ನಗರದಲ್ಲಿ 200 ಕ್ಕೂ ಹೆಚ್ಚು ಮಹಿಳೆಯರು ಉತ್ತರ ಭಾರತದ  ಸಾಂಪ್ರದಾಯಿಕ ಉಡುಪಿನಲ್ಲಿ ಡಾಂಡಿಯ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು

0

ನವರಾತ್ರಿ ಹಬ್ಬದ ಪ್ರಯುಕ್ತ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ಅವರ ನೇತೃತ್ವದಲ್ಲಿ ನಗರ ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ಸಂಜೆ ಶಂಕರಮಠದಲ್ಲಿ ಸಾಮೂಹಿಕ ಲಲಿತ ಸಹಸ್ರನಾಮ ಪಠಣ ಹಾಗೂ ದುರ್ಗಾ ಪೂಜೆ .

200 ಕ್ಕೂ ಹೆಚ್ಚು ಮಾತೆಯರ ಒಳಗೊಂಡು ಪೂಜೆಯಲ್ಲಿ ಪಾಲ್ಗೊಂಡು ದೇಶ ಸುಭೀಕ್ಷವಾಗಿರಲಿ, ಪ್ರಪಂಚವನ್ನು ಕಾಡುತ್ತಿರುವ ಕರೋನಾ ವೈರಾಣು ನಾಶವಾಗಲಿ ಮತ್ತು ಕರೋನಾ ಸೊಂಕಿತರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡಿದರು.

ಕರೋನಾ ಹೋರಾಟದಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಯವರಿಗೆ ,ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಹಾಸನ ಶಾಸಕರಾದ ಪ್ರೀತಂ ಗೌಡ ಅವರುಗಳಿಗೆ ದುರ್ಗಾ ಮಾತೆ ಹೆಚ್ಚು ಶಕ್ತಿ ನೀಡಲಿ ಎಂದು ಹಾರೈಸಿದರು.

ಅಂದೇ ಸಂಜೆ ಮಹಾವೀರ ಭವನದಲ್ಲಿ ನಗರ ಬಿಜೆಪಿ ಘಟಕದ ವತಿಯಿಂದ ಮಹಿಳೆಯರಿಗಾಗಿ ದಾಂಡಿಯಾ ನೃತ್ಯ ಕಾರ್ಯಕ್ರಮವನ್ನು ಮಯೂರ ಸ್ಕೂಲ್ ಆಫ್ ಡಾನ್ಸ್ ಅವರ ಸಹಯೋಗದೊಂದಿಗೆ ನೆಡೆಸಿದರು.200 ಕ್ಕೂ ಹೆಚ್ಚು ಮಹಿಳೆಯರು

ಉತ್ತರ ಭಾರತದ  ಸಾಂಪ್ರದಾಯಿಕ ಉಡುಪಿನಲ್ಲಿ ಡಾಂಡಿಯ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.


ಉತ್ತಮ ಸಾಂಪ್ರದಾಯಿಕ ಉಡುಗೆ ,ಉತ್ತಮ ನೃತ್ಯ ಮಾಡಿದವರಿಗೆ ಬಹುಮಾನವನ್ನು ನಗರ ಮಂಡಲ ಅಧ್ಯಕ್ಷರಾದ ವೇಣುಗೋಪಾಲ್ ವಿತರಿಸಿದರು.ಕಾರ್ಯಕ್ರಮದಲ್ಲಿ ಉಪಾದ್ಯಕ್ಷರಾದ ಚಂದ್ರಶೇಖರ್  ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್,ಮುರಳಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷರಾದ ರತ್ನ ಪ್ರಕಾಶ್,ನಗರಾದ್ಯಕ್ಷರಾದ ಅನಿತಾ ಮುಖಂಡರಾದ ಲಾವಣ್ಯ,ಸುಜಾತ,ಅಂಭಿಕಾ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here