ಹಾಸನಾಂಬ ದರ್ಶನ 2023ಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ KSRTCಯಿಂದ ಬರೋಬ್ಬರಿ 100 ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜತೆಗೆ ಹೆಲಿಟೂರಿಸಂ, ಪ್ಯಾರ ಸೈಕ್ಲಿಂಗ್ ಕೂಡ ಇರಲಿದೆ. ಈ ಬಗ್ಗೆ ಮಾಹಿತಿ ಈ ಕೆಳಕಂಡಂತೆ ಕಾಣಬಹುದು…,
ಶಕ್ತಿ’ಯೋಜನೆ ಉಚಿತ ಬಸ್ ಸೌಲಭ್ಯ ಇರುವುದರಿಂದ ರಾಜ್ಯ, ಹೊರರಾಜ್ಯದಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು, ಭಕ್ತರು ಹಾಸನಾಂಬ ದರ್ಶನಕ್ಕೆ ಬರೋದಂತು ಫಿಕ್ಸ್ , ಅದನ್ನು ತಡೆಯಲು ಸಾಧ್ಯವಿಲ್ಲ . ಈ ಹಿನ್ನೆಲೆಯಲ್ಲಿ KSRTCಯ ಹಾಸನ ಮತ್ತು ಚಿಕ್ಕಮಗಳೂರು ವಿಭಾಗದ ಅಧಿಕಾರಿಗಳು ಅ.13 ರಂದು ಸಭೆ ನಡೆಸಿ ಚರ್ಚಿಸಲಿದ್ದು. ಹಾಸನ ವಿಭಾಗದ ವತಿಯಿಂದ 100 ಬಸ್‌ಗಳನ್ನು ಬೆಂಗಳೂರು, ಮೈಸೂರು ಸೇರಿದಂತೆ ಅಂತರ ಜಿಲ್ಲೆಗಳಿಂದ ಓಡಿಸಲು ಚಿಂತಿಸಿದ್ದು, ಇದಕ್ಕಾಗಿ ಹೊರ ಜಿಲ್ಲೆಯ ವಿಭಾಗದ ಬಸ್‌ಗಳನ್ನು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಳಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ .
ಇದೇ ನವೆಂಬರ್ 3ರಿಂದ ಬಸ್
”ಹಾಸನಾಂಬ ದೇಗುಲದ ಬಾಗಿಲು ನ.2ರಂದು ತೆರೆಯಲಿದ್ದು, ಪ್ರಥಮ ದಿನದಂದು ಸಾರ್ವಜನಿಕ ದರ್ಶನ ಇಲ್ಲದ ಕಾರಣ ನ.3ರಿಂದ ವಿಶೇಷ ಬಸ್‌ಗಳು ಕಾರ್ಯಾಚರಣೆ ಪ್ರಾರಂಭಿಸಲಿವೆ,” ಎನ್ನುತ್ತಾರೆ KSRTC ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ಕುಮಾರ್ ರವರು ., ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ 15ದಿನಗಳ ಕಾಲ ನಗರದ ಮುಖ್ಯರಸ್ತೆ ಮತ್ತು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿಸಲು ‘ ನಾಗ್ ಗ್ರೂಪ್ಸ್ ‘ ಅವರಿಗೆ ಟೆಂಡರ್ ಸಿಕ್ಕಿದ್ದು ಅಂಕಲ್ಪಿಸಲಾಗುತ್ತದೆ .
ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಿ ಸೂಕ್ಷ್ಮ ಪ್ರದೇಶಗಳಿಗೆ ಸಮವಸ್ತ್ರ ಹಾಗೂ ಗೌಪ್ಯ ಪೊಲೀಸ್ ವ್ಯವಸ್ಥೆ ಈ ಬಾರಿ ಕಟ್ಟೆಚ್ಚರವಾಗಿ ಕಾರ್ಯ ನಿರ್ವಹಿಸಲಿದೆ., ಹಾಸನಾಂಬದೇವಿ ಗರ್ಭಗುಡಿ ಮುಂಭಾಗದ ಆವರಣ ಚಿಕ್ಕದಾಗಿರುವ ಕಾರಣ ಹಾಗೂ ಸಮರ್ಪಕ ಗಾಳಿ ವ್ಯವಸ್ಥೆ ಗೆ ಬರೋಬ್ಬರಿ 4 ಟನ್ AC ಅಳವಡಿಸಲಾಗುತ್ತಿದೆ. ಗಣ್ಯರು, ಜನಪ್ರತಿನಿಧಿಗಳು,ಅಧಿಕಾರಿಗಳಿಗೆ ನೀಡುವ ಪಾಸ್ ದುರುಪಯೋಗ ತಡೆಗಟ್ಟಲು ಈ ಬಾರಿ ಪಾಸ್‌ಗೆ ಬಾರ್‌ಕೋಡ್ ತಂತ್ರಜ್ಞಾನ ಈ ಬಾರಿ ಇರಲಿದೆ ., ಹಾಸನಾಂಬ ಉತ್ಸವ ಹಿನ್ನೆಲೆಯಲ್ಲಿ ಪ್ರವಾಸಿಗರು, ಭಕ್ತರಿಗಾಗಿ ಹಾಸನ ನಗರ ಪ್ರದಕ್ಷಿಣೆ ಮಾಡಲು ಬಯಸುವವರಿಗಾಗಿ ಹೆಲಿಕಾಪ್ಟರ್ ವ್ಯವಸ್ಥೆ ಕಳೆದ ಬಾರಿ ಚಿಕ್ಕಮಗಳೂರು ಹಬ್ಬದಲ್ಲಿತ್ತು , ಇದೀಗ ಹಾಸನದಲ್ಲು ಇರಲಿದೆ , . ಪ್ಯಾರಾ ಸೈಲಿಂಗ್ ಕೂಡ ಇರಲಿದೆ., ಮತ್ತೇನು ಯೋಚನೆ , ಶೇರ್ ಮಾಡಿ , ಹಬ್ಬದ ಮೆರಗನ್ನು ಹೆಚ್ಚಿಸಲು ಹಾಸನ್ ನ್ಯೂಸ್ ನಲ್ಲಿ ಬರುವ ಎಲ್ಲಾ ಅಪ್ಡೇಟ್ ಗಳನ್ನು ಶೇರ್ ಮಾಡಿ . ಸ್ಥಳೀಯ ವಿಷಯವ ವಿಶ್ವಕ್ಕೆ ಹಂಚೋಣ