ಕಹಿಯಾಗಿರುವ ಕಪ್ಪು ದ್ರಾಕ್ಷಿಯ ಉಪಯೋಗಗಳು ಹಲವಾರು. ಕಪ್ಪು ದ್ರಾಕ್ಷಿ ಅತ್ಯಂತ ಪ್ರಾಚೀನ ಹಣ್ಣು.ಇದನ್ನು ಹಲವರು ಒಣದ್ರಾಕ್ಷಿಯ ರೂಪದಲ್ಲಿ ಹಾಗೂ ಜ್ಯೂಸ್ ರೀತಿಯಲ್ಲಿ ಸೇವಿಸುತ್ತಾರೆ.
ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ , ಪೊಟ್ಯಾಸಿಯಂ ಕಾರ್ಬೊಹೈಡ್ರೇಟ್ ಅಂಶವಿದೆ ಹಾಗಾಗಿ ಇದು ನಮಗೆ ಬಹಳ ಉಪಯೋಗಕಾರಿ.
ಪ್ರಯೋಜನಗಳು:
• ಹೃದಯ ಸಮಸ್ಯೆಗಳನ್ನು ತಡೆಯುತ್ತದೆ:
ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಹೃದಯ ಆಘಾತಕ್ಕೆ ಮುಖ್ಯಕಾರಣ ಕಪ್ಪುದ್ರಾಕ್ಷಿ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ, ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರುವ ಹಾಗೆ ಮಾಡುತ್ತದೆ. ಇದರಿಂದ ನಾವು ಹಲವಾರು ಹೃದಯಾಘಾತವನ್ನು ತಡೆಯಬಹುದು.
• ತೂಕ ಇಳಿಸಲು ಸಹಾಯಕಾರಿ:
ನಮ್ಮ ದೇಹದಲ್ಲಿರುವ ವಿಷಕಾರಿ, ಅನಗತ್ಯ ಅಂಶಗಳನ್ನು ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ಸ್ ತೆಗೆದುಹಾಕುತ್ತದೆ ಹಾಗಾಗಿ ನಮ್ಮ ದೇಹದ ತೂಕ ಸುಲಭವಾಗಿ ಇಳಿಯುತ್ತದೆ.
• ದೃಷ್ಟಿ ಸಮಸ್ಯೆಗಳನ್ನು ಸುಧಾರಿಸುತ್ತದೆ:
ಕಪ್ಪು ದ್ರಾಕ್ಷಿಯಲ್ಲಿ ಲುಟೀನ್ ಮತ್ತು ಝೀಕ್ಸಾಂಥಿನ್ ಎನ್ನುವ ಅಂಶವಿದೆ ಇದು ನಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಣೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ.
ಕಪ್ಪು ದ್ರಾಕ್ಷಿ ಕಹಿಯಾಗಿದ್ದರೂ ಇದರಲ್ಲಿರುವ ವಿಟಮಿನ್ ಅಂಶ ನಮ್ಮ ಚರ್ಮಕ್ಕೆ ನಮ್ಮ ದೇಹಕ್ಕೆ ಬಹಳ ಒಳ್ಳೆಯದು ಹಾಗಾಗಿ ಕಪ್ಪುದ್ರಾಕ್ಷಿಯನ್ನು ಸೇರಿಸಿ ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಿ.
-ತನ್ವಿ. ಬಿ