ಹಾಸನ: ರಾಜ್ಯದ ರೈತರಿಗೆ ಮೋಸ ಮಾಡಲಾಗಿದ್ದು, ರೈತರಿಗೆ ಮೊದಲು ಉತ್ತರ ನೀಡಿ ನಂತರ ಸೆಪ್ಟಂಬರ್ ೨೬ ರಂದು ನಡೆಯುವ ನಿಮ್ಮ ಪಾದಯಾತ್ರೆ ಮುಂದುವರೆಸಬೇಕು. ಇಲ್ಲವಾದರೇ ಪಾದಯಾತ್ರೆ ವೇಳೆ ಕೋಡಿಹಳ್ಳಿ ಚಂದ್ರಶೇಖರ್ ಗೆ ರೈತರಿಂದಲೇ ಘೇರಾವ್ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಮುಖಂಡ ಶಿವಲಿಂಗಪ್ಪ ಬೋರನಕೊಪ್ಪಲು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಹಾಸನದಲ್ಲಿ ಆಲೂಗಡ್ಡೆ ಪ್ರಮುಖ ಬೆಳೆಯಾಗಿದ್ದು, ಹಾಸನದಲ್ಲಿ ಆಲೂಗೆಡ್ಡೆ ಪ್ರಮುಖ ಬೆಳೆಯಾಗಿದ್ದು ತಾಲ್ಲೂಕಿನ ರೈತರುಗಳಿಗೆ ಪರಿಹಾರ ಕೊಡಿಸುತ್ತೇನೆಂದು ರೈತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಮಾರ್ಗಮದ್ಯದಿಂದಲೇ ಕಳುಹಿಸಿರುತ್ತಾರೆ.
ನಾನು ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಹತ್ತಿರ ಮಾತನಾಡುತ್ತೇನೆ ಎಂದು ಹೇಳಿ ರೈತರಿಗೆ ಮೋಸ ಮಾಡಿರುತ್ತಾರೆ. ರಾಜ್ಯ ಸರ್ಕಾರದಿಂದ ಕೆ.ಎಮ್.ಎಫ್.ನಂತೆ ಖಾಸಗಿ ಡೈರಿಯಲ್ಲಿಯೂ ೫ ರೂ. ಸಹಾಯಧನ ಕೊಡಿಸುತ್ತೇನೆ ಎಂದು ರಾಜ್ಯದ ರೈತರನ್ನು ಬೆಂಗಳೂರಿಗೆ ಕರೆಸಿ ಒಂದು ದಿನವೆಲ್ಲ ರೈತರನ್ನು ಕಾಯಿಸಿ ಸಕಾರದ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿ ರೈತರನ್ನು ವಾಪಸ್ಸು ಕಳುಹಿಸಿರುತ್ತಾರೆ ಎಂದರು. ೨೦೧೩ ರ ಚುನಾವಣಾ ಸಂದರ್ಭದಲ್ಲಿ ಹಾಸನದಿಂದ ಕೆ.ಜೆ.ಪಿ ಪಕ್ಷದಿಂದ ಯಡಿಯೂರಪ್ಪನವರು ಹಾಸನ ತಾಲ್ಲೂಕಿನಿಂದ ನಾವು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ನೀವೆ ಸ್ಪರ್ಧೆ ಮಾಡಿ ಎಂದು ಹೇಳಿದ್ದಾರೆ ಎಂದು ಹೇಳಿ ಸ್ಪರ್ಧೆ ಮಾಡಿದರು.
ಆ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರನ್ನು ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಂಡರು ಯಾವುದೇ ಹಳ್ಳಿಗೆ ಹೋಗದೆ ಕದಂಬ ವಸತಿ ಗೃಹದಲ್ಲಿ ಉಳಿದುಕೊಂಡು ಯಡಿಯೂರಪ್ಪನವರಿಂದ ಹಣ ಪಡೆದು ನಂತರ ಬೆಂಗಳೂರಿಗೆ ಹೋಗಿದ್ದಾರೆ. ಅವರಿಗೆ ಮತಗಳು ಬಿದ್ದ ಸಂಖ್ಯೆ ಸಾವಿರ, ಒಬ್ಬ ರಾಜ್ಯದ ಅಧ್ಯಕ್ಷರಿಗೆ ಇಷ್ಟು ಮತ ಬಿದ್ದಿದ್ದು ಜನ ತಪ್ಪ ತಿಳಿದಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದ ಸಮಯದಲ್ಲಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಿಸಿಕೊಡುವುದಾಗಿ ಹೇಳಿ ಅಂದಿನ ಮುಖ್ಯಮಂತ್ರಿಗಳೂ ರೈತರ ಹಾಗೂ ರೈತ ಮುಖಂರುಗಳ ಜೊತೆ ಮಾತನಾಡುವುದಾಗಿ ಹೇಳಿ ಮುಖಂಡರನ್ನು ಮತ್ತು ರೈತರನ್ನು ಬಿಟ್ಟು ಹೋಗಿ ಒಬ್ಬರೇ ಮಾತನಾಡಿದ್ದಾರೆ ಮತ್ತು ರೈತರಿಗೆ ಮೋಸಮಾಡಿದ್ದಾರೆ. ೨೦೧೭ರಲ್ಲಿ ಸಾಲವನ್ನು ಮನ್ನಾ ಮಾಡಿಸುವುದಾಗಿ ನೀವೇ ಸ್ವಂತ ಸರ್ಜಿಗಳನ್ನು ಸಿದ್ದಪಡಿಸಿ ಸುಮಾರು ೨೧ ಜಿಲ್ಲಗಳಲ್ಲಿ ಪ್ರತಿ ಅರ್ಜಿಗೆ ೫೦ ರೂ.ಗಳಿಂದ ೧೦೦ ರೂಗಳನ್ನು ಪ್ರತಿ ರೈತರಿಂದ ಪಡೆದು ರೈತರಿಗೆ ಮೋಸಮಾಡಿದ್ದಾರೆ ಎಂದು ದೂರಿದರು.
ಈ ಎಲ್ಲಾವನ್ನು ಖಂಡಿಸಿ ಸೆಪ್ಟಂಬರ್ ೨೬ ರಂದು ನಡೆಯುವ ನಿಮ್ಮ ಪಾದಯಾತ್ರೆ ವೇಳೆ ಸೆಪ್ಟಂಬರ್ ೨೬ ರಂದು ನಡೆಯುವ ನಿಮ್ಮ ಪಾದಯಾತ್ರೆ ವೇಳೆ ಪ್ರಾರಂಭದಲ್ಲೆ ಘೇರವ್ ಮಾಡಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಸಂಘಟನೆ ಪದಾಕಾರಿಗಳಾದ ನಂಜುಂಡೇಗೌಡ, ರವಿಕಾರೆನಹಳ್ಳಿ, ನಾಗರಾಜು, ಇತರರು ಹಾಜರಿದ್ದರು.