ಬೆಂಗಳೂರು ಟ್ರಾಫೀಕ್ ಗೆ ಬಲಿಯಾಯ್ತ ಕಂದಮ್ಮ

0

ತುರ್ತು ವೇಳೆ ಪೊಲೀಸ್ರು ಸಹಕರಿಸಲಿ, ಚಾಲಕ ಮನವಿ

ಹಾಸನ: ಹಾಸನದಿಂದ ಬೆಂಗಳೂರಿಗೆ ಕೇವಲ ಒಂದುವರೆ ಗಂಟೆಗೆ ತಲುಪಿದ್ರೂ ಕೂಡ ನೆಲಮಂಗಲದಿಂದ ಟ್ರಾಫೀಕ್ ಸಮಸ್ಯೆಗೆ ಸಿಲುಕಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೇ ರಸ್ತೆ ಮಧ್ಯೆಯೇ ಕಂದಮ್ಮ ಬಲಿಯಾದ ಘಟನೆ ನಡೆದಿದ್ದು, ಇಂತಹ ತುರ್ತು ಸಂದರ್ಭದಲ್ಲಿ ತುರ್ತು ವಾಹನಕ್ಕೆ ಪೊಲೀಸರು ಸಹಕರಿಸುವ ಮೂಲಕ ಜೀವ ಉಳಿಸಲು ಮುಂದಾಗಬೇಕೆಂದು ಆಂಬುಲೆನ್ಸ್ ಚಾಲಕ ಮಧು ಮನವಿ ಮಾಡಿದ್ದಾರೆ.

​ ​ ​ ​ ಕಳೆದ ಒಂದು ದಿನಗಳ ಹಿಂದೆ ತುಮಕೂರು ಜಿಲ್ಲೆ ತಿಪಟೂರಿನ ಕೈಮರಾ ಬಳಿ ಬುಲೇರೊ ವಾಹನ ಹಾಗು ಬೈಕ್ ನಡುವೆ ಅಪಘಾತ ಸಂಭವಿಸಿ

ಅಪಘಾತದಲ್ಲಿ ತಂದೆ ಅಹಮದ್ ತಾಯಿ ರುಕ್ಸಾನಾಗೆ ಗಂಭೀರ ಗಾಯಗಳಾದವು. ಒಂದುವರೆ ವರ್ಷದ ಹುದಾ ಕೌಸರ್(೧.೫) ವರ್ಷದ ಕಂದಮ್ಮನನ್ನು ತಿಪಟೂರು ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆ ಗಾಗಿ ಹಾಸನದ ಹಿಮ್ಸ್ ಗೆ ಕಳಿಸಿದ್ದರು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಅಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಸ್ಥಳಾಂತರ ಮಾಡಲು ಸೂಚಿಸಿದರು. ಈ ಹಿಂದೆ ಆರೆಳು ಮಗುವನ್ನು ಜೀರೋ ಟ್ರಾಫೀಕ್ ನಲ್ಲಿ ಬೆಂಗಳೂರಿಗೆ ಕೊಂಡೂಯ್ದು ಕಂದಮ್ಮಗಳ ಜೀವ ಉಳಿಸಿದ್ದ ಮಧು ಒಂದುವರೆ ವರ್ಷದ ಹುದಾ ಕೌಸರ್ ಮಗುವನ್ನು ಕೂಡ ವಿವಿದ ಸಂಘಟನೆಗಳ ನೆರವಿನೊಂಗೆ ಅಂಬುಲೆನ್ಸ್ ನ್ನು ಜೀರೊ ಟ್ರಾಫಿಕ್ ಮಾದರಿಯಲ್ಲಿ ಬೆಂಗಳೂರಿನ ನೆಲಮಂಗಲ ವರೆಗೂ ಶೀಘ್ರ ತಲುಪಲಾಯಿತು. ಅಂಬುಲೆನ್ಸ್ ಚಾಲಕ ಮಧು ಪರಿಶ್ರಮದಿಂದ ಕೇವಲ ಒಂದುವರೆ ಗಂಟೆಗೆಲ್ಲಾ ನೆಲಮಂಗಲ ತಲುಪಿದ್ರೂ ಕೂಡ ನೆಲಮಂಗಲದಿಂದ ಟ್ರಾಫಿಕ್ ಸಮಸ್ಯೆ ನಡುವೆ ಸಿಲುಕಿದ ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ಚಿಕಿತ್ಸೆ ಸಿಗದೆ ದಾರಿ ಮದ್ಯೆಯೇ ಕಂದಮ್ಮ ಪ್ರಾಣ ಬಿಡಬೇಕಾಯಿತು.

​ ​ ​ ​ ಮಗುವನ್ನು ಕಳೆದುಕೊಂಡ ಹುದಾ ಕೌಸರ್ ಕುಟುಂಬ ನಡು ರಸ್ತೆಯಲ್ಲಿ ನಿಂತು ಕಣ್ಣೀರಿಟ್ಟರು. ಅವರ ಆಕ್ರಂಧನ ಆಕಾಶ ಮುಟ್ಟಿತ್ತು. ತುರ್ತು ಸಂದರ್ಭಗಳಲ್ಲಿ ಪೊಲೀಸರು ಟ್ರಾಫಿಕ್ ಸರಿಮಾಡಿದ್ರೆ ಕಂದಮ್ಮ ಬದುಕುಳಿಯಬಹುದಿತ್ತು. ಮುಂದಾದರೂ ಇಂತಹ ತುರ್ತು ವೇಳೆ ಪೊಲೀಸರು ನೆರವಾಗಲಿ ಎಂಬುದು ಆಂಬುಲೆನ್ಸ್ ಚಾಲಕನ ಮನವಿಯಾಗಿದೆ. ತುರ್ತು ಸಂದರ್ಭದಲ್ಲಿ ಇದುವರೆಗೂ ಆರು ಬಾರಿ ಜೀವವನ್ನು ಉಳಿಸಿದರೂ ಕೂಡ ಟ್ರಾಫೀಕ್ ಸಮಸ್ಯೆಯಿಂದ ಕಂದಮ್ಮ ಸಾವನಪ್ಪಿರುವುದಕ್ಕೆ ಅಂಬುಲೆನ್ಸ್ ಚಾಲಕ ಮಧು ದುಃಖವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here