ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಸಕಲೇಶಪುರಕ್ಕೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸಳ್ಳಿ ಗುಡ್ಡಕ್ಕೆ ಪ್ಯಾರಾ ಗ್ಲಾಯ್ಲಡಿಂಗ್ ಹಾರಾಟವನ್ನು ಇಂದು ಹೊಸ ಹಳ್ಳಿ ಗುಡ್ಡದಲ್ಲಿ ಆರಂಭ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹೆಚ್ ಕೆ ಕುಮಾರ ಸ್ವಾಮಿ ಮಾತನಾಡಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಗಳು ಪೂರಕ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಈಗ ನೀಡುತ್ತಿರುವ ಅನುದಾನ ಏನೂ ಕೂಡ ಸಾಲದು. ಮಲೆನಾಡಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಇನ್ನಷ್ಟು ಅನುದಾನ ಬೇಕು ಎಂದರು.
ಇಲ್ಲಿನ ರಸ್ತೆಯನ್ನು ಶೀಘ್ರದಲ್ಲಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ ಶಾಸಕರು, ಪ್ಯಾರಾ ಗ್ಲಾಯ್ಡಿಂಗ್ ವ್ಯವಸ್ಥೆ ಅಭಿವೃದ್ಧಿಯ ಜೊತೆಗೆ ಸುರಕ್ಷತೆ ಬಗ್ಗೆ ಕೂಡ ಇಲಾಖೆ ಗಮನ ಹರಿಸಬೇಕು. ಈಗ ಫಿಕ್ಸ್ ಮಾಡಿರುವ ಮೊತ್ತ ಗ್ರಾಮೀಣ ಜನರಿಗೆ ಬಹಳ ದುಬಾರಿ ಆಗಿದೆ. ಅದನ್ನು ಕಡಿಮೆ ಎಂದು ಮನವಿ ಮಾಡಿದರು.
ಅರಣ್ಯ ಇಲಾಖೆ ಸಂರಕ್ಷಣೆ ಅಧಿಕಾರಿಗಳಾದ ಬಸವರಾಜ್, ಮಾತನಾಡಿ ಸ್ಥಳೀಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕು ಎಂಬ ನಿಟ್ಟಿನಲ್ಲಿ ಆರಂಭ ಮಾಡಲಾಗಿದೆ.
ಸ್ಥಳೀಯ ಜೀಪ್ಗಳನ್ನು ಗುಡ್ಡಕ್ಕೆ ಕಳುಹಿಸುವ ಮೂಲಕ ಸ್ಥಳೀಯರಿಗೂ ಆದಾಯ ನೀಡುವ ವ್ಯವಸ್ಥೆ ಆಗಬೇಕು. ಮೇಲ್ಗಡೆ ದೇವಸ್ಥಾನ ಇದೆ. ಅದರ ಪಾವಿತ್ರ್ಯತೆ ಕಾಪಾಡಬೇಕು.
4 ಗ್ಲಾಯ್ಡರ್ ಗಳನ್ನು ಇಲ್ಲಿ ಹಾಕಲಾಗುತ್ತೆ. ಪ್ರವಾಸಿಗರ ಉತ್ಸಾಹವನ್ನು ಹೆಚ್ವ್ಹಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಈ ವ್ಯವಸ್ಥೆ ನವೆಂಬರ್ ನಿಂದ ಮೇವರೆಗೆ ನಡೆಯಲಿದೆ.
ಜಿಲ್ಲಾಧಿಕಾರಿ ಅರ್ಚನಾ, ಉಪ ವಿಭಾಗಧಿಕಾರಿ ಅನ್ ಮೋಲ್ ಜೈನ್, ತಹಸೀಲ್ದಾರ್ ಅರ್ಚನಾ ಮಾಜಿ ತಾಪಂ ಸದಸ್ಯರು ಚಂಚಲ ಕುಮಾರ ಸ್ವಾಮಿ, ತಾ ಪ. ಕಾರ್ಯ ನಿರ್ವಹಣೆ ಅಧಿಕಾರಿಗಳಾದ ಡಾ. ವೆಂಕಟೇಶ್, ವಳಲಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ರೇಣುಕಾ, ಪಿ ಡಿ ಒ ಸುರೇಶ್, ಉಪಸ್ಥಿತರಿದ್ದರು
ಪ್ರಥ್ವಿ ಮಾಹಿತಿ ನೀಡಿ 10 ಪ್ಯಾರಾ ಗ್ಲಿಡಿಂಗ್ ಇಲ್ಲಿ ಇದ್ದು ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.