ಹಾಸನ : ಟಿವಿಎಸ್ ಮೊಪೆಡ್‌ನಲ್ಲಿ ಶ್ರವಣ ಬೆಳಗೊಳ ಕಡೆಗೆ ಅಯಾರಹಳ್ಳಿ ರೇಖಾ (35) ಎಂಬುವರು ಮಕ್ಕಳೊಂದಿಗೆ ಹೋಗುತ್ತಿದ್ದಾಗ,
ಎದುರಿನಿಂದ ಇನೋವಾಕಾರು ಡಿಕ್ಕಿ ಹೊಡೆದಿದೆ. ಘಟನೆ ಭಾನುವಾರ ಹೋಬಳಿಯ ಮತಿಘಟ್ಟ ಬಳಿ ನಡೆದಿದೆ. ಮಹಿಳೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟರು. ಮಕ್ಕಳಾದ ಹೇಮಂತ್, ಸುಮಂತ್ ಅಪಘಾತದಲ್ಲಿ ಕೈಕಾಲು ಮುರಿದಿದೆ. ಗಾಯಗೊಂಡ ಮಕ್ಕಳ ಚಿಕಿತ್ಸೆ ಕೊಡಿಸಲು,
ಕಾರಿನ ಮಾಲೀಕರು ಭರವಸೆ ನೀಡುವವರೆಗೆ, ಮೃತ ದೇಹವನ್ನು ಅಪಘಾತ ಸ್ಥಳದಿಂದ ಆಸ್ಪತ್ರೆ ಸಾಗಿಸಲು ಸಂಬಂಧಿಕರು ಮತ್ತು ಮತಘಟ್ಟ, ಅಯಾರಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಪಟ್ಟು ಹಿಡಿದರು. ಮಧ್ಯಾಹ್ನ ಘಟನೆ ಸಂಭವಿಸಿದ್ದರೂ, ಸಂಜೆ 7 ಗಂಟೆಯಾದರು ಮಾಲಿಕರು ಸ್ಥಳಕ್ಕೆ ಬಂದಿರಲ್ಲಿಲ್ಲ.
ಸಿಪಿಐ ಪ್ರಭಾಕರ್, ಶ್ರವಣಬೆಳಗೊಳ ಎಸ್ಐ ರವಿಶಂಕರ್ ಸ್ಥಳಕ್ಕೆ ಭೇಟಿ ನೀಡಿದ್ದರು.