ಮನೆ ತಲುಪೋಕೆ ಅರ್ಧ ಕಿಮೀ ಅಷ್ಟೇ ಬಾಕಿ ಇತ್ತು ಪರೀಕ್ಷೆ ಮುಗಿಸಿ ವಾಪಸ್ ಬರ್ತಿದ್ದ ವಿದ್ಯಾರ್ಥಿನಿ ಸಾವು!

0

ಹಾಸನ / ಶ್ರವಣಬೆಳಗೊಳ : ರಸ್ತೆ ಅಪಘಾತಕ್ಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ರಾಚೇನಹಳ್ಳಿ ಗ್ರಾಮದ MSC ವಿದ್ಯಾರ್ಥಿನಿ ಪೂಜಾ (21ವರ್ಷ) ಬಲಿ

ನಿನ್ನೆ (25july2021) ಬೆಳಗ್ಗೆ ಪರೀಕ್ಷೆಗೆಂದು ಮೈಸೂರಿಗೆ ಹೋಗಿದ್ದ ವಿದ್ಯಾರ್ಥಿನಿ ಸಂಜೆ ಊರಿಗೆ ವಾಪಸ್ ಬರುವ ವೇಳೆಗೆ ಸಂಜೆ ಚನ್ನರಾಯಪಟ್ಟಣಕ್ಕೆ ಬಂದು ತನ್ನ ತಂದೆಗೆ ಕರೆ ಮಾಡಿದ ಪೂಜಾ , ಮಗಳ ಕರೆಗೆ ಒಗೊಟ್ಟು ಮನೆಗೆ ಕರೆದುಕೊಂಡು ಬರಲು ಹೋದ ತಂದೆ ವಾಪಸ್ ಮನೆಕಡೆ ಕರೆದುಕೊಂಡು ಬರುವಾಗ ದುರದೃಷ್ಟವಶಾತ್ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದಿದೆ ಇನ್ನೇನು ಮನೆ ತಲುಪಲು ಕೇವಲ 500 ಮೀಟರ್ ಬಾಕಿ ಅಷ್ಟೇ ಇರುವಾಗ ವಿಧಿ ಅಪಘಾತದಿಂದ ಓದಿ ಸಾಧಿಸಿ ಬಾಳಿ ಬದುಕ ಬೇಕಿದ್ದ ಯುವತಿ ಇನ್ನಿಲ್ಲ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಮಗಳ ಸ್ಥಳೀಯರ ಸಹಾಯದಿ ಆಸ್ಪತ್ರೆಗೆ ಸೇರಿಸಿದರೂ , ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪೂಜಾ ಸಾವನ್ನಪ್ಪಿದ್ದಾಳೆ

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಎಷ್ಟೇ ಆದರೂ ಮಗಳು , ಹಲವಾರು ನಿರೀಕ್ಷೆ ಗಳು ಪೋಷಕರ ಮನದಲ್ಲಿ ಅಚ್ಚಾಗಿ ಇದ್ದ ಸಮಯವದೂ , ಪೂಜಾಗೂ ಚೆನ್ನಾಗಿ ಓದಿ ಪೋಷಕರ ನೆರವಿಗೆ ನಿಲ್ಲೋ ಅಕಾಂಕ್ಷಿ ಇದ್ದು ಹುಡುಗಿ ಆದರೆ ಇನ್ನಿಲ್ಲಕಾರು ಚಾಲಕನ ಅಜಾಗರೂತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ , ಈ ಪ್ರಕರಣ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖಾ ಹಂತದಲ್ಲಿದೆ

ಸೂಚನೆ : ವಾಹನ ಚಾಲನೆ ಅವಶ್ಯಕ , ನಿಧಾನ ಹಾಗೂ ರಸ್ತೆ ಸಂಚಾರದ ನಿಯಮ ಅತ್ಯವಶ್ಯಕ , ಪ್ರತಿಯೊಂದು ಜೀವ ಸಂಕುಲ ಬದುಕಲು ಅರ್ಹ ಅಜಾಗುರತೆ ದುರುಂತಕ್ಕೆ ರಹದಾರಿ . ಜವಾಬ್ದಾರಿ ಸಂಯಮ ಅರಿತು ಬಾಳೋಣ

ಧನ್ಯವಾದಗಳು

LEAVE A REPLY

Please enter your comment!
Please enter your name here