ಹಾಸನ: ಇಷ್ಟು ದಿನ ಕಣ್ಣು ತಪ್ಪಿಸಿ ಬೈಕ್ ವೀಲಿಂಗ್ ಮಾಡ್ತಿದ್ರಿ, ಇನ್ಮುಂದೆ ಅಂತಹ ಆಟ ನಡೆಯಲ್ಲ. ಪೊಲೀಸರ ಕಣ್ಣಿಗೆ ಏನಾದರೂ ಕಾಣಿಸಿದ್ರೆ ಸಾಕು ರುಬ್ಬೊಕ್ಕೆ ರೆಡಿ ಇದ್ದಾರೆ. ಆಗೇ ಕೇಸು ಹಾಕ್ತಾರೆ. ಅಂತಹ ವೀಲ್ ಮಾಡುವ ಚಾಲಕರು ಅರಸೀಕೆರೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಬೈಕ್ ಸವಾರರು ಏನಾದರೂ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದರೇ ಅವರ ವಿಡಿಯೋವನ್ನು ಮಾಡಿ ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ, ಅನೇಕ ಕಡೆ ಸಿಸಿ ಕ್ಯಾಮರ ಇರುವುದರಿಂದ ಬೈಕ್ ವೀಲಿಂಗ್ ಮಾಡುವವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ.
ಯಾವ ರಸ್ತೆಯಲ್ಲಾದರೂ ಇಂತಹ ವೀಲಿಂಗ್ ಮಾಡುವುದು ಕಂಡು ಬಂದರೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೇ ಸಾಕು ಮುಂದೆ ಅವರನ್ನ ಹಿಡಿಯುವುದ ಸುಲಭವಾಗಲಿದೆ. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಬೈಕ್ ಚಾಲಕನನು ಬಂಧಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಸ್‌ನಿಲ್ದಾಣದ ಹತ್ತಿರ ಕೆಎ 13 ಎಂಡಿ 2770 ಅಪ್ಪಚಿ ಬೈಕ್‌ನ್ನು ವೀಲಿಂಗ್ ಮಾಡುತ್ತಿದ್ದ ಕೂಲಿ ಕೆಲಸ ಮಾಡುವ ಸೈಯದ್ ಇಮ್ರಾನ್ 23 ವರ್ಷ ಹಾಗೂ ಹಾರನಹಳ್ಳಿ ಗ್ರಾಮದ ಚಾಲಕ ವೃತ್ತಿ ಮಾಡುವ ರೆಹಮತ್ ಖಾನ್ ೨೫ ವರ್ಷ ಎಂಬುನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಇದೆ ಅರಸೀಕೆರೆ ತಾಲೂಕಿನಲ್ಲಿ ಟೌನ್ ಮಾರುತಿ ನಗರದಲ್ಲಿ ಗುಪ್ತ ಮಾಹಿತಿ ಸಿಬ್ಬಂದಿ ಗಸ್ತು ಮಾಡುತ್ತಿರುವಾಗ, ನಗರದ ಶ್ರೀರಾಮ್ ಜಮದಗ್ನಿ ರವರ ಮನೆಯ ಮುಂಬಾಗ ಕೆಎ-೧೩-ಕೆ-೦೩೧೪ ಸುಜುಕಿ ಪಿಯಾರೋ ಬೈಕ್‌ನಲ್ಲಿ ಬೈಕ್ ಚಾಲಕನಾದ ಮೊಹಮ್ಮದ್ ಮುಸೀಟ್ ಮತ್ತು ಹಿಂಬದಿ ಸವಾರ ಜಾಫರ್ ಸಾದಿಕ್ ಇವರನ್ನು ಬಂಧಿಸಲಾಗಿದೆ.
ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ನ ಮುಂಬಾಗದ ವೀಲ್ ಎತ್ತಿಕೊಂಡು ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಬೈಕ್ ವೀಲಿಂಗ್ಮಾ ಡುತ್ತಿದ್ದು, ಇವರುಗಳನ್ನು ಗುಪ್ತ ಮಾಹಿತಿ ಸಿಬ್ಬಂದಿಗಳು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಅರಸೀಕೆರೆ ನಗರದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದರು.