ಹಾಸನ ಸೇರಿ ರಾಜ್ಯದ ಏಳು ಪ್ರಮುಖ ರೈಲ್ವೇ ಮಾರ್ಗಗಳಿಗೆ ಅನುದಾನ

0

ನವದೆಹಲಿ / ಹಾಸನ : ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ರೈಲ್ವೇ ಅಭಿವೃದ್ಧಿಗೆ 7,561 ಕೋಟಿ ಅನುದಾನ ,ವಂದೇ ಭಾರತ್ ಮಾದರಿಯಲ್ಲಿ ವಂದೇ ಮೆಟ್ರೋ ಕೂಡ ರಾಜ್ಯಕ್ಕೆ ಬರಲಿದೆ , ಹಾಸನ ಸೇರಿ  55 ಪ್ರಮುಖ ರೈಲ್ವೇ ಸ್ಟೇಷನ್ ಗಳು ಮೇಲ್ದರ್ಜೆಗೆ: ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಮಾತನಾಡಿ ಈ ಬಜೆಟ್ನಲ್ಲಿ ನೀಡಲಾದ ಅನುದಾನದಿಂದ

ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ, ರಾಜ್ಯದ 55 ಪ್ರಮುಖ ರೈಲ್ವೇ ಸ್ಟೇಷನ್ಗಳು ಮೇಲ್ದರ್ಜೆಗೆ ಏರಿಸಲಾಗುವುದು. ರೈಲ್ವೇ ಇಲಾಖೆಯಿಂದಲೇ ಸ್ಥಳೀಯ ಆಹಾರಗಳನ್ನು ಆದ್ಯತೆ ಮೇರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸ್ಥಳೀಯವಾಗಿ ಪ್ರಖ್ಯಾತಿ ಆಗಿರುವ ತಿಂಡಿ ತಿನಿಸುಗಳು ರೈಲ್ವೇ ಅಂಗಡಿಗಳಲ್ಲೇ ಅಧಿಕೃತವಾಗಿ ಲಭ್ಯವಾಗಲಿದೆ. ರಾಜ್ಯದ ಹಲವು ಕಡೆಗಳಿಗೆ ಹೊಸ ಮಾರ್ಗಗಳು ಸ್ಥಾಪಿಸಲಾಗುವುದು. ಈ ಸಂಬಂಧ

ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡಿ ಭೂ ಸ್ವಾಧೀನ ಪ್ರಕ್ರಿಯೆ ನೆಡೆಸಲಾಗುವುದು ಎಂದು ಹೇಳಿದರು. , ರಾಜ್ಯದ ಏಳು ಪ್ರಮುಖ ರೈಲ್ವೇ ಮಾರ್ಗಗಳಿಗೆ ಅನುದಾನ: ಗದಗ-ಹೊಟಗಿ:- 110 ಕೋಟಿ, ಚಿಕ್ಕಬಾಣಾವರ-ಹುಬ್ಬಳ್ಳಿ:- 128 ಕೋಟಿ, ಬಿರೂರು ತಾಳಗುಪ್ಪ:- 56 ಕೋಟಿ, ಹಾಸನ-ಮಂಗಳೂರು:- 134 ಕೋಟಿ, ಮಿರಾಜ್-ಲೋಂಡಾ:- 182 ಕೋಟಿ, ಹೊಸಪೇಟೆ-ಹುಬ್ಬಳ್ಳಿ-ವಾಸ್ಕೋಡಗಾಮ :- 20 ಕೋಟಿ, ಚಿಕ್ಕಬಾಣಾವರ-ಹಾಸನ:- 77 ಕೋಟಿ. ,

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಹೊಸ ರೈಲ್ವೇ ಮಾರ್ಗಗಳ ಘೋಷಣೆ: ಗದಗ-ವಾಡಿ:- 350 ಕೋಟಿ (150 ಕೋಟಿ ರಾಜ್ಯ ಸರ್ಕಾರ), ಗಿನಿಗೆರ-ರಾಯಚೂರು:- 300 ಕೋಟಿ, ತುಮಕೂರು-ದಾವಣಗೆರೆ (ವಾಯ ಚಿತ್ರದುರ್ಗ) :- 420 ಕೋಟಿ (200 ಕೋಟಿ ರಾಜ್ಯ ಸರ್ಕಾರ), ತುಮಕೂರು- ರಾಯದುರ್ಗ (ವಾಯ ಕಲ್ಯಾಣದುರ್ಗ) :- 350 ಕೋಟಿ, ಬಾಗಲಕೋಟೆ – ಕುಡಚಿ :- 360 ಕೋಟಿ (150 ಕೋಟಿ ರಾಜ್ಯ ಸರ್ಕಾರ), ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರು :- 150 ಕೋಟಿ,

ಬೆಳಗಾವಿ-ಧಾರವಾಡ (ವಾಯ ಕಿತ್ತೂರು) :- 10 ಕೋಟಿ, ಮರಿಕುಪ್ಪಂ-ಕುಪ್ಪಂ :- 200 ಕೋಟಿ, ಕಡೂರು-ಚಿಕ್ಕಮಗಳೂರು-ಹಾಸನ :- 145 ಕೋಟಿ, ಮಲಗೂರು-ಪಾಲಸಮುದ್ರಂ :- 20 ಕೋಟಿ.

ಇಷ್ಟು ಅನುದಾನಕ್ಕೆ ನೈಋತ್ಯ ರೈಲ್ವೇ ದೇಶದಲ್ಲಿ ನಂ.1 ನಲ್ಲಿ ಸಾರ್ವಕಾಲಿಕ ಆದಾಯದ ದಾಖಲೆ ಮಾಡುತ್ತಿರೋದು . 5,680 ಕೋಟಿ ಆದಾಯ ಬಂದಿದೆ. 2021ರ ಅವಧಿಯಲ್ಲಿ 4,410 ಕೋಟಿ ರೂಪಾಯಿ ಆದಾಯ ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಶೇಕಡಾ 29 ರಷ್ಟು ಆದಾಯ ಗಳಿಕೆ ಹೆಚ್ಚಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here