ಹಾಸನ ಆ.10 ಭಾರತೀಯ ಸಂಬಾರ ಮಂಡಳಿಯು ಪ್ರತಿ ವರ್ಷವೂ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಾಂಬಾರ ಸಸಿಗಳನ್ನು ಮಂಡಳಿಯ ಸಸ್ಯಪಾಲನ ಕೇಂದ್ರಗಳಿಂದ ಈ ಕೆಳಗೆ ನಮೂದಿಸಿರುವ ದರಗಳಲ್ಲಿ ಬೆಳೆಗಾರರಿಗೆ/ಸಂಘ ಸಂಸ್ಥೆ/ಸರ್ಕಾರಿ ಇಲಾಖೆಗಳಿಗೆ ಮಾರಾಟ ಮಾಡಲಾಗುವುದು. ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಸಸಿಗಳನ್ನು ವಿತರಿಸಲಾಗುವುದು.
ಸಂಬಾರ ಸಸಿಗಳ ವಿವರ ಏಲಕ್ಕಿ ಸಸಿ (10 ತಿಂಗಳಿಂದ ಮೇಲ್ಪಟ್ಟು) ದರ 15 ರೂ, ಕಾಳು ಮೆಣಸು (ಬೇರು ಬರಿಸಿದ ಪ್ರತಿ ಬಳ್ಳಿಗೆ) ದರ 7 ರೂ, ಕಾಳು ಮೆಣಸು ನ್ಯೂಕ್ಲಿಯಸ್ ಸಸಿಗಳು ದರ 20 ರೂ, ಉತ್ತಮ ತಳಿಯ ಏಲಕ್ಕಿ ಕಂದುಗಳು ದರ 50 ರೂ ನಿಗಡಿ ಪಡಿಸಲಾಗಿರುತ್ತದೆ.
ಆಸಕ್ತ ಬೆಳೆಗಾರರು ಬಿಳಿಗೆರಿ, ಮಡಿಕೇರಿ ತಾ. ಕೊಡಗು ಜಿಲ್ಲೆ. ಸಂಪರ್ಕಿಸಿ: ಶ್ರೀ. ಕೇಶವನ್-8281376265 ಸಸ್ಯಪಾಲನ ಕೇಂದ್ರ, ಐಗೂರು, ಸೋಮವಾರಪೇಟೆ ತಾ. ಕೊಡಗು ಜಿಲ್ಲೆ. ಸಂಪರ್ಕಿಸಿ: ಶ್ರೀ. ರೆಜಿತ್ ಎನ್. ಪಿ- 9745295470 ಸಸ್ಯಪಾಲನ ಕೇಂದ್ರ, ಬೆಟ್ಟದಮನೆ, ಮೂಡಿಗೆರೆ ತಾ. ಚಿಕ್ಕಮಗಳೂರು ಜಿಲ್ಲೆ. ಸಂಪರ್ಕಿಸಿ: ಶ್ರೀ. ಡಿಕೇಶ್ ಪಿ.- 8921934439, ಬೆಳಗೋಳ, ಕೊಪ್ಪ ತಾ. ಚಿಕ್ಕಮಗಳೂರು ಜಿಲ್ಲೆ. ಸಂಪರ್ಕಿಸಿ: ಶ್ರೀ. ಸುನೀಲ್ ಕುಮಾರ್ ಜಿ.-8921595371 ಸಸ್ಯಪಾಲನ ಕೇಂದ್ರಗಳಲ್ಲಿ ಸಂಪರ್ಕಿಸಬಹುದಾಗಿದೆ.
ಹೆಚ್ಛಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿಯ ಕ್ಷೇತ್ರ ಕಛೇರಿ/ವಿಭಾಗೀಯ ಕಛೇರಿ/ ಪ್ರಾದೇಶಿಕ ಕಛೇರಿಗೆ ಭೇಟಿ ನೀಡಬಹುದು ಎಂದು ಭಾರತೀಯ ಸಂಬಾರ ಮಂಡಳಿ ಉಪ ನಿರ್ದೇಶಕರು ತಿಳಿಸಿದ್ದಾರೆ.