ಬೇಲೂರು ಚನ್ನಕೇಶವ ಆಭರಣಗಳನ್ನು ವಿಶೇಷ ಪೂಜೆಯೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ

0

ಬೇಲೂರು:
ಚನ್ನಕೇಶವ ಆಭರಣಗಳನ್ನು ವಿಶೇಷ ಪೂಜೆಯೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.
ಶ್ರೀ ಚನ್ನಕೇಶವ ದೇಗುಲದ ರಥೋತ್ಸವ ,ಜಾತ್ರೆ,ಹಾಗೂ ವಿಶೇಷ ಪೂಜಾ ವಿಧಾನಗಳು ಪ್ರಾರಂಭವಾಗುವ ಹಿನ್ನಲೆಯಲ್ಲಿ ಶ್ರೀ ಚನ್ನಕೇಶವ,ಸೌಮ್ಯನಾಯಕಿ,ರಂಗನಾಯಕಿ ಅಮ್ಮನವರಿಗೆ ಹಾಕುವಂತಹ ಒಡವೆಗಳನ್ನು ತಹಶಿಲ್ದಾರ್ ಕಚೇರಿಯ ಖಜಾನೆಯಿಂದ ವಿಶೇಷ ಪೂಜೆಯೊಂದಿಗೆ ಪಲ್ಲಕ್ಕಿ ಅಡ್ಡೆಯ ಮೂಲಕ ದೇವಾಕಯಕ್ಕೆ ತರಲಾಯಿತು.


ದೇಗುಲದ ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿಭಟ್ಟರು ,ಶ್ರೀನಿವಾಸ ಭಟ್ ,ಪೂಜೆ ಸಲ್ಲಿಸಿ ಶಾಸಕ ಲಿಂಗೇಶ್ ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿ ವಿದ್ಯುಲತಾ ಅವರ ಸಮ್ಮುಖದಲ್ಲಿ ತೆರೆಯಲಾಯಿತು.
ನಂತರ ಮಾತನಾಡಿದ ಶಾಸಕ ಕೆ‌ಎಸ್ ಲಿಂಗೇಶ್ ಯುಗಾದಿ ಹಬ್ಬದಿಂದ ೧೫ ದಿನಗಳ ಕಾಲ ಚನ್ನಕೇಶವ ಸ್ವಾಮಿ ರಥೋತ್ಸವವು ವಿಜ್ರಂಭಣೆಯಿಂದ ಜರುಗುವುದರಿಂದ ಸ್ವರ್ಣಾ ಅಲಂಕಾರದೊಂದಿಗೆ ಶ್ರೀ ಚನ್ನಕೇಶವ ಸ್ವಾಮಿ ಹಾಗೂ ಸೌಮ್ಯನಾಯಕಿ ಹಾಗೂ ರಂಗನಾಯಕಿ ಅಮ್ಮನವರಿಗೆ ಬಂಗಾರದೊಡುವೆ ಹಾಕಿ ಪೂಜೆ ಸಲ್ಲಿಸಲಾಗುವುದು.
ಹಿಂದಿನ ಸಂಪ್ರದಾಯದಂತೆ ದೇವಾಲಯದ ಉತ್ಸವಗಳನ್ನು ಆಚರಿಸಲಾಗುವುದು.ಇದರಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ.ಅಲ್ಲದೆ ಈ ಬಾರಿ ಹೆಚ್ಚು ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಬಂದಂತ ಎಲ್ಲಾ ಭಕ್ತರಿಗೆ ಪ್ರಸಾದದ ಪಾನಕದ ವ್ಯವಸ್ಥೆಯನ್ನು ಎಲ್ಲಾ ಸಂಘಸಂಸ್ಥೆಗಳ ಜೊತೆಗೂಡಿ ಮಾಡಲಿದ್ದು ಇದಕ್ಕೆ ಎಲ್ಲಾ ಭಕ್ತರ ಹಾಗೂ ದೇವಾಲಯದ ಆಡಳಿತ ಮಂಡಳಿ ಸಹಕಾರ ಮುಖ್ಯ ಎಂದರು.


ಕಾರ್ಯನಿರ್ವಹಣಾ ಅಧಿಕಾರಿ ವಿದ್ಯುಲತಾ ಮಾತನಾಡಿ೨೦೨೨ ನೇ ಸಾಲಿನಲ್ಲಿ ರಥೋತ್ಸವದ ಅಂಗವಾಗಿ ಖಜಾನೆಯಿಂದ ದೇವರ ಆಭರಣಗಳನ್ನು ತಂದು ಎಲ್ಲಾ ರೀತಿಯ ಪೂಜೆ ವಿಧಾನವನ್ನು ಮಾಡುವ ಮೂಲಕ ನಾಡಗೌಡರ ಹಾಗೂ ಪಟೇಲರ ಅಡ್ಡೆಗಾರರ ಸಮ್ಮುಖದಲ್ಲಿ ಪ್ರಧಾನ ಅರ್ಚಕರಿಗೆ ಒಡವೆಗಳನ್ನು ಹಸ್ತಾಂತರಿಸಿದ್ದು ಇಂದಿನಿಂದ ೧೮_ದಿನಗಳ ಕಾಲ ಪೂಜಾ ವಿಧಿವಿಧಾನಗಳನ್ನು ನಡೆಸಲಿದ್ದು ಭಕ್ತಾಧಿಗಳು ಆಗಮಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶ್ರೀನಿವಾಸ್,ಮಾಜಿ ಧರ್ಮದರ್ಶಿಗಳಾದ ಕೇಶವಮೂರ್ತಿ,ವೆಂಕಟೇಶ್, ವಿಜಯಲಕ್ಷ್ಮಿ,ಅರ್ಚಕರಾದ ನರಸಿಂಹ ,ಅಡ್ಡೆಗಾರ ದೇವರಾಜ್,ನಟರಾಜ್,ಚಂದ್ರು,ಮಧು ವ್ಯವಸ್ಥಾಪಕ ಮಂಜುನಾಥ್,ಎಎಸ್ಐ ವಿರೂಪಾಕ್ಷ ಹಾಜರಿದ್ದರು.

LEAVE A REPLY

Please enter your comment!
Please enter your name here