ಸಂಚಾರ ದಟ್ಟಣೆ ತಪ್ಪಿಸಲು ಹಾಸನ – ಬೇಲೂರು ರಸ್ತೆ ಶೀಘ್ರದಲ್ಲೇ ಫೋರ್ ವೇ

0

ಹಾಸನ/ದೆಹಲಿ : ಸಂಚಾರ ದಟ್ಟಣೆ ತಪ್ಪಿಸಲು ಹಾಸನ – ಬೇಲೂರು ರಸ್ತೆಯನ್ನು ವಿಸ್ತರಣೆ ಮಾಡಬೇಕೆಂಬುದು ಅಲ್ಲಿನ ಸ್ಥಳೀಯ ಪ್ರಯಾಣಿಕರ ಬಹುಕಾಲದ ಬೇಡಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ., ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ 373ರ ಬೇಲೂರಿನಿಂದ ಹಾಸನ ವರೆಗಿನ ವಿಭಾಗದಲ್ಲಿ ರಸ್ತೆ ವಿಸ್ತರಣೆಗಾಗಿ ₹698.08 ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾನುವಾರ ಟ್ವೀಟ್ ಮೂಲಕ ಸುದ್ದಿ ಹೇಳಿದ್ದಾರೆ. , 2022-23ರ ಯೋಜನೆ ಅಡಿಯಲ್ಲಿ ಈ ಹೆದ್ದಾರಿಯ ವಿಸ್ತರಣೆ ಕಾಮಗಾರಿಯನ್ನು

ಕಾರ್ಯಗತಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ .

ಈ ರಸ್ತೆಯಲ್ಲಿ ಸಾಕಷ್ಟು ನೆರಳು ಗಾಳಿ ನೀಡುತ್ತಿದ್ದ ಬೃಹತ್ ಮರಗಳಿದ್ದು , ರಸ್ತೆ ಅಗಲೀಕರಣದ ನಡುವೆ ಈ ಸುತ್ತಮುತ್ತಲಿನ ಪರಿಸರ ಉಳಿಸುವ ನಿಟ್ಟಿನಲ್ಲಿ ಮರಗಳ ಬೆಳೆಸಬೇಕಿದೆ .,

ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಕ್ಕೆ ಭರಪೂರ ಕೊಡುಗೆಗಳು ಲಭ್ಯವಾಗುತ್ತಿವೆ. ಇದೀಗ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು ಈ ಕುರಿತು ಟ್ವಿಟ್ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಎನ್ ಎಚ್ ವಾರ್ಷಿಕ ಯೋಜನೆ 2022-23 (ಪ್ಯಾಕೇಜ್ -2) ಅಡಿಯಲ್ಲಿ ಕಾರ್ಯಗತಗೊಳಿಸಲಾದ ಈ ಯೋಜನೆಯನ್ನು ಎಂಜಿನಿಯರಿಂಗ್‌, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಮೋಡ್‌ನಲ್ಲಿ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ , ರಾಷ್ಟ್ರೀಯ ಹೆದ್ದಾರಿ 373 ಇದಾಗಿದ್ದು, 33 ಕಿ.ಮೀ. ವಿಸ್ತೀರ್ಣದ ಚತುಷ್ಪಥ ನಿರ್ಮಾಣ ಆಗಲಿದೆ. ಸಮಿಶ್ರ ಸರ್ಕಾರ ಅವಧಿಯಲ್ಲಿ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. 2020ರ ಮೇ 25ರಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು

ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಮತ್ತೊಂದು ಪತ್ರ ಬರೆದಿದ್ದರು. ಈ ಹಿನ್ನೆಲೆ 2020ರ ಜೂನ್ 19ರಂದು 216 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಬಳಿಕ ಕಾಮಗಾರಿಗೆ ತಡೆ ನೀಡಲಾಗಿತ್ತು. ಅನುದಾನ ತಡೆಹಿಡಿದಿರುವುದಕ್ಕೆ ಮಾಜಿ ಸಚಿವ ಎಚ್‌ .ಡಿ.ರೇವಣ್ಣ ಅವರು ಪದೇ ಪದೇ ಈ ವಿಷಯ ಪ್ರಸ್ತಾಪಿಸಿ

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಸದ್ಯ ಈ ಯೋಜನೆಗೆ ಅನುಮೋದನೆ ದೊರೆತಿದ್ದು ಚುನಾವಣೆಗೂ ಮುನ್ನವೇ ಕಾಮಗಾರಿ ಆರಂಭವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here