ಹಾಸನ : ದೈಹಿಕ ಮತ್ತು ಮಾನಸಿಕ ಲವಲವಿಕೆ ಇಲ್ಲದೆ ಬೊಜ್ಜುತನ ಉಳ್ಳವರಲ್ಲಿ ಸಕ್ಕರೆ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ವಯೋವೃದ್ಧರು ಅಲ್ಲದೆ ಯುವಕರಲ್ಲೂ ಸಹ ಕಂಡುಬರುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷಡಾ|| ಎನ್. ರಮೇಶ್ ವಿಷಾದಿಸಿದರು
ಭಾರತೀಯ ವೈದ್ಯಕೀಯ ಸಂಘ ಹಾಸನ ಶಾಖೆಯಿಂದ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ತಜ್ಞ ವೈದ್ಯರುಗಳೊಂದಿಗೆ ಸಂವಾದ ಕಾರ್ಯಕ್ರಮ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಕುಮಾರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘ ರಾಜ್ಯ ಉಪಾಧ್ಯಕ್ಷರಾದ ಡಾ.ಕೆ ನಾಗೇಶ್, ತಜ್ಞ ವೈದ್ಯರಾದ ಡಾ ಎಂ ಆರ್ ಪದ್ಮಪ್ರಸಾದ್, ಪ್ರಸೂತಿ ತಜ್ಞರಾದ ಡಾ. ಏ.ಸಾವಿತ್ರಿ, ಮೂತ್ರ ಪಿಂಡ ತಜ್ಞರಾದ ಡಾ.ಪವನ್, ಡಾ. ಮಧುಸೂದನ್, ನೇತ್ರತಜ್ಞ ಡಾ.ಶಿವಪ್ರಸಾದ್, ಹೃದಯ ತಜ್ಞ ಡಾ ಅನುಪ್ ರವರು ಭಾಗವಹಿಸಿದ್ದರು.
ಸಂವಾದದಲ್ಲಿ ಸಾರ್ವಜನಿಕರು ಸಕ್ಕರೆ ಕಾಯಿಲೆಯ ಬಗ್ಗೆ ತಜ್ಞ ವೈದ್ಯರಿಂದ ಮಾಹಿತಿಯನ್ನು ಪಡೆದುಕೊಂಡರು.ಡಾ.ವಾಗೀಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.