ಜಿಲ್ಲಾಡಳಿತ ದೊಂದಿಗೆ ಮುಖ್ಯಮಂತ್ರಿ ವಿಡಿಯೋ ಸಂವಾದಕ್ಕೆ ಹೈಲೈಟ್ಸ್ !! 👇

0

ಹಾಸನ ಮೇ.17 : ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೊಂಕು ಹರಡುವಿಕೆ ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿದ್ದು ಅದಕ್ಕೆ ಕಡಿವಾಣ ಹಾಕಬೇಕಿದೆ ಜಿಲ್ಲಾಡಳಿತ ಈ ಬಗ್ಗೆ ಎಲ್ಲಾ ರೀತಿಯ ಅಗತ್ಯ ಕ್ರಮವಹಿಸಬೇಕಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಸೊಂಕಿನ ಪರಿಸ್ಥಿತಿ ಹೆಚ್ಚಿರುವ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಇತರ ಪ್ರಮುಖ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಕೋವಿಡ್ 19 ನಿಯಂತ್ರಣಕ್ಕೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದು ನಾಳಿನ ಪ್ರಧಾನ ಮಂತ್ರಿಯವರು ನಡೆಸುವ ವೀಡಿಯೋ ಸಂವಾದದಲ್ಲಿ ವಾಸ್ತವ ವರದಿ ನೀಡುವಂತೆ ತಿಳಿಸಿದರು.

ಮನೆಯಲ್ಲಿ ಸೌಲಭ್ಯ ಇಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರ ಮಾಡಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಔಷಧಿ ವಿತರಿಸಿ ಪ್ರತಿದಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಿರಿ ಎಂದು ಅವರು ನಿರ್ದೇಶನ ನೀಡಿದರು.

ಕೋವಿಡ್ ಜೊತೆಗೆ ಸಮಸ್ಯೆ ಯಾಗಿ ಕಾಣುತ್ತಿರುವ ಬ್ಲಾಕ್ ಫಂಗಸ್ ಬಗ್ಗೆ ಹರಡದಂತೆ ನಿಗಾವಹಿಸಿ. ಈಗಲೆ ತಜ್ಞ ವೈದ್ಯರ ತಂಡ ರಚಿಸಿದ್ದು, ಜಾಗೃತಿವಹಿಸಿ ಎಂದರು.

ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಹಾಗೂ ಹಾಸನ ಜಿಲ್ಲಾಧಿಕಾರಿ ಅರ್ ಗಿರೀಶ್ ಅವರು ಹಾಸನ ಜಿಲ್ಲೆಯ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಯವರಿಗೆ ಮನವರಿಕೆ ಮಾಡಿಕೊಟ್ಟರು.

ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ಇದೆ ಹಾಲಿ 11 ಕೆ.ಎಲ್ ಜೊತೆಗೆ ಹೆಚ್ಚುವರಿ 4 ಕೆ.ಎಲ್ ನಿಗಧಿ ಪಡಿಸಲಾಗಿದೆ ಆದರೆ ಅದನ್ನು ತರಲು ಜಿಲ್ಲೆಯಲ್ಲಿ ಟ್ಯಾಂಕರ್ ವ್ಯವಸ್ಥೆ ಇಲ್ಲ ಹಾಲಿ 350 ಹೆಚ್ಚುವರಿ ಬೆಡ್‍ಗಳು ಸಿದ್ದವಾಗುತ್ತಿದ್ದು, ರಾಜ್ಯದಿಂದ ಆಮ್ಲಜನಕ ಪೂರೈಕೆಯಾದ ತಕ್ಷಣ ಅವುಗಳನ್ನು ಆಮ್ಲಜನಕ ಬೆಡ್‍ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.ರೆಮ್ಡಿಸಿವರ್ ಇಂಜೆಕ್ಷನ್ ಹಾಗೂ ಔಷಧಿ ಪೂರೈಕೆಯಲ್ಲಿ ಕೊರತೆ ಇದನ್ನು ಸರಿ ಪಡಿಸಬೇಕು .ಹಾಲಿ ಸ್ಥಳೀಯವಾಗಿ ಖರೀದಿ ಮಾಡಲಾಗುತ್ತಿದೆ. ಎಸ್.ಡಿ.ಆರ್ ಎಫ್ ನಿಧಿಯಿಂದ ಔಷಧಿ ಖರೀದಿಗೆ ಅನುಮತಿ ನೀಡಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್‍ಗೌಡ, ಗೊವಿಂದ್ ಕಾರಾಜೋಳ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಸುಧಾಕರ್ ಅವರು ಜಿಲ್ಲಾವಾರು ಅಹವಾಲು ಆಲಿಸಿ ಸಲಹೆ ಸೂಚನೆ ನೀಡಿದರು.

ಉಪ ಮುಖ್ಯಮಂತ್ರಿ ಡಾ ಅಶ್ವತ್ ನಾರಾಯಣ ಅವರು ಮಾತನಾಡಿ ರೆಮ್ಡಿಸಿವರ್ ಸಾಕಷ್ಟು ಲಭ್ಯ ಇದೆ ಮನವಿ ಆಧಾರದ ಮೇಲೆ ಕೊಡಲಾಗು ತ್ತಿದೆ. ಇದೇ ರೀತಿ ಔಷಧಿ ಕೂಡ ಸಾಕಾಗುವಷ್ಟು ದಾಸ್ತಾನು ಮಾಡಲಾಗಿದೆ ಕಳಿಸಲಾಗು ವುದು ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ ಸುಧಾಕರ್ ಅವರು ಮಾತನಾಡಿ
ಹಳ್ಳಿಗಳಲ್ಲಿ ಸೂಕ್ತ ಸೌಲಭ್ಯ ಕೊರತೆಯಿಂದ ಮನೆ ಮಂದಿಗೆಲ್ಲಾ ಸೊಂಕು ಹರಡುತ್ತಿದೆ ಹಾಗಾಗಿ ಸೂಕ್ತ ವ್ಯವಸ್ಥೆ ಇಲ್ಲದ ಮನೆಗಳಿಂದ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಎಂದರು.

ಬ್ಲ್ಯಾಕ್ ಫಂಗಸ್ ಬಗ್ಗೆ ತುಂಬಾ ಆತಂಕ ಬೇಡ, ಇದು ಹಿಂದಿನಿಂದಲು ಇರುವ ಸಮಸ್ಯೆ ಇದೆ ಸ್ವಲ್ಲ ಈಗ ಹೆಚ್ಚಾಗಿ ಇದೆ. ಇದಕ್ಕಾಗಿ ಸಲಹಾ ಸಮಿತಿ ರಚಿಸಲಾಗಿದ್ದು ಇದರ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಸರ್ಕಾರ ಆ ಬಗ್ಗೆಯೂ ಗಮನ ಹರಿಸಿದೆ ಎಂದರು.

ಜಿಲ್ಲೆಗಳಲ್ಲಿ ಆಮ್ಲಜನಕ ಜನರೇಟರ್ ಪ್ರಮಾಣ ಹೆಚ್ಚಿಸಬೇಕಿದೆ. ಹೋಂ ಐಸೋಲೇಷನ್ ಸರಿ ಇಲ್ಲದ ಕಾರಣ ಗ್ರಾಮೀಣ ಪ್ರದೇಶದಲ್ಲಿ ಸೊಂಕು ಹೆಚ್ಚುತ್ತಿದೆ. ಇದರಲ್ಲಿ ಜಿಲ್ಲಾಡಳಿತ ಗಮನ ಹರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ, ಹಿಮ್ಸ್ ನಿರ್ದೇಶಕರಾದ ಡಾ. ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here