ನಾಳೆ ವಿದ್ಯುತ್ ವ್ಯತ್ಯಯ ಅರಸೀಕೆರೆ : ಕವಿಪ್ರನಿನಿ ಅರಸೀಕೆರೆ ಉಪವಿಭಾಗ ವ್ಯಾಪ್ತಿಯ ಗೇರುಮರ 110/11 ಕೆ.ವಿ ವಿ.ವಿ. ಕೇಂದ್ರ ಸ್ಟೇಷನ್ನಲ್ಲಿ ಮಾ. 16 ರಂದು ತುರ್ತು ನಿರ್ವಹಣಾ ಕಾರ್ಯವನ್ನು ಕೈಗೊಂಡಿದ್ದು ಸದರಿ ದಿನದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಗೇರುಮರ ವಿ.ಎ.ಕೇಂದ್ರದಿಂದ ವಿತರಣೆಯಾಗುವ 11 ಕೆ.ವಿ ಮಾರ್ಗಗಳಾದ ಡಿ. ಕಲ್ಲಹಳ್ಳಿ, ಗೇರುಮರ, ಎಂ.ಎನ್. ಕೊಪ್ಪಲು, ಸಿಂಗನಹಳ್ಳಿ, ಮಾದಪುರ, ಗೋವಿಂದಪುರ, ಅಣ್ಣಾಯಕನಹಳ್ಳಿ, ಕರಗುಂದ, ಕಲ್ಯಾಡಿ, ಉಂಡಿಗನಾಳು, ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಹಾಸನ: 66/11 ಕೆ.ವಿ ಸಕಲೇಶಪುರ, ಅರೇಹಳ್ಳಿ, ಹಾನುಬಾಳು, ಮತ್ತು ಮಗ್ಗೆ ವಿ.ವಿ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಮಾ. 16 ರ ಬೆಳಗ್ಗೆ 10 ಗಂಟೆ ಯಿಂದ ಸಂಜೆ 05 ಗಂಟೆಯ ವರೆಗೆ ಚನ್ನಾಪುರ, ಸಕಲೇಶ ಪುರ, ಅರೇಹಳ್ಳಿ, ಹಾನು ಬಾಳು, ಹಾಗೂ ಸುತ್ತಮು ತಲಿನ ವಿದ್ಯತ್ ಸರಬರಾಜಾ ಗುವ ಪ್ರದೇಶಗಳ ವಿದ್ಯತ್ ಸ್ಥಾವರಗಳಿಗೆ ವಿದ್ಯತ್ ವ್ಯತ್ಯಯ ಉಂಟಾಗಲಿದೆ ಸಾರ್ವಜ ನಿಕರು ಸಹಕರಿಸಲು ಈ ಮೂಲಕ ತಿಳಿಸಲಾಗಿದೆ.