ಹಾಸನ : ನಿನ್ನೆ (6june2022) ರಾತ್ರಿ ಪೊಲೀಸರು ನಗರದ ಲಾಡ್ಜ್ ಒಂದಕ್ಕೆ ತೆರಳಿ CCTV ಪರಿಶೀಲಿಸಿ , ಈ ವೇಳೆ ಲಾಡ್ಜ್ನಲ್ಲಿ ಪ್ರಶಾಂತ್ ಕೊಲೆಗೆ ಸಂಬಂಧಿತರು ತಂಗಿರುವುದು ಖಾತ್ರಿಯಾಗಿ. ಲಾಡ್ಜ್ನಲ್ಲಿದ್ದ ಎಲ್ಲರನ್ನು ಖಾಲಿ ಮಾಡಿಸಿ ಪೊಲೀಸರು ಬೀಗ ಜಡಿದಿದ್ದಾರೆ.
ಹಾಸನ ನಗರಸಭೆ ಜೆಡಿಎಸ್ (JDS) ಸದಸ್ಯ ದಿ.ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ (CID) ಅಧಿಕಾರಿಗಳು ಮತ್ತು ಹಾಸನ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು
ಕೊಲೆಗೂ ಮುನ್ನಾ ಹಂತಕರು ಹಾಸನ ನಗರದ ಹೃದಯಭಾಗದ (ಹೊಸಲೈನ್ ರಸ್ತೆಯ ಡಬಲ್ ಟ್ಯಾಂಕಿ ಮುಂಭಾಗದ ) ಲಾಡ್ಜ್ವೊಂದರಲ್ಲಿ ಪ್ಲ್ಯಾನ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕೊಲೆ ಆರೋಪಿಗಳು ತಂಗಿದ್ದ ಲಾಡ್ಜ್ನನ್ನು ಪೊಲೀಸರು ಸದ್ಯ ಸೀಜ಼್ ಮಾಡಿದ್ದು. ಕೊಲೆಗಾರರು ಇದ್ದ ಲಾಡ್ಜ್ ಲಕ್ಷ್ಮೀ ರೆಸಿಡೆನ್ಸಿಯಲ್ಲಿ ಎನ್ನಲಾಗಿದೆ . ಜೂ.1ರಂದು ಬೆಳಗ್ಗೆ ಈ ಲಾಡ್ಜ್ ಪಡೆದು ಎಣ್ಣೆ ಪಾರ್ಟಿ ಮಾಡಿದ್ದು. ಈ ಎಲ್ಲಾ ಮಾಹಿತಿಗಳು ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿರುತ್ತಾರೆ.
ನಿನ್ನೆ ರಾತ್ರಿ ಪೊಲೀಸರು ಲಾಡ್ಜ್ಗೆ ತೆರಳಿ CCTV ಪರಿಶೀಲಿಸಿ. ಈ ವೇಳೆ ಲಾಡ್ಜ್ನಲ್ಲಿ ತಂಗಿರುವುದು ಖಾತ್ರಿಯಾಗಿದೆ. ಲಾಡ್ಜ್ನಲ್ಲಿದ್ದ ಎಲ್ಲರನ್ನು ಖಾಲಿ ಮಾಡಿಸಿ ಪೊಲೀಸರು ಬೀಗ ಜಡಿದಿದ್ದಾರೆ. ಇನ್ನು ದಾಳಿ ವೇಳೆ ಲೈಸನ್ಸ್ ಪಡೆಯದೆ ಲಾಡ್ಜ್ ನಡೆಸುತ್ತಿರುವ ಬಗ್ಗೆ ಆಕ್ಷೇಪವೂ ವ್ಯಕ್ತವಾಗಿದೆ. ಕೊಲೆ ಸಂಬಂಧ ವಿಶ್ವ, ಸಂತೋಷ್ನನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೇರಿ ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಹಾಸನದಲ್ಲಿ ಕಾನೂನು ಸುವ್ಯವಸ್ಥೆ ವಿಫಲಗೊಂಡಿದೆ ಎಂಬ ಆರೋಪ ಸಂಬಂಧ ಪೆನ್ಷನ್ ಮೊಹಲ್ಲಾ ಇನ್ಸ್ಪೆಕ್ಟರ್ ವಿರುದ್ಧ ತನಿಖೆ ನಡೆಸುವಂತೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಅವರು ಆದೇಶ ಹೊರಡಿಸಿದ್ದಾರೆ. ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದವರ ಹಿಡಿಯಲು. ಎಸ್ಪಿ ಶ್ರೀನಿವಾಸ್ ಗೌಡ , ದಕ್ಷಿಣ ವಲಯದ ಐಜಿಪಿ ಬಾರಿ ತನಿಖೆಗೆ ಆದೇಶಿಸಿದ್ದಾರೆ.