ನನ್ನ ಕಸ ನನ್ನ ಹೊಣೆ ಅಭಿಯಾನದ ಅಂಗವಾಗಿ ರೋಟರಿ ಹಾಸನ ಕ್ಲಬ್ ವತಿಯಿಂದ ಬಿತ್ತಿ ಪತ್ರ ಮತ್ತು ಬಟ್ಟೆ ಕೈ ಚೀಲಗಳನ್ನು ವಿತರಿಸಲಾಯಿತು. ಕರ್ನಾಟಕ ಮುಕ್ತವಿಶ್ವವಿದ್ಯಾಲಯದ ಪ್ರಾದೇಶಿಕ ಅಧಿಕಾರಿ ಶ್ರೀ ಹರೀಶ್ ರವರಿಗೆ ರೋಟರಿ ಅಧ್ಯಕ್ಷ ಶ್ರೀ ಜಯರಾಂ , ಕಾರ್ಯದರ್ಶಿ ಚಂದ್ರಶೇಖರ್ ಮತ್ತು ಇತರ ಸದಸ್ಯರು ಹಸ್ತಾಂತರಿಸಿದರು. ಸ್ವಚ್ಚ ಮತ್ತು ಪ್ಲಾಸ್ಟಿಕ್ ಮುಕ್ತ ಹಾಸನದ ಕನಸಿನ ಹಾದಿಯಲ್ಲಿ ಇದು ರೋಟರಿ ಹಾಸನದ ಒಂದು ಪುಟ್ಟ ಹೆಜ್ಜೆ.