ಹಾಸನ / ಕೇರಳ : ಕೇರಳದ ಕೋಯಿಕೋಡ್‌ನಲ್ಲಿದ್ದ ತಾಯಿಯನ್ನು ನೋಡಿಕೊಂಡು ವಾಪಸ್ ಹಿರೀಸಾವೆಗೆ ಬರುತ್ತಿದ್ದಾಗ ದುರದೃಷ್ಟವಶಾತ್ ರಸ್ತೆ ಅಪಘಾತ ಒಂದು ಸಂಭವಿಸಿ , ಕುಟುಂಬದ ಆಧಾರಸ್ತಂಭ ಕಳೆದು ಕೊಂಡ ದುರ್ಘಟನೆ ನಡೆದೋಗಿದೆ .,
ಚನ್ನರಾಯ ಪಟ್ಟಣ ತಾಲ್ಲೂಕಿನ ದಿಡಗ ಕೆನರಾ ಬ್ಯಾಂಕ್ ಅಧಿಕಾರಿ, ಕೇರಳದ ಕೋಯಿಕೋಡ್‌ನ ಜಾಯ್ ಜೋಸೆಫ್ (27) ಹೊಳೆನರಸೀಪುರ ತಾಲ್ಲೂಕಿನ ಚನ್ನರಾಯಪಟ್ಟಣ ರಸ್ತೆಯ ಹುಲಿವಾಲ ಗೇಟ್ ಸಮೀಪ ಬುಧವಾರ ರಾತ್ರಿ ಅವರ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ
ಬ್ಯಾಂಕ್ ಅಧಿಕಾರಿಯಾಗೋದು ತಾಯಿಯ ಕನಸಾಗಿತ್ತು ., ಮನೆ ಜವಾಬ್ದಾರಿ ಹೊತ್ತಿದ್ದ ಜೊಸೇಫ್ ಇನ್ನಿಲ್ಲ ., ಹಾಸನದ ಕೆನರಾ ಬ್ಯಾಂಕ್ ಗ್ರಾಹಕರ ಸೇವೆಯಲ್ಲಿ ಕನ್ನಡ ಕಲಿತು ಸೇವೆ ಸಲ್ಲಿಸುತ್ತಿದ್ದ ಕೇರಳ ಕನ್ನಡಿಗ ಇನ್ನಿಲ್ಲ
ಕೋಯಿಕೋಡ್‌ನಲ್ಲಿದ್ದ ತಾಯಿಯನ್ನು ನೋಡಿಕೊಂಡು ವಾಪಸ್ ಹಿರೀಸಾವೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದ ಸ್ಥಳಕ್ಕೆ ಪ್ರದೀಪ್(CPI), ಗ್ರಾಮಾಂತರ ಠಾಣೆ ವಿನಯ್‍ಕುಮಾರ್(SI) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ . ವೈದ್ಯಕೀಯ ತಪಾಸಣೆ ನಂತರ ಕೇರಳಕ್ಕೆ ಪಾರ್ಥಿವ ಶರೀರ ರವಾನಿಸಲಿದ್ದಾರೆ .