ನಿನ್ನೆ ಚಾರ್ಮಾಡಿ ಘಾಟಿಯಲ್ಲಿ ನಡೆದ 2 ಸಾರಿಗೆ ಬಸ್ ರಸ್ತೆ ಅಪಘಾತದ ನಂತರ ಈ ಗರ್ಭಿಣಿ ಉಳಿದಿದ್ದೇ ರೋಚಕ

0

ಹಾಸನ / ಚಿಕ್ಕಮಗಳೂರು : ನಿನ್ನೆ 07 ಶುಕ್ರವಾರ 2023 ರ ಸಂಜೆ , ಈ ಇಬ್ಬರ ಶ್ರಮಕ್ಕೆ ಒಂದು ಗರ್ಭಿಣಿ ಜೀವ ಉಳಿಯಿತು , ನಿಮಗೆ ತಿಳಿದಂತೆ ನಿನ್ನೆ ಸಂಜೆ ಚಾರ್ಮಾಡಿ ಘಾಟಿಯಲ್ಲಿ ಎರಡು ಸಾರಿಗೆ ಬಸ್ ಗಳ ನಡುವೆ ರಸ್ತೆ ಅಪಘಾತದಲ್ಲಿ ಇಬ್ಬರು ಬಸ್ ಚಾಲಕರು ಗಾಯಾಳುಗಳಾಗಿದ್ದರು .,

ಚಾರ್ಮಾಡಿ ಘಾಟಿ ರಾತ್ರಿಯಾದರೂ ಟ್ರಾಫಿಕ್ ಜಾಮ್ ಆಗಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದ ಆ ಸಂದರ್ಭದಲ್ಲಿ , ಇನ್ನೊಂದು ಸಾರಿಗೆ ಬಸ್ ನಲ್ಲಿ ತೀವ್ರ ಹೊಟ್ಟೆ ನೋವಿನ ಬವಣೆಯಲ್ಲಿದ್ದ ಗರ್ಭಿಣಿ ಮಹಿಳೆಯೋರ್ವಳಿಗೆ ಮೂಡಿಗೆರೆ ಆಸ್ಪತ್ರೆಗೆ ಸೇರಿಸಬೇಕಿತ್ತು ,

ಇದೇ ಸಂದರ್ಭದಲ್ಲಿ ತುರ್ತು ಸೇವೆಗೆಂದು ಸಮಯಕ್ಕೆ ಸರಿಯಾಗಿ ಬಂದ ‘ ಅಖಿಲ ಕರ್ನಾಟಕ ಆಂಬುಲೆನ್ಸ್ ರೋಡ್ ಸೇಫ್ಟಿ ಗ್ರೂಪ್ ಸಂಸ್ಥೆ ‘ ಯ ಆಂಬುಲೆನ್ಸ್ ಚಾಲಕ ಆರಿಫ್ , ಪ್ರಕಾಶ್ ಎಂಬ ಇಬ್ಬರು ತಮ್ಮ ಜೀವ ಪಣಕ್ಕಿಟ್ಟು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯ ದಾಖಲಿಸಿ

ಪ್ರಾಣ ಉಳಿಸಿದ ಮಾನವೀಯ ಘಟನೆ ನಡೆಯಿತು . , ಅಖಿಲ ಕರ್ನಾಟಕ ಆಂಬುಲೆನ್ಸ್ ರೋಡ್ ಸೇಫ್ಟಿ ಗ್ರೂಪ್ ಸಂಸ್ಥೆ ‘ ಯ ಅಧ್ಯಕ್ಷ ರಾದ ಸುಹೇಬ್ ರವರು ಈ ಸಂದರ್ಭದಲ್ಲಿ ಆರಿಫ್ ಮತ್ತು‌ ಪ್ರಕಾಶ್ ಅವರ ಸಮಯ ಪ್ರಜ್ಞೆ ಮೆಚ್ಚಿ ಸಂತಸ ವ್ಯಕ್ತ ಪಡಿಸಿದ್ದಾರೆ .

ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅಪ್ಪು ಮತ್ತು ಪ್ರಮೋದ್ ಎಂಬ ಯುವಕರು ಸಹಾಯ ಮಾಡಿದ್ದು .,

ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳು ಸೇರಿ ಜೀವ ಉಳಿಸೋ ಮಾನವೀಯ ಗುಣ ಹೊಂದಿ ಕಾರ್ಯ ಪ್ರವೃತ್ತರಾದ ಮೇಲ್ಕಂಡ ಎಲ್ಲರಿಗೂ ಹಾಸನ / ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಹಾಸನ್ ನ್ಯೂಸ್ ವೀಕ್ಷಕರ ಪರವಾಗಿ ಕೃತಜ್ಞತೆಗಳು

Watch Incident Videos Here

socialconcernhassan hassannewstoday charmadighat chikmagalurnews

LEAVE A REPLY

Please enter your comment!
Please enter your name here