ರಸ್ತೆ ಅಪಘಾತ : ಸಕಲೇಶ್ವರ ಜಾತ್ರೆಗೆ ಬಂದವ ರಸ್ತೆ ಅಪಘಾತದಲ್ಲಿ ದಾರುಣ ಸಾವು

0

ಹಾಸನ : ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ನಡೆದಿದೆ. , ಪಟ್ಟಣದ ಅಗ್ರಹಾರ ನಿವಾಸಿ ಸಂತೋಷ್ (28) ಮೃತ ದುರ್ದೈವಿಯಾಗಿದ್ದು ಪಟ್ಟಣದ ಎಸ್.ಬಿ.ಎಂ ವೃತ್ತದ ಸಮೀಪ ಕಳೆದ ರಾತ್ರಿ ಬೈಕ್ ನಲ್ಲಿ ಹೋಗುವಾಗ ಮುಂದೆ ವೇಗವಾಗಿ ಹೋಗುತ್ತಿದ್ದ ಲಾರಿ ಚಾಲಕ ತಕ್ಷಣ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಹಿಂಬದಿಯಿಂದ ಬೈಕ್ ನಲ್ಲಿ ಬರುತ್ತಿದ್ದ ಸಂತೋಷ್ ಲಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾನೆ.‌,‌ ಗಾಯಗೊಂಡ ಈತನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿ ಸಾವನಪ್ಪಿದ್ದಾನೆ. , ಮೃತನು ಸಕಲೇಶಪುರ ಪಟ್ಟಣದ ಅಗ್ರಹಾರ ಬಡಾವಣೆಯ ನಿವಾಸಿ ಪರಮೇಶ್ ಎಂಬುವರ ಪುತ್ರನಾಗಿದ್ದು ಬೆಂಗಳೂರಿನ ಕೊರಿಯ‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಜಾತ್ರೆ ನಿಮಿತ್ತ ಪಟ್ಟಣಕ್ಕೆ ಕೆಲದಿನಗಳ ಹಿಂದಷ್ಟೆ ಬಂದಿದ್ದನೆಂದು ತಿಳಿದು ಬಂದಿದೆ. , ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here