ಗುಂಡೇಟಿಗೆ ಹತ್ಯೆಗೀಡಾದ ಯುವಕ ನವೀನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತ

0

ಹಾಸನ : ಮೀನು ಹಿಡಿಯಲು ಹೋಗಿದ್ದ ವೇಳೆ ಅಪರಿಚಿತರಿಂದ ಗುಂಡಿನ ದಾಳಿ  , ಸ್ಥಳದಲ್ಲೇ ಓರ್ವ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ , ಘಟನೆ ; ಹಾಸನ ಜಿಲ್ಲೆಯ , ಸಕಲೇಶಪುರ ತಾಲ್ಲೂಕಿನ, ಯಸಳೂರು ಹೋಬಳಿ, ತಂಬಲಗೇರಿ ಗ್ರಾಮದಲ್ಲಿ ತಡರಾತ್ರಿ ನಡೆದಿದ್ದು , ತಂಬಲಗೇರಿ ಗ್ರಾಮದ ನವೀನ್ ಅಲಿಯಾಸ್

ಪಚ್ಚಿ (39) ಮೃತ ಯುವಕ, ಈ ನವೀನ್, ದಯಾನಂದ ಪದ್ಮನಾಭ, ರಾಜಾಚಾರಿ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ , ನದಿಯ ದಡದಲ್ಲಿ ಮೀನನ್ನು ಹಿಡಿಯಲು ಬೆಂಕಿ ಹಾಕಿಕೊಂಡು ಕೂತಿದ್ದ ಸಂದರ್ಭದಲ್ಲಿ  , ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ , ನವೀನ್ ಸ್ಥಳದಲ್ಲೇ ಗುಂಡಿಗೆ ಬಲಿಯಾಗಿದ್ದು , ದಯಾನಂದ ಹಾಗೂ ಪದ್ಮನಾಭ ಎಂಬುವವರಿಗೆ

ಗಂಭೀರ ಗಾಯಗಳಾಗಿವೆ , ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿದ್ದು , ಅದೃಷ್ಟವಶಾತ್ ರಾಜಾಚಾರಿ ಎಂಬ ವ್ಯಕ್ತಿ ಸಂಪೂರ್ಣ ಪಾರಾಗಿದ್ದಾನೆ , ಹತ್ಯೆಗೀಡಾದ ಯುವಕ ನವೀನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತ , ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ

ಗುರುತಿಸಿಕೊಂಡಿದ್ದ ನವೀನ್ ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದು , ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಏಕೆ ನಡೆದಿದೆ ಎಂದು ಸಂಕ್ಷಿಪ್ತ ತನಿಖೆ ನಂತರವಷ್ಟೇ ತಿಳಿಯಲಿದೆ .

LEAVE A REPLY

Please enter your comment!
Please enter your name here