ಫ್ಯಾಷನ್ ಡಿಸೈನಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಲೈಬ್ರರಿ ಅಂಡ್ ಇನ್‍ಫರ್‍ಮೇಷನ್ ಸೈನ್ಸ್ ಕೋರ್ಸ್‍ ಕಲಿಯಲಿಚ್ಚಿಸುವವರು ??

0

ಹಾಸನ,ನ.04(ಹಾಸನ_ನ್ಯೂಸ್):- ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಹಾಸನ ಇಲ್ಲಿ 2020-21ನೇ ಸಾಲಿನ ಡಿಪ್ಲೊಮಾ ಪ್ರವೇಶಾತಿಯ ಪ್ರಥಮ ವರ್ಷಕ್ಕೆ ಆಫ್‍ಲೈನ್ ಮೂಲಕ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಮಹಿಳೆಯರಿಗಾಗಿ 3 ವರ್ಷದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್, ಫ್ಯಾಷನ್ ಡಿಸೈನಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಲೈಬ್ರರಿ ಅಂಡ್ ಇನ್‍ಫರ್‍ಮೇಷನ್ ಸೈನ್ಸ್ ಕೋರ್ಸ್‍ಗಳ ಬಾಕಿ ಉಳಿದಿರುವ ಸೀಟುಗಳಿಗೆ ಪ್ರವೇಶಾತಿಯನ್ನು ನ.14 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಂಸ್ಥೆಗೆ ನಿಗದಿತ ದಿನಾಂಕದೊಳಗೆ ಸಂಸ್ಥೆಗೆ ಬಂದು ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಪ್ರವೇಶ ಬಯಸಿ ಮೊದಲು ಬಂದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಿ ಪ್ರವೇಶಾತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರಾದ ಡಾ. ಮಹದೇವ ಪ್ರಸಾದ್ ಎಂ.ಎಸ್. ಇವರ ದೂರವಾಣಿ ಸಂಖ್ಯೆ: 9886394884 ಮತ್ತು ಸಂಸ್ಥೆಯ ದೂರವಾಣಿ ಸಂಖ್ಯೆ: 08172-262201,08172-268349ಗೆ ಸಂಪರ್ಕಿಸಬಹುದು – ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ , ಹಾಸನ ನಗರ

ಸರ್ಕಾರಿ ಪಾಲಿಟೆಕ್ನಿಕ್ ಪ್ರವೇಶಾತಿ ಅವಧಿ ವಿಸ್ತರಣೆ
ಹಾಸನ,ನ.03 ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್ ಮೊಸಳೆಹೊಸಳ್ಳಿ ಸಂಸ್ಥೆಯಲ್ಲಿ ಸಿವಿಲ್, ಸಿ.ಎಸ್, ಇ&ಸಿ ಹಾಗೂ ಇ&ಇ ವಿಭಾಗಗಳಲ್ಲಿ ಖಾಲಿ ಉಳಿದಿರುವ ಪ್ರಥಮ ವರ್ಷದ ಎಸ್.ಎಸ್.ಎಲ್.ಸಿ. ಮುಖೆನಾ ಹಾಗೂ 2 ವರ್ಷಗಳ ಐ.ಟಿ.ಐ/ ದ್ವತೀಯ ಪಿ.ಯು.ಸಿ(ವಿಜ್ಞಾನ/ ತಾಂತ್ರಿಕ ವಿಷಯ)ಯಲ್ಲಿ ಉತ್ತೀರ್ಣ/ ಅನುತ್ತೀರ್ಣರಾದ ಅರ್ಹ ಅಭ್ಯರ್ಥಿಗಳ ಸೀಟುಗಳಿಗೆ ಪ್ರಾಂಶುಪಾಲರ ಹಂತದಲ್ಲಿಯೇ ಪ್ರವೇಶ ನೀಡಲು ಆಫ್‍ಲೈನ್ ಮೂಲಕ ಅರ್ಜಿಯ ಅವಧಿಯನ್ನು ವಿಸ್ತರಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ನ.14 ರೊಳಗೆ ಪ್ರವೇಶ ಪಡೆಯಬಹುದಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ದೂರವಾಣಿ ಸಂಖ್ಯೆ: 9448772224/ 9901229382ಗೆ ಸಂಪರ್ಕಿಸಬಹುದಾಗಿದೆ.


LEAVE A REPLY

Please enter your comment!
Please enter your name here