ಅರ್ಹತೆ ಇದ್ದವರಿಗೆ ಸಿಕ್ಕೆ ಸಿಗುತ್ತೆ: ಕೆ.ಹೆಚ್. ಮುನಿಯಪ್ಪ
ಹಾಸನ: ಯಾರ ಬಿಪಿಎಲ್ ಕಾರ್ಡನ್ನು ಇದುವರೆಗೂ ರದ್ದು ಮಾಡಿರುವುದಿಲ್ಲ. ಅಂತಹ ತೀರ್ಮಾನವನ್ನು ನಾವು ತೆಗೆದುಕೊಂಡಿರುವುದಿಲ್ಲ. ಅರ್ಹತೆ ಇದ್ದವರಿಗೆ ಸಿಕ್ಕೆ ಸಿಗುತ್ತದೆ ಎಂದು ಆಹಾರ ನಾಗಾರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಬಿಜೆಪಿ ಸರಕಾರದ ಅವಧಿಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕಾರ್ಡ್ ಪೆಂಡಿಂಗ್ ಇದ್ದು, ಅದನ್ನು ಕೂಡ ಪರಿಷ್ಕರಣೆ ಮಾಡಲಾಗುವುದು. ಮನೆಯಲ್ಲಿ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ರದ್ದತಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಇದುವರೆಗೂ ಯಾವ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದಿಲ್ಲ. ನಾವು ಇನ್ನೂ ಯಾವ ತೀರ್ಮಾನ ತೆಗೆದುಕೊಂಡಿಲ್ಲ. ಹಿಂದಿನ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವಾಗಿದೆ.
ಅದರ ಬಗ್ಗೆ ವಿಚಾರ ಮಾಡದೆ ನಾನು ಏನು ಹೇಳುವುದಿಲ್ಲ. ಯಾರಿಗೆ ಅರ್ಹತೆ ಇದೆ ಅವರಿಗ್ಯಾರಿಗೂ ತೊಂದರೆ ಆಗುವುದಿಲ್ಲ. ಯಾರು ಬಿಪಿಎಲ್, ಯಾರು ಎಪಿಎಲ್ ಬರ್ತಾರೆ ಅವರಿಗೆ ನೀಡುತ್ತೇವೆ. ಈಗ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು. ಇವೆಲ್ಲಾ ಪರಿಷ್ಕರಣೆ ಮಾಡಿದ ನಂತರ ತೀರ್ಮಾನ ಮಾಡುತ್ತೇವೆ.
ಅರ್ಜಿ ಹಾಕಿರುವವರು ಬಿಪಿಎಲ್‌ಗೆ ಅರ್ಹತೆ ಇದ್ದರೆ ಕಾರ್ಡ್ ನೀಡುತ್ತೇವೆ. ಅಕ್ಕಿ ಬದಲು ಹಣ ಹಾಕಲು ಬ್ಯಾಂಕ್ ಖಾತೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ನಮ್ಮ ಹತ್ತಿರ ಇರುವ ಕಾರ್ಡ್‌ಗಳನ್ನು ಸ್ಕೂಟ್ನಿ ಮಾಡುತ್ತೇವೆ. ಅವರಿಗೆ ಅಕ್ಕಿಯ ಬದಲು ಹಣ ಹಾಕುತ್ತೇವೆ. ಆನಂತರ ಅಕ್ಕಿಯನ್ನು ವಿತರಣೆ ಮಾಡುತ್ತೇವೆ. ಕಾರ್ಡ್‌ದಾರರಿಗೆ ಬ್ಯಾಂಕ್ ಅಕೌಂಟ್ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅನ್ನಭಾಗ್ಯದಲ್ಲಿ ಹತ್ತು ಕೆಜಿ ಕೊಡ್ತಿವಿ ಅಂತ ಹೇಳಿದ್ದೀವಿ. ಆಂಧ್ರ ಮತ್ತು ತೆಲಂಗಾಣ ರಾಜ್ಯಕ್ಕೆ ನಾನು ಹೋಗಿದ್ದೇನೆ ರೇಟ್ ವಿಚಾರದಲ್ಲಿ ಡಿಸ್ಕಷನ್ ನಡಿತಿದೆ. ಅಕ್ಕಿ ಕೊಡ್ತಿವಿ ಅಂತ ನಾವೇನು ಮಾತು ಕೊಟ್ಟಿದ್ದೇವೆ ಅದರಂತೆ ಅಕ್ಕಿ ಕೊಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.
ಈಗಾಗಲೇ ಸರಕಾರ ರಚನೆಯಾಗಿ ಎರಡುವರೆ ವರ್ಷ ಕಳೆದಿದ್ದು, ಈ ಬಗ್ಗೆ ನಾನು ಏನು ಪ್ರತಿಕ್ರಿಯೆಸುವುದಿಲ್ಲ. ಏನಾದರೂ ಮಾತನಾಡಿದರೇ ಅದು ವಿಷಯವಾಗುತ್ತದೆ ಎಂದ ಅವರು, ಸರ್ಕಾರ ಮಾಡುವ ಮಂತ್ರಿಗಳೆಲ್ಲಾ ಕ್ಷೇಮವಾಗಿ, ಜವಾಬ್ದಾರಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂಬುದು, ಸಮಯ ಬಂದಾಗ ಎಲ್ಲಾ ಮಾತನಾಡುತ್ತೀನಿ ಎಂದರು. ಕಾಂಗ್ರೆಸ್ ಪಕ್ಷ ಎಂದರೇ ಒಂದು ಸಮುದ್ರ ಇದ್ದಾಗ ಬರ್ತಾರೆ. ಬರುವವರನ್ನು ಸ್ವಾಗತ ಮಾಡುತ್ತೇವೆ ಎಂದು ಇತರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈಗ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ ಶಾಸಕು ವಾಪಸ್ ಬರುತ್ತೀನಿ ಎಂದರೇ ಬೇಡ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಉತ್ತರಿಸಿದರು. ಯಾರು ಪಕ್ಷಕ್ಕೆ ಬರ್ತಾರೆ ಅನ್ನುವ ಲೆಕ್ಕನಾ ಅಧ್ಯಕ್ಷರನ್ನು ಕೇಳಿ ಎಂದು ಹೇಳಿದರು.