ಹಾಸನದಲ್ಲಿ ನಡೆದ ನೇಮಕ ರ‌್ಯಾಲಿಯಲ್ಲಿ ಸೈನ್ಯಕ್ಕೆ ಸೇರಿಕೊಂಡಿದ್ದ ಸೇನಾನಿ ಆತ್ಮಹತ್ಯೆಗೆ ಶರಣು

0

ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಹಂಪನಗುಪ್ಪೆ ಗ್ರಾಮದ ಸೈನಿಕ ಆತ್ಮಹತ್ಯೆ

ಆಲೂರು: ಇಂಡಿಯನ್ ಆರ್ಮಿಯ  ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಹಂಪನಗುಪ್ಪೆ  ಗ್ರಾಮದ ಹೆಚ್. ಯೋಗೇಶ್ (28) ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಂಪನಗುಪ್ಪೆ ಗ್ರಾಮದ ರೈತ ಹರೀಶ್ ಎಂಬುವವರ ಎರಡನೇ ಮಗನಾದ ಯೋಗೇಶ್  ರವರ ಅಂತ್ಯಕ್ರಿಯೆ ಹಂಪನಗುಪ್ಪೆ ಗ್ರಾಮದಲ್ಲಿ ಮಂಗಳವಾರ ರಾತ್ರಿ  ನೆರವೇರಲಿದೆ.

ಕಿರಿಯ ಮಗನಾದ ಯೋಗೇಶ್ ಅವರು 2011ರಲ್ಲಿ ಹಾಸನದಲ್ಲಿ ನಡೆದ  ನೇಮಕ ರ‌್ಯಾಲಿಯಲ್ಲಿ ಸೈನ್ಯಕ್ಕೆ ಸೇರಿಕೊಂಡಿದ್ದರು. ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ

ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಜ.4 ರಂದು ಕರ್ತವ್ಯಕ್ಕೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ ಯೋಗೇಶ್ ಪತ್ನಿ ದೀಕ್ಷಾ ಹಾಗೂ ಕುಟುಂಬಸ್ಥರೊಂದಿಗೆ ಒಂದು ತಿಂಗಳಿಂದ ಚೆನ್ನಾಗಿದ್ದರು.

LEAVE A REPLY

Please enter your comment!
Please enter your name here