ಲಾಕ್‌ಡೌನ್ ಹಿನ್ನೆಲೆ ಧರ್ಮಸ್ಥಳ ಸಂಘ ಸೇರಿದಂತೆ ವಿವಿಧ ಮೈಕ್ರೋಫೈನಾನ್ಸ್ಗಳಲ್ಲಿ ಪಡೆದಿರುವ ಸಾಲವನ್ನು ಮರುಪಾವತಿಸಲು ಕಾಲಾವಕಾಶ ನೀಡುವಂತೆ ಒತ್ತಾಯಿಸಿ ವಿವಿಧ ಸಂಘದ ಮಹಿಳೆಯರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ

0

ಲಾಕ್‌ಡೌನ್ ಹಿನ್ನೆಲೆ ಧರ್ಮಸ್ಥಳ ಸಂಘ ಸೇರಿದಂತೆ ವಿವಿಧ ಮೈಕ್ರೋಫೈನಾನ್ಸ್ಗಳಲ್ಲಿ ಪಡೆದಿರುವ ಸಾಲವನ್ನು ಮರುಪಾವತಿಸಲು ಕಾಲಾವಕಾಶ ನೀಡುವಂತೆ ಒತ್ತಾಯಿಸಿ ವಿವಿಧ ಸಂಘದ ಮಹಿಳೆಯರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ರಾಜ್ಯದಲ್ಲೆಡೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ 14 ದಿನಗಳ ಕಾಲ ಜನತಾ ಲಾಕ್‌ಡೌನ್ ಜಾರಿ ಮಾಡಿರುವ ಹಿನ್ನೆಲೆ ಜನಸಾಮಾನ್ಯರು ಕೆಲಸಕರ‍್ಯವಿಲ್ಲದೆ ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ಮೈಕ್ರೋ ಫೈನಾನ್ಸ್ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ಕಷ್ಟಕರವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಲಾಕ್‌ಡೌನ್ ಆದೇಶ ಬಂದ ದಿನದಿಂದ ದಿನ ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಕಾರ್ಮಿಕರು ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ. ಮನೆಯಲ್ಲಿರುವ ರೋಗಿಗಳಿಗೆ ಔಷಧಿ ತರಲೂ ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಹಣಕಾಸಿನ ಸಂಸ್ಥೆಗಳಾದ ಗ್ರಾಮೀಣ ಕೂಟ, ಧರ್ಮಸ್ಥಳ ಸಂಘ, ಐಡಿಎಫ್‌ಸಿ, ಎಸ್‌ಕೆಎಸ್, ಬಿಎಸ್‌ಎಸ್, ಮುತ್ತೂಟ್ ಫೈನಾನ್ಸ್ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಸಾಲ ಮರುಪಾವತಿಸಲು ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸಾಲ ಮರುಪಾವತಿಸಲು ಒತ್ತಡ ಹೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಸಮೀರ್ ಖಾನ್, ಹೆಚ್.ಡಿ. ದೇವೇಗೌಡ ನಗರದ ಮುನ್ನಾ, ಫಯಾಜ್, ಅಂಬೇಡ್ಕರ್ ನಗರದ ತಾಸೀನಾ ಭಾನು, ಮೀನಾಕ್ಷಿ, ಸಿದ್ದಯ್ಯ ನಗರದ ಜಯಮ್ಮ, ಕಾಂತರಾಜ್ ಇತರರು ಇದ್ದರು.

LEAVE A REPLY

Please enter your comment!
Please enter your name here