್ದು ಫೆ.17 ರಿಂದ ನೊಂದಾಯಿಸಿದ ರೈತರಿಗೆ ಪ್ರತಿ ಕ್ವಿಂಟಾಲ್ಗೆ 1870 ರೂ. ನಂತೆ ಖರೀದಿಸುವುದಾಗಿ ಪಶು ಆಹಾರ ಕಾರ್ಖಾನೆ ನಿರ್ದೇಶಕ ಡಿ. ವಿವೇಕ್ ತಿಳಿಸಿದ್ದಾರೆ.
ಈ ಹಿಂದೆ ಪ್ರತಿಕ್ವಿಂಟಾಲ್ಗೆ ಸರ್ಕಾರದ ಆದೇಶದಂತೆ ಪ್ರತಿ ಕ್ವಿಂಟಾಲ್ಗೆ 1660 ರೂ.ನಂತೆ ಖರೀದಿಸಲಾಗುತ್ತಿತ್ತು. ಪ್ರಸ್ತುತ ಸರ್ಕಾರ ನೀಡಿದ ಇತ್ತೀಚಿನ ಆದೇಶದನ್ವಯ ಫೆ.17 ರಿಂದ ನೊಂದಾಯಿಸಿ ಮೆಕ್ಕೆ ಜೋಳ ನೀಡುವ ರೈತರಿಂದ ಪ್ರತಿ ಕ್ವಿಂಟಾಲ್ ಗೆ ರೂ.1870 ನಂತೆ ನೇರವಾಗಿ ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೆಕ್ಕೆಜೋಳ ಬೆಳೆದಿರುವ ರೈತರ ನೋಂದಣಿ ಪ್ರಕ್ರಿಯೆಯನ್ನು ಫೆ. 17 ರಿಂದ ಪ್ರಾರಂಭಿಸಲಾಗಿದೆ. ಪ್ರತಿ ರೈತರಿಂದ ಗರಿಷ್ಟ 100 ಕ್ವಿಂಟಾಲ್ ಮೆಕ್ಕೆ ಜೋಳ ಸರಬರಾಜಿಗೆ ಸೀಮಿತಗೊಳಿಸಿದೆ. ಮಧ್ಯವರ್ತಿಗಳಿಗೆ ಅವಕಾಶ ఇల్ల ರೈತರೇ ನೇರವಾಗಿ ಮೆಕ್ಕೆಜೋಳವನ್ನು ಸರಬರಾಜು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಅಗತ್ಯ ಮಾಹಿತಿ ಪಡೆಯಬಹುದಾಗಿ ದೂರವಾಣಿ 0:08172-243080/243171/9448957549) ಸಂಪರ್ಕಿಸಬಹುದು.