ಬೇಲೂರಿನ ಜೆಪಿನಗರದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಅಪರಹಣ ಪ್ರಕರಣ ಬಯಲು

0

ಹಾಸನ : ದುಬೈನ ಏಜೆಂಟ್‌ ಒಬ್ಬನಿಂದ ಚಿನ್ನದ ಗಟ್ಟಿ ಪಡೆದಿದ್ದ ಸೈಯ್ಯದ್‌ ಸೈಫ್‌ ಎಂಬಾತ , ಅದನ್ನು ಮುಂಬೈನ ವ್ಯಕ್ತಿಗೆ ತಲುಪಿಸಬೇಕಿತ್ತು , ತಲುಪಿಸದೇ, ತನ್ನ ಉಡುಪಿಯ ಸ್ನೇಹಿತನಾದ ಸಾಜಿದ್‌ಗೆ ಕೊಟ್ಟಿದ್ದರು. ಅದಕ್ಕೆ ಸಾಜಿದ್‌ನಿಂದ ಸೈಯ್ಯದ್‌ ಸೈಫ್‌ ₹80 ಸಾವಿರ ಪಡೆದಿದ್ದರು. ಸೈಯ್ಯದ್‌ ಸೈಫ್‌ ಉಡುಪಿಯ ಸಾಜಿದ್ ಮನೆಯಲ್ಲಿದ್ದಾಗ ಎರಡು ಕಾರುಗಳಲ್ಲಿ ಬಂದ 9 ಆರೋಪಿಗಳು, ಸೈಯ್ಯದ್‌ ಸೈಫ್‌ರನ್ನು ಅಪಹರಿಸಿದ್ದರು. , ಅಪಹರಣ ಕೋರರು ಬೇಲೂರತ್ತ ಬರುವಾಗ ,

ಬೇಲೂರಿನ ಜೆಪಿನಗರದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ನಾಗರಾಜ್‌ (ASI), ವಾಹನ ತಡೆದು ತಪಾಸಣೆ ನಡೆಸಿದ್ದು, ಈ ಸಂದರ್ಭದಲ್ಲಿ ಅಪಹರಣ ಕೃತ್ಯ ಬೆಳಕಿಗೆ ಬಂದಿದೆ , ಪ್ರಕರಣ ಏನು ಎಂದು ವಿಚಾರಿಸಲಾಗಿ ; ಚಿನ್ನದ ಗಟ್ಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಅಪಹರಿಸುತ್ತಿದ್ದ 9 ಜನರನ್ನು ಬೇಲೂರು ಠಾಣೆ ಪೊಲೀಸರು

ಬಂಧಿಸಿದ್ದಾರೆ. ಬಂಧಿತರಿಂದ 2.03 ಲಕ್ಷ ₹ ನಗದು, ಎರಡು ಕಾರು, 20 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ., ಹಾಗೂ ಕೊಲ್ಕತ್ತದ ಅಮಿನ್‌ ಉಲ್ಲಖ್‌, ಬೆಂಗಳೂರಿನ ಅಜಂ, ಸುಲೇಮಾನ್‌, ಮಹಮ್ಮದ್‌ ಹನೀಫ್‌, ಸೈಯ್ಯದ್‌ ಮುಜಾಹಿದ್‌, ಮುಂಬೈನ ಇಬ್ರಾಹಿಂ, ನದೀಮ್‌, ಮೊಹಮ್ಮದ್‌ ಸೌದ್‌, ಜಾವೆದ್‌ ಅಹ್ಮದ್‌ ಬಂಧಿತ ಆರೋಪಿಗಳು. ಸೈಯ್ಯದ್‌ ಸೈಫ್‌ ಎಂಬುವವರನ್ನು ರಕ್ಷಿಸಲಾಗಿದೆ. ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here