ನಿನ್ನೆ ಬಿಟ್ಟು ಬಂದ ಆನೆ ಮರಿ,,ಈ ದಿನ ಬೆಳಿಗ್ಗೆ live!!

0

•6 ದಿನದ ಹಿಂದೆ ಹುಟ್ಟಿದ ಪುಟ್ಟ ಆನೆ ಮರಿಯ ಮೂಕ ವೇದನೆಯಲ್ಲಿದ್ದಾಗ
*ಹುಟ್ಟಿ 6 ದಿನವಾದರೂ ನಡೆಯಲು ಸಾಧ್ಯವೇ ಸಂಕಟ ಪಡುತ್ತಿರುವ ಪುಟ್ಟ ಕಂದ
* ಕಳೆದ 6 ದಿನಗಳಿಂದ ನಡೆಯಲಾಗದೆ ಒಂದೇ ಕಡೆ ಮಲಗಿದ್ದ ಆನೆ ಮರಿಯನ್ನು ನಿನ್ನೆ ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರ ದಿಂದ ಹಾಸನದ ಪಶುವೈದ್ಯಕೀಯ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು , ತಂದ ನಂತರ ಶಿವಮೊಗ್ಗ ಜಿಲ್ಲೆಯ ಸಕ್ರೇ ಬೈಲ್  ಗೆ ಕಳುಹಿಸಲಾಗಿತ್ತು


*ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಮಳಲಿ ಗ್ರಾಮದ ಸಮೀಪ ಕಾಫಿ ತೋಟದಲ್ಲಿ 6 ದಿನಗಳ ಹಿಂದೆ ಆನೆಯೊಂದು ಜನ್ಮ ನೀಡಿತ್ತು.
*ಹುಟ್ಟಿದಂದಿನಿಂದ ನಡೆಯಲು ಸಾಧ್ಯವಾಗದೆ ಕಾಫಿ ತೋಟದಲ್ಲೇ ಮಲಗಿದ್ದ ಪರಿಣಾಮ ಆರಂಭದಲ್ಲಿ ತನ್ನೊಂದಿಗೆ ತನ್ನ‌ ಕಂದನನ್ನು ಕರೆದೊಯ್ಯಲು ತಾಯಿ ಆನೆ ಪ್ರಯತ್ನಿಸಿದ ತಾಯಿ ಆನೆ ಪ್ರಯತ್ನಿಸಿ ಮೂಕ ರೋಧನೆ ಅನುಭವಿಸುತ್ತಿತ್ತು.
*ನಿನ್ನೆ ಹಾಸನದ ಪಶುವೈದ್ಯಕೀಯ ಕಾಲೇಜಿಗೆ ಕರೆತಂದು ಸ್ಕ್ಯಾನಿಂಗ್ , x-ray ಮಾಡಿ ಹೆಚ್ಚಿನ ಚಿಕಿತ್ಸೆ ಗೆ ಸಕ್ರೇ ಬೈಲ್ ಗೆ ನೀಡಲಾಯಿತು.


*ಮೇಲಾಧಿಕಾರಿಗಳಿಂದ ಅಪ್ಪಣೆ ಸಿಕ್ಕ ನಂತರ ಆನೆ ಮರಿಯನ್ನು ಶಿವಮೊಗ್ಗದ ಸಕ್ಕರೆಬೈಲು ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ನಿನ್ನೆ ಡಿಎಫ್ಒ ಸಿವರಾಂಬಾಬು ತಿಳಿಸಿದ್ದರು


• ಇದೀಗ ಆನೆ ಮರಿ ತನ್ನ ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವತ್ತ ಸಾಗಿರೋದು ಖುಷಿಯ ವಿಚಾರ!!

LEAVE A REPLY

Please enter your comment!
Please enter your name here