ಹಲವಾರು ನಟ-ನಟಿಯರು ತೂಕವನ್ನು ನಿಯಂತ್ರಿಸಲು ಈ ಹಣ್ಣನ್ನು ಏಕೆ ಸ್ವೀಕರಿಸುತ್ತಾರೆ? ಈ ವಿದೇಶಿ ಹಣ್ಣಿನ ಲಾಭಗಳೇನು?

0

ಇತ್ತೀಚೆಗೆ ಡ್ರ್ಯಾಗನ್ ಹಣ್ಣು ಬಹಳ ಸಂಚಲನವನ್ನು ಸೃಷ್ಟಿ ಮಾಡಿದೆ.ಈ ಹಣ್ಣು ಅಮೆರಿಕ ,ಮೆಕ್ಸಿಕೋ ಎಂತಹ ಮರುಭೂಮಿಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಈ ಹಣ್ಣು ಇತ್ತೀಚೆಗೆ ಕರ್ನಾಟಕದಲ್ಲಿ ಮಾರಾಟಕ್ಕೆ ಇಡಲಾಗಿದೆ ಇದು ಬಹಳ ದುಬಾರಿಯಾದರೂ ಇದರ ಉಪಯೋಗಗಳು ಬಹಳ ಮಹತ್ವಪೂರ್ಣ. ಈ ಹಣ್ಣಿನಲ್ಲಿ ಫೈಬರ್, ವಿಟಮಿನ್ಸ್ ,ಐರನ್ ,ಮೆಗ್ನೀಸಿಯಂ ಹೆಚ್ಚು ಪ್ರಮಾಣದಲ್ಲಿದೆ.

ಪ್ರಯೋಜನಗಳು

ಹೃದಯ ಸಮಸ್ಯೆ ಕಡಿಮೆಯಾಗುತ್ತದೆ :
ಈಗಿನ ಕಾಲದಲ್ಲಿ ಹೈ ಬಿಪಿ, ಲೋ ಬಿಪಿ ಸಮಸ್ಯೆಗಳು ಬಹಳ ಸಾಮಾನ್ಯ ಡ್ರ್ಯಾಗನ್ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕಿ ಹೃದಯದ ಸ್ವಾಸ್ಥ್ಯ ಉತ್ತಮವಾಗಿರುವಂತೆ ಮಾಡಿ, ಬಿಪಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಡಯಾಬಿಟಿಸ್ ವಿರುದ್ಧ ಹೋರಾಡುತ್ತದೆ :
ಈಗಿನ ಕಾಲದಲ್ಲಿ ಚಿಕ್ಕ ವಯಸ್ಸಿಗೇ ಡಯಾಬಿಟಿಸ್ ಸಮಸ್ಯೆಗಳು ಅನುಭವಿಸುತ್ತಾರೆ ಆದರೆ ಈ ಹಣ್ಣು ನಿಮ್ಮ ಶುಗರ್ ಲೆವೆಲ್ ಕಡಿಮೆ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ತೂಕ ಇಳಿಸೋಕೆ ಸಹಾಯಕಾರಿ:
ಡಯಟ್ ಮಾಡುವವರು ಸಾಮಾನ್ಯವಾಗಿ ಈ ಹಣ್ಣನ್ನು ಬಳಸುತ್ತಾರೆ ಇದರಲ್ಲಿ ಬಹಳ ಕಡಿಮೆ ಕೊಲೆಸ್ಟ್ರಾಲ್ ಇರುತ್ತದೆ ದೇಹದ ತೂಕವನ್ನು ನಿಯಂತ್ರಿಸಿ ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.

ಮೊಡವೆ ಸಮಸ್ಯೆಯನ್ನು ದೂರ ಮಾಡುತ್ತದೆ:
ಟೀನೇಜರ್ಸ್ ಗೆ ಈ ಹಣ್ಣು ಬಹಳ ಸಹಾಯಕಾರಿ ಇದರಲ್ಲಿ ಇರುವ ವಿಟಮಿನ್ ಸಿ ಮೊಡವೆಯನ್ನು ದೂರ ಮಾಡಿ ಕೆಲವೇ ದಿನಗಳಲ್ಲಿ ಫಲಿತಾಂಶ ನೀಡುತ್ತದೆ.

ಡ್ರ್ಯಾಗನ್ ಹಣ್ಣು ದುಬಾರಿ ಎಂದು ಯೋಚಿಸಬೇಡಿ ಇದರಲ್ಲಿ ಇರುವ ಉಪಯೋಗಗಳನ್ನು ತಿಳಿದು ಬಳಸಿ .

-ತನ್ವಿ .ಬಿ

LEAVE A REPLY

Please enter your comment!
Please enter your name here