ನಿಮ್ಮ ತ್ವಚೆ ಯಾವಾಗಲೂ ಬಲವಾಗಿ ಸುಂದರವಾಗಿ ಕಾಣಬೇಕೆಂದರೆ ಅದಕ್ಕೆ ಒಂದೇ ಪರಿಹಾರ ಮುಲ್ತಾನಿ ಮಟ್ಟಿ. ಕಣ್ಣ ಸುತ್ತ ಕಪ್ಪು ಕಲೆಗಳು, ಮೊಡವೆಗಳಿಗೆ ವಿದಾಯ ಹೇಳಿ.
ಪುರಾತನ ಕಾಲದಿಂದಲೂ ಈ ಮುಲ್ತಾನಿ ಪಟ್ಟಿಯನ್ನು ಹಲವರು ಉಪಯೋಗಿಸುತ್ತಿದ್ದಾರೆ. ಇದನ್ನು ಹಚ್ಚಿಕೊಂಡು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಆದರೆ ಇದನ್ನು ಯಾವ ರೀತಿ ಹಚ್ಚಿಕೊಳ್ಳಬೇಕು?
ಮುಲ್ತಾನಿ ಮಟ್ಟಿ ಯೊಂದಿಗೆ ಹಲವಾರು ರೀತಿಯ ಪೇಸ್ಟ್ ಗಳನ್ನು ತಯಾರಿಸಿ ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಬಹುದು.
• ಮುಲ್ತಾನಿ ಮಟ್ಟಿಯನ್ನು ನೀರಿನಲ್ಲಿ ಕಲಿಸಿಕೊಂಡು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು. ನಿಮ್ಮ ಮುಖಕ್ಕೆ ಹಚ್ಚಿಕೊಂಡ ಮೇಲೆ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಬೇಕು.ಇದು ನಿಮ್ಮ ಮುಖದ ಕಲೆಗಳನ್ನು ತೊಲಗಿಸಲು ಸಹಕಾರಿಯಾಗುತ್ತದೆ ವಾರಕ್ಕೆ ಒಂದು ಬಾರಿ ಈ ಪೇಸ್ಟನ್ನು ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಸಾಕು.
• ಮುಲ್ತಾನಿ ಮಟ್ಟಿಯನ್ನು ಗಂಧದ ಜೊತೆಗೆ ಮತ್ತು ಟೊಮ್ಯಾಟೊ ಜ್ಯೂಸ್ ಜೊತೆಗೆ ಸೇರಿಸಿಕೊಂಡು ತಯಾರಿಸಿ ಪ್ರತಿದಿನ ಹಚ್ಚಿಕೊಂಡರೆ ಮೊಡವೆಗಳು ದೂರವಾಗಿ ಸುಂದರವಾದ ತ್ವಚೆ ನಿಮ್ಮದಾಗುತ್ತದೆ.
• ಮುಲ್ತಾನಿ ಮಟ್ಟಿ ಯನ್ನು ಹಾಲಿನೊಂದಿಗೆ ಬೆರೆಸಿ ಕೊಂಡು ಪೇಸ್ಟ್ ತಯಾರಿಸಿಕೊಂಡು ನಿಮ್ಮ ಮುಖದ ಮೇಲೆ ಹಚ್ಚಿಕೊಂಡರೆ ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳು ತೊಲಗುತ್ತವೆ.
ಹೀಗೆ ದುಬಾರಿ ಫೇಶಿಯಲ್ ಗಳಿಗೆ ನಿಮ್ಮ ಹಣವನ್ನು ಉಪಯೋಗಿಸುವ ಬದಲು ಮನೆಯಲ್ಲಿ ನೈಸರ್ಗಿಕವಾಗಿ ನಿಮ್ಮ ಫೇಸ್ ಪ್ಯಾಕ್ ಗಳನ್ನು ತಯಾರಿಸಿಕೊಂಡು ನಿಮ್ಮ ಮುಖವನ್ನು ಹೆಚ್ಚು ಆಕರ್ಷಕವಾಗಿ ಮಾಡಿಕೊಳ್ಳಿ.
-ತನ್ವಿ ಬಿ