ನುಗ್ಗೆಕಾಯಿ ಸೂಪ್ ಸೇವನೆಯಿಂದ ಸಿಗತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

0

ನುಗ್ಗೆಕಾಯಿ ಅನೇಕ ರೋಗಗಳ ವಿರುದ್ಧ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ನೆಗಡಿ, ಕೆಮ್ಮು, ಗಂಟಲು ನೋವು ನಿವಾರಿಸಲು ಇದು ಪ್ರಯೋಜನಕಾರಿ. ನುಗ್ಗೆಕಾಯಿ ಸಾಂಬಾರ್ ಬಹಳ ರುಚಿ. ನುಗ್ಗೆಕಾಯಿ ಉಸಿರಾಟ ಸಮಸ್ಯೆಯನ್ನು ದೂರ ಮಾಡುತ್ತದೆ.

ನುಗ್ಗೆಕಾಯಿ ಸೂಪ್ ಅತ್ಯಂತ ಪ್ರಯೋಜನಕಾರಿ. ಇದ್ರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬೀಟಾ ಕ್ಯಾರೊಟಿನ್, ಪ್ರೋಟೀನ್ ಹಾಗೂ ವಿವಿಧ ಲವಣಗಳು ಇದ್ರಲ್ಲಿರುತ್ತವೆ. ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ. ಇದು ದೇಹದ ಪೂರ್ಣ ವಿಕಾಸಕ್ಕೆ ಸಹಕಾರಿ.

ನುಗ್ಗೆಕಾಯಿ ಸೂಪ್ ಮಾಡುವ ವಿಧಾನ:

ನುಗ್ಗೆಕಾಯಿಯನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಿ. ಎರಡು ಕಪ್ ನೀರನ್ನು ಕುದಿಸಿ. ಕುದಿಯುತ್ತಿರುವ ನೀರಿಗೆ ನುಗ್ಗೆಕಾಯಿ ಹಾಕಿ

ನೀರು ಅರ್ಧವಾದ ನಂತ್ರ ನುಗ್ಗೆಕಾಯಿ ಹೋಳನ್ನು ತೆಗೆಯಿರಿ. ಬೇಕೆನಿಸಿದ್ರೆ ನುಗ್ಗೆಕಾಯಿ ಹೋಳಿನ ಜೊತೆ ಎಲೆಯನ್ನೂ ನೀರಿಗೆ ಹಾಕಿ ಕುದಿಸಬಹುದು. ನಂತ್ರ ಈ ನೀರಿಗೆ ಉಪ್ಪು, ಕಾಳು ಮೆಣಸಿನ ಪುಡಿಯನ್ನು ಹಾಕಿ ಕುಡಿಯಿರಿ.

ನಿಯಮಿತ ರೂಪದಲ್ಲಿ ನುಗ್ಗೆಕಾಯಿ ಸೂಪ್ ಸೇವನೆ ಮಾಡುವುದರಿಂದ ಲೈಂಗಿಕ ಜೀವನ ಸುಖಕರವಾಗಿರುತ್ತದೆ. ಮಹಿಳೆ ಹಾಗೂ ಪುರುಷರಿಬ್ಬರಿಗೂ ಇದು ಲಾಭಕರ.

ಸೂಪ್, ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ಇಮ್ಯೂನಿಟಿ ಹೆಚ್ಚಿಸುವ ಕೆಲಸವನ್ನೂ ಈ ಸೂಪ್ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಮಲಬದ್ಧತೆಯಾಗದಂತೆ ತಡೆಯುತ್ತದೆ. ಶೀತ-ಕೆಮ್ಮಿನಿಂದ ಬಳಲುವವರು ಈ ಸೂಪ್ ಕುಡಿಯುವುದು ಒಳ್ಳೆಯದು.

ರಕ್ತವನ್ನು ಶುದ್ಧಗೊಳಿಸುವ ಕೆಲಸ ಮಾಡುತ್ತದೆ. ಮಧುಮೇಹ ನಿಯಂತ್ರಣಕ್ಕೂ ಇದು ಬೆಸ್ಟ್.

LEAVE A REPLY

Please enter your comment!
Please enter your name here