ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಮೂಗಲಿ ಗ್ರಾಮದಲ್ಲಿ ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಕೊಲೆಗೈದ ಘಟನೆ ನಡೆದಿದೆ. , ಮೂಗಲಿ ಗ್ರಾಮದ ಉಮೇಶ ಎಂಬಾತನ ಪತ್ನಿ ವಿದ್ಯಾ (24) ಕೊಲೆಯಾದ ದುರ್ದೈವಿಯಾಗಿದ್ದಾರೆ . ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ವಿದ್ಯಾ ತನ್ನ ತವರು ಮನೆಯಾದ ಶಾಂತಿಗ್ರಾಮದ ಬಳಿಯ ದಾಸನಹಳ್ಳಿಗೆ ತೆರಳಿದ್ದರು. ಶನಿವಾರ ಸಂಜೆ ಆರೋಗ್ಯ ಸುಧಾರಿಸಿಕೊಂಡು ಗಂಡನ ಮನೆಯದ ಮೂಗಲಿಗೆ ವಿದ್ಯಾ ಬಂದಿದ್ದಳು.
ಶನಿವಾರ ರಾತ್ರಿ ಗಂಡ ಹೆಂಡತಿ ಇಬ್ಬರೂ ಮಾತನಾಡಿಕೊಂಡು ಊಟ ಮಾಡಿ ಮಲಗಿದ್ದರು ಆದರೆ
ಭಾನುವಾರ ಮುಂಜಾನೆ ಶವದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ. ಪತಿ ಉಮೇಶ ಹೆಂಡತಿ ಮೃತಪಟ್ಟಿರುವ ವಿಷಯವನ್ನು ಹೆಂಡತಿಯ ಮನೆ ಕಡೆ ಅವರಿಗೆ ತಿಳಿಸಿದ್ದಾನೆ. ಮೂಗಲಿ ಗ್ರಾಮಕ್ಕೆ ಬಂದ ವಿದ್ಯಾ ಸಂಬಂಧಿಕರು ಶವವನ್ನು ನೋಡಿ ಪರಿಶೀಲನೆ ನಡೆಸಿದ ನಂತರ ಇದು ಸಾಮಾನ್ಯವಾಗಿ ನಮ್ಮ ಮಗಳು ಮೃತ ಪಟ್ಟಿಲ್ಲ ಪತಿ ಉಮೇಶ ಕತ್ತು ಹಿಸುಕಿ ಕೊಲೆಗೈದಿದ್ದಾನೆ, ವಿದ್ಯಾಳ ಕುತ್ತಿಗೆ ಭಾಗದಲ್ಲಿ ಚರ್ಮ ಕಿತ್ತು ಬಂದಿರುವ ಗಾಯಗಳಾಗಿದ್ದು ಪತಿ ಉಮೇಶ ನನ್ನ ಮಗಳನ್ನು ಕೊಲೆಗೈದಿದ್ದಾನೆ ಎಂದು
ವಿದ್ಯಾ ಪೋಷಕರು ಆರೋಪಿಸಿದ್ದಾರೆ. , ಸ್ಥಳಕ್ಕೆ ಗ್ರಾಮಾಂತರ ಠಾಣಾ ಪಿಎಸ್ಐ ಬಸವರಾಜ್ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದು ಪೊಲೀಸರ ತನಿಖೆಯಿಂದ ಸತ್ಯ ಹೊರ ಬೀಳಬೇಕಿದೆ.