ಹಾಸನ ನಗರದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಒಂದೇ ಕುಟುಂಬದ ಮೂವರ ಸಾವು

0

ಹಾಸನ ನಗರದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತ ! , ಬೈಕನ್ನು ಗುದ್ದಿದ ಲಾರಿ ಚಾಲಕ ಗವೇನಳ್ಳಿಯಿಂದ ಹೊಸಕೊಪ್ಪಲು ಬೈಪಾಸ್ ವರೆಗೂ ಉಜ್ಜಿಕೊಂಡು ಬಂದ ಹೊಡೆತಕ್ಕೆ ಸಣ್ಣ ಮಗುವಿನ ದೇಹ ನುಚ್ಚು ನೂರು , !!
ಘಟನೆ : ದಿನಾಂಕ 19/12/ 2021 ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದ್ದು ., ಒಂದೇ ಕುಟುಂಬದ ನಾಲ್ವರಲ್ಲಿ ಇಬ್ಬರು ಅವಳಿಜವಳಿ ಮಕ್ಕಳು ಸಾವನ್ನಪ್ಪಿದ್ದು ಇದೀಗ ಅವಳಿ ಮಕ್ಕಳ ತಾಯಿಯು ಅಸುನೀಗಿದ ವರದಿಯಾಗಿದ್ದು , ಗವೇನಹಳ್ಳಿ ಶಿವಾನಂದ್ ಸ್ಥಿತಿ ಸೋಚನೀಯವಾಗಿದ್ದು , ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ .ಸ್ಥಳೀಯರು ಲಾರಿ ಚಾಲಕನನ್ನು ಸೆರೆಯಿಡಿದಿದ್ದು , ಪೊಲೀಸರು ವಶಕ್ಕೆ ಪಡೆದಿದ್ದಾರೆ , ಬೈಕ್ ನಲ್ಲಿದ್ದ ಮಕ್ಕಳು ಇಬ್ಬರು ಅವಳಿಜವಳಿ ಮಕ್ಕಳು ಎಂದು ತಿಳಿದುಬಂದಿದ್ದು ., ಒಂದು ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿದ್ದು,ಮತ್ತೊಂದು ಗಂಡು ಮಗುವನ್ನು ಬೈಕ್ ನೊಂದಿಗೆ ಹೊಸಕೊಪ್ಪಲು ತನಕ ಎಳೆದಿತಂದಿದ್ದು ಮಗುವಿನ ದೇಹ ಚಿದ್ರಗೊಂಡಿದೆ. ಅದರೆ ದುರದೃಷ್ಟವಶಾತ್ ಒಟ್ಟು ಕುಟುಂಬದ ಸ್ಥಿತಿ ಹಾಗೂ ಗ್ರಾಮದ ನೋವಿನ ಆಕ್ರಂದನ ಮುಗಿಲುಮುಟ್ಟಿದೆ

ಎಲ್ಲರ ಬಳಿ ನಮ್ಮದೊಂದು ಮನವಿ ದಯವಿಟ್ಟು ನಾವು ನೊಡಿದ ಹಾಗೆ ಬೆರಳೆಣಿಯಷ್ಟು ಮಾತ್ರ ಅವರನ್ನು ಆಸ್ಪತ್ರೆಗೆ ರವಾನಿಸಲು ಸಹಾಯ ಮಾಡಿದ್ರು ಇನ್ನ ತುಂಬಾ ಜನ ನಮಗ್ಯಾಕೆ ಪೊಲೀಸ್ ಬರಲಿ ಅಂತಿದ್ರು. ರಸ್ತೆ ಅಪಘಾತವಾದಾಗ ಆದಷ್ಟು ಬೇಗ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿ ಯಾವುದೆ ಕೇಸ್ ನಿಮ್ಮ ಮೇಲೆ ಆಗುವುದಿಲ್ಲ. ನಾವೆಲ್ಲರೂ ಮಾನವೀಯತೆ ಮೆರೆಯೋಣ ಹಾಗೆ ಅಲ್ಲಿ ಸಹಾಯ ಮಾಡಿದ ಎಲ್ಲದರಿಗೆ ಧನ್ಯವಾದಗಳು🙏

ದೇವರು ಮೃತಪಟ್ಟ ಕುಟುಂಬಕ್ಕೆ ಶಾಂತಿ ನೀಡಲಿ , ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇವೆ .

LEAVE A REPLY

Please enter your comment!
Please enter your name here