ಅಪ್ರಾಪ್ತೆ ಬಲಿ ; ಪ್ರೀತಿ ವೈಫಲ್ಯಕ್ಕೆ ವಿಷ ಸೇವಿಸಿ ಸಾವಿಗೆ ಶರಣಾದ ಬಾಲಕಿ, ಯುವಕ ಅಂದರ್

0

ಹಾಸನ : ಮೃತ ಬಾಲಕಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು . ಬಾಲಕಿಯನ್ನು ಲೋಕೇಶ್ ಎಂಬಾತ ಪುಸಲಾಯಿಸಿ ಪ್ರೀತಿಸುತ್ತಿದ್ದೇನೆ ಎಂದು ನಂಬಿಸಿ ಹಿಂದೆ ಬಿದಿದ್ದನಂತೆ. ಆದರೆ

ಬಾಲಕಿ ಇತ್ತೀಚೆಗೆ ಮತ್ತೋರ್ವ ಅಪ್ರಾಪ್ತ ಸ್ನೇಹಿತನೊಂದಿಗೆ ಹೆಚ್ಚು ಓಡಾಡುತ್ತಿದ್ದಳಂತೆ. ಇದರಿಂದ ಲೋಕೇಶ್ ಸಿಟ್ಟಾಗಿ, ಬಾಲಕಿ ಜೊತೆ ಜಗಳ ಮಾಡಿದ್ದನಂತೆ. , ಇದರ ಹೊರತಾಗಿಯೂ ಬಾಲಕಿ ಮಂಗಳವಾರ ತನ್ನ ಅಪ್ರಾಪ್ತೆ ಸ್ನೇಹಿತೆ ಹಾಗೂ ಅಪ್ರಾಪ್ತ ಬಾಲಕನೊಂದಿಗೆ ಬೈಕ್‌ನಲ್ಲಿ ಜಾಲಿ ರೈಡ್ ಹೋಗಿದ್ದಳಂತೆ. ಇದನ್ನು ಪ್ರಶ್ನಿಸಿದ್ದ ಲೋಕೇಶ್ ಬಾಲಕಿ ಜೊತೆ

ಜಗಳ ಮಾಡಿ ಪದೇ ಪದೆ ಅನುಮಾನಗೊಂಡಿದ್ದನಂತೆ. ಇತ್ತ ಜಾಲಿ ರೈಡ್ ಹೋಗಿದ್ದಕ್ಕೆ ಅಪ್ರಾಪ್ತ ಬಾಲಕಿಗೆ ಪೋಷಕರು ಕೂಡ ಬುದ್ಧಿ ಮಾತು ಹೇಳಿದ್ದಾರೆ , ಇದರಿಂದ ಮನನೊಂದ ಯುವತಿ, ಬುಧವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ

ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಸಾವನ್ನಪ್ಪಿದ್ದಾಳೆ. ಸದ್ಯ ಲೋಕೇಶ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕೇಸ್ ದಾಖಲಿಸಿ ಲೋಕೇಶ್ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here