ಕೋವಿಡ್-19 ಲಸಿಕೆ ಸಂಬದಿಸಿದಂತೆ ಲಸಿಕೆಯನ್ನು ಶೇಖರಣೆ, ನಿರ್ವಹಣೆ, ವಿತರಣೆ ಮತ್ತು ತಂತ್ರಾಂಶದ ಬಗ್ಗೆ ಸಂಬದಿಸಿದಂತೆ ದತ್ತಾಂಶ ವಿವರಣೆಯನ್ನು ಆದಷ್ಟು ಬೇಗ ಅಪಲೋಡ್ ಮಾಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ಅಧಿಕಾರಿ ಅರುಂದತಿಯವರು ತಿಳಿಸಿದ್ದಾರೆ.
ಇಂದು ಎಲ್ಲಾ ಜಿಲ್ಲಾದಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ ಕೋವಿಡ್-19 ಪೂರ್ವ ಸಿದ್ದತೆ ಮತ್ತು ವ್ಯಾಕ್ಸಿನೇಶನ್ ಇಡುವ ಸ್ಥಳದ ಬಗ್ಗೆ ಚರ್ಚಿಸಿದರು.
ವಿಡಿಯೋ ಸಂವಾದ ನಂತರ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ರವರು ಮಾತನಾಡಿ ಕೋವಿಡ್ 19 ಲಸಿಕೆ ಶೇಖರಣೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್, ಆರ್.ಸಿ.ಎಚ್ ಅಧಿಕಾರಿ ಡಾ|| ಕಾಂತರಾಜ್, ಕೋವಿಡ್ ನೋಡಲ್ ಅಧಿಕಾರಿ ಡಾ. ಅನುಪಮ ಮತ್ತಿತರಿದ್ದರು.