ಯುವ ಉದ್ಯಮಿಗಳಾಗುವ ಕನಸು ಕಂಡಿದ್ದ ನಾಲ್ವರು ಗೆಳೆಯರು , ಮುಂಬೈ ಮಾರ್ಗ ಮಧ್ಯೆ ಮೂವರ ಸಾವು

0

ಧಾರವಾಡದ ಬಳಿ ಲಾರಿ ಮತ್ತು ಕಾರ್ ನಡುವೆ
ಭೀಕರ ಅಪಘಾತ ಹಾಸನ ಮೂಲದ ಮೂವರ ಸಾವು ಒಬ್ಬನ ಸ್ಥಿತಿ ಗಂಭೀರ

ಹಾಸನ / ಧಾರವಾಡ ; ಭೀಕರ ಲಾರಿ ಮತ್ತು ಕಾರಿನ ನಡುವೆ ಧಾರವಾಡದ ಬಳಿ ಸಂಭವಿಸಿದ ಅಪಘಾತದಲ್ಲಿ,
ಕಾರ್ಯನಿಮಿತ್ತ ಮುಂಬೈಗೆ ಕಾರಿನಲ್ಲಿ ತೆರಳುತ್ತಿದ್ದ ಹಾಸನ ಜಿಲ್ಲೆಯ ಹೊಳೇನರಸೀಪುರದ ಪಟ್ಟಣದ ನಾಲ್ವರು ಯುವಕರಲ್ಲಿ ಮೂವರು ಮೃತಪಟ್ಟಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಯುವ ಉದ್ಯಮಿಗಳಾಗುವ ಕನಸು ಕಂಡಿದ್ದ ನಾಲ್ವರು ಗೆಳೆಯರು ನೂತನವಾಗಿ ರೆಸಾರ್ಟ್ ಪ್ರಾರಂಭಿಸುವ ಮನಸು ಮಾಡಿದ್ದರು, ಕೆಲಸದ ನಿಮಿತ್ತ ಮುಂಬೈಗೆ ತಮ್ಮ ಬಿಳಿಯ ಬಣ್ಣದ ಕಾರು ಹೊಂಡೈ ಐ-20 ,
ಕೆ.ಎ. 13-ಪಿ. 4301 ನಲ್ಲಿ ತೆರಳುವಾಗ ಲಾರಿಯ ರೂಪದಲ್ಲಿ ಜವರಾಯ ಅಟ್ಟಹಾಸ ಮರೆದಿದ್ದು,
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ,

ಹೊಳೆನರಸೀಪುರದ ನಿವಾಸಿ ದೀಪಕ್,ಕ್ಯಾತನಹಳ್ಳಿಯ ಚಂದನ್ ಮತ್ತು ಕಾರು ಮಾಲೀಕ ಮಡಿಕೇರಿ ಪುಟ್ಟ ಮೃತ ಪಟ್ಟಿದ್ದು, ಹಳ್ಳಿ ಮೈಸೂರಿನಲ್ಲಿ ಮೊಬೈಲ್ ಸೆಂಟರ್ ನಡೆಸುತ್ತಿದ್ದ ಕಿರಣ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನೆಂದು ಮಾಹಿತಿ ಲಭ್ಯವಾಗಿದೆ,

ಮೃತ ದೀಪಕ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಪಟ್ಟಣದ ಪುರಸಭಾ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು.

LEAVE A REPLY

Please enter your comment!
Please enter your name here