ಹಾಸನ ನಗರದ 80ಫೀಟ್ ರಸ್ತೆಯಲ್ಲಿ ವೀಲಿಂಗ್ , ಸೈಲೆನ್ಸರ್ ಬದಲಾವಣೆ ಯರ್ರಾ ಬಿರ್ರಿ ಸಂಚಾರ : 22 ಬೈಕ್ ವಶ
ಹಾಸನ : ನಗರದ 80ಫೀಟ್ ಅಡಿ ರಸ್ತೆ ಹಾಗೂ ಇತರೆಡೆ ವೀಲಿಂಗ್ ಮಾಡುತ್ತಿದ್ದ ಪುಂಡರು , ಸೈಲೆನ್ಸರ್ ಬದಲಾವಣೆ ಮಾಡಿಕೊಂಡು ಸ್ಟೇಚ್ಛಾಚಾರವಾಗಿ ಓಡಾಡುತ್ತಿದ್ದ ಬರೋಬ್ಬರಿ 22 ಬೈಕ್‌ಗಳನ್ನು ಸಂಚಾರಿ ಪೊಲೀಸರು ಸೀಜ್ ಮಾಡಿದ್ದು
ಈ ಬೈಕ್‌ಗಳ ಸವಾರರು ಸೈಲೆನ್ಸರ್‌ಗಳನ್ನು ಕರ್ಕಶ ಶಬ್ದ ಬರುವ ರೀತಿಯಲ್ಲಿ ಬದಲಾಯಿಸಿ ಕೊಂಡು ತಮಗಿಷ್ಟ ಬಂದಂತೆ ಮನಸೋ ಇಚ್ಛೆ ಓಡಾಡಿ ಸ್ಥಳೀಯ ನಾಗರಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದರು .,
ಈ ಬಗ್ಗೆ ವ್ಯಾಪಕ ದೂರು ಸಾರ್ವಜನಿಕ ವಲಯದಿಂದ ಕೇಳಿ ಬಂದ ಹಿನ್ನೆಲೆ, ಡಿವೈಎಸ್‌ಪಿ ಉದಯಭಾಸ್ಕರ್ ಮಾರ್ಗದರ್ಶನದಲ್ಲಿ ಸಿಪಿಐ ರೇಣುಕಾ ಪ್ರಸಾದ್, ಪಿಎಸ್‌ಐ ಟ್ರಾಫಿಕ್ -1 ಜಿತೇಂದ್ರ, ಪಿಎಸ್‌ಐ ಟ್ರಾಫಿಕ್ -2 ಆಕಾಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಷ್ಟೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕರ್ಕಶ ಸದ್ದು ಹೊರ ಹಾಕುತ್ತಿದ್ದ ಸೈಲೆನರ್‌ಗಳನ್ನು ತೆರವುಗೊಳಿಸಿ ಸಾರ್ವಜನಿಕ ಪ್ರದರ್ಶನಮಾಡಿ , ಉಪಯೋಗಿಸದಂತೆ ತಿಳಿ ಹೇಳಿದ್ದಾರೆ . ಅಲ್ಲದೆ, ಬೈಕ್‌ಗಳ ನಂಬರ್ ಪ್ಲೇಟ್ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ತಪ್ಪಿದ್ದವರಿಗೆ ದಂಡ ವಿಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
hassanpolice hassannewstoday