ನಗರದ ವಿಜಯ ನಗರ 2ನೇ ಹಂತದಲ್ಲಿರುವ ಪುನರ್ ಜೀವನ ಸೇವಾ ಸಂಸ್ಥೆ ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವಗಿದ್ದ ಹಿನ್ನಲೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಮಂದಿ ಆರೋಪಿಗಳ ಪೈಕಿ ಯಾರು ಜನರನ್ನು ಬಂಧಿಸಲಾಗಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ ಎಂದು ಎಸ್ಪಿ ಹರಿ ರಾಂ ಶಂಕರ್ ಮಾಹಿತಿ ನೀಡಿದರು. ಹೊಳೆನರಸೀಪುರ ತಾಲೂಕು ಮೆನಗನಹಳ್ಳಿಯ ಶಶಿಕುಮಾರ್, ಅದೇ ತಾಲೂಕಿನ ಚೆನ್ನೇನಕೊಪ್ಪಲು ಗ್ರಾಮದ ವಿಜಯ ಕುಮಾರ್, ದುದ್ದ ಗ್ರಾಮದ ವೆಂಕಟೇಶ್, ಚಿಕ್ಕಮಗಳೂರು ಜಿಲ್ಲೆಯ ಮಲ್ಲೇಲನಹಳ್ಳಿಯ ಆಟೋ ಕ್ರಿಸ್ಟಾಫರ್, ಅರಕಲಗೂಡು ತಾಲೂಕು ಯಡಿಯೂರಿನ ಕುಮಾರ್, ಚಾಲಕ ಅದೇ ತಾಲೂಕಿನ ಬಿದುರು ಮಳೆ ಕೊಪ್ಪಲಿನ ರವಿ ಬಂಧಿತ ಆರೋಪಿಗಳು.
ವಿನಯ್ ಕುಮಾರ್ ತಲೆ ಮರೆಸಿ ಕೊಂಡಿದ್ದಾನೆ. ಈ ಎಲ್ಲರೂ ಸೇರಿ ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ್ದ ಬೇಲೂರು ತಾಲೂಕು ಮೇದೂಪದ್ದೇಗೌಡ ಎಂಬುವರ ಮೇಲೆ , ಆ.24 ರಂದು ಹಲ್ಲೆ ಮಾಡಿ , ಕೊಲೆ ಮಾಡಿದ್ದರು.