ಹಾಸನ್ ಪೊಲೀಸ್ ನ್ಯೂಸ್ ಟುಡೆ

0

ಹಾಸನ ಜಿಲ್ಲೆ : ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 7.30 ಲಕ್ಷ ಬೆಲೆಯ 20 ಬೈಕ್ ಗಳನ್ನು ವಶಕ್ಕೆ ಪಡೆಯಲಾಯಿತು.
ಹೊಳೆನರಸೀಪುರ ವೃತ್ತ ನಿರೀಕ್ಷಕರಾದ ದೀಪಕ್ ಮತ್ತು ಹೊಳೆನರಸೀಪುರ ನಗರ ಠಾಣೆಯ ಪಿಎಸ್ಐ (L&O) ಅರುಣ್,  ಪಿಎಸ್ಐ ಕ್ರೈಂ ಸ್ವಾಮಿ ನಾಯಕ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವು ಯಶಸ್ವಿಯಾಗಿ ಈ ಪ್ರಕರಣವನ್ನು ಭೇದಿಸಿದೆ.,

ಹಳೇಬೀಡು(5), ಬೇಲೂರು(3), ಗಂಡಸಿ(1) ಪಿರಿಯಾಪಟ್ಟಣ(1) ಸೇರಿದಂತೆ ಒಟ್ಟು 10 ದೇವಸ್ಥಾನಗಳಲ್ಲಿ ದೇವರ ಹುಂಡಿ ಮತ್ತು ಬೈಕ್ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿ,  29,534 ರೂ ನಗದು ಹಾಗೂ 2.20 ಲಕ್ಷ ಬೆಲೆಯ 2 ಬೈಕ್ ಗಳನ್ನು ವಶಕ್ಕೆ ಪಡೆಯಲಾಯಿತು.
ಹಳೇಬೀಡು ವೃತ್ತ ನಿರೀಕ್ಷಕರಾದ ಶ್ರೀಕಾಂತ್ ಮತ್ತು ಹಳೇಬೀಡು ಠಾಣೆಯ ಪಿಎಸ್ಐ ಶಿವನಗೌಡ ಜಿ ಪಾಟೀಲ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.,

ಇಂದು ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವ ಸಮಿತಿ ಸಭೆ ನಡೆಸಿ, ಅಕ್ರಮ ಮದ್ಯದ ಸಮಸ್ಯೆಗಳು ಮತ್ತು ಚುನಾವಣಾ ಸಂಬಂಧಿತ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
Conducted youth committee meeting in all station limits today.Discussions regarding problems of illicit liquor and election related issues were discussed among other things.,

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ IAS, IPS, IRS ಹಾಗೂ KAS ಅಧಿಕಾರಿಗಳ ಸಹಭಾಗಿತ್ವದಲ್ಲಿ ಸಕಲೇಶಪುರದ ಡಾ.ಅಂಬೇಡ್ಕರ್ ಭವನದಲ್ಲಿ ದಿನಾಂಕ: 02/02/2023ರಂದು ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸುಮಾರು 1200 ಸ್ಪರ್ಧಾರ್ಥಿ/ವಿದ್ಯಾರ್ಥಿಗಳಿಗೆ  UPSC, KPSC ಹಾಗು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧಾರ್ಥಿಗಳು ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ತಿಳಿಸಿಕೊಡಲಾಯಿತು.
ಕಾರ್ಯಾಗಾರದಲ್ಲಿ – ಹರಿರಾಮ್ ಶಂಕರ್ IPS ಪೊಲೀಸ್ ವರಿಷ್ಠಾಧಿಕಾರಿಗಳು.
-ಮಿಥುನ್ HN.  IPS ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳು.
-ಅನ್ಮೋಲ್ ಜೈನ್ IAS ಉಪವಿಭಾಗಾಧಿಕಾರಿಗಳು.
-ದರ್ಶನ್. IRS
ಸಹಾಯಕ ತೆರಿಗೆ ಆಯುಕ್ತರು.
-ವಿನಯ್. IRS
ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕರು.
-ಶಿಲ್ಪ. RFO – ವಲಯ ಅರಣ್ಯಾಧಿಕಾರಿಗಳು. -ಮೇಘನಾ. KAS – ತಹಸೀಲ್ದಾರ್  ರವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.,

ಮಲ್ಲಪ್ಪನಬೆಟ್ಟ ಪೊಲೀಸ್ ಚೌಕಿ ಉದ್ಘಾಟನೆ:
ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೇಮಾರನಹಳ್ಳಿಯ ಮಲ್ಲಪ್ಪನಬೆಟ್ಟವು ಅರಣ್ಯ ಪ್ರದೇಶ ಹಾಗೂ ಗಡಿ ಪ್ರದೇಶವಾಗಿದ್ದರಿಂದ ಈ ಭಾಗದಲ್ಲಿ ಭದ್ರತಾ ದೃಷ್ಟಿಯಿಂದ ಪೊಲೀಸ್ ಚೌಕಿ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಯಿತು.


LEAVE A REPLY

Please enter your comment!
Please enter your name here