ರಾಷ್ಟ್ರೀಯ ಹೆದ್ದಾರಿ ಸಕಲೇಶಪುರ ದಲ್ಲೊಂದು ರಸ್ತೆ ಅಪಘಾತ , ಒಳಗಿದ್ದ ಪ್ರಯಾಣಿಕರು?

0

ಹಾಸನ : ವೇಗವಾಗಿ ಬಂದ ಕಾರು ಚಾಲಕನಿಗೆ ತಿರುವು ಇರುವುದು ಅರಿವಾಗದೇ ನೇರವಾಗಿ ಅಂಗಡಿಯೊಳಗೆ ನುಗ್ಗಿಸಿದ ಘಟನೆ ನಡೆದಿದೆ . ಕಾರು ಗುದ್ದಿದ ರಭಸಕ್ಕೆ ಅಂಚಿನ ಮೇಲ್ಛಾವಣಿ ಹೊಂದಿದ ಅಂಗಡಿ ಬಹುತೇಕ ಕುಸಿದೋಗಿದೆ .

ಕಾರು ಸಹ ಅಂಗಡಿಯೊಳಗೆ ಹೂತುಕೊಂಡಂತೆ ಚಿತ್ರದಲ್ಲಿಕಾಣಿಸುತ್ತಿದೆ . ಇಲ್ಲಿ ಒಂದೊಳ್ಳೆಯ ವಿಷಯ ಅಂದರೆ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ , ಕಾರಿನೊಳಗೆ ಸಿಲುಕಿಕೊಂಡಿದ್ದವರನ್ನು ಸ್ಥಳೀಯರು ಹರಸಾಹಸ ಮಾಡಿ ರಕ್ಷಣೆ ಮಾಡಿದ್ದು . ಅವರು ಸಣ್ಣ ಪುಟ್ಟ ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿ ಸಹಾಯ ನೆರವಾಗಿದ್ದಾರೆ .‌ , ಕಾರು ನುಗ್ಗಿದ್ದ ಅಂಗಡಿಯ ಬಾಗಿಲು ಮುಚ್ಚಿದ್ದರಿ‌ಂದ ದೊಡ್ಡ ಅನಾಹುತವೊಂದು ತಪ್ಪಿದೆ ಎನ್ನಬಹುದು . ಸ್ಥಳಕ್ಕೆ ಸಕಲೇಶಪುರ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು . , ಅಂಗಡಿಯೊಳಗೆ ನುಗ್ಗಿದ ಕಾರನ್ನು

ಕ್ರೇನ್‌ ಮೂಲಕ ಮೇಲಕ್ಕೆ ಎತ್ತುವ ಕೆಲಸ ನಡೆದಿದ್ದು , ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಹಾಗೂ ಸ್ಥಳೀಯರಿಗೆ ಅಪಘಾತ ಬಗ್ಗೆ ತಿಳಿಯುತ್ತಿದ್ದಂತೆ ಹಲವಾರು ಜನರು ಸೇರಿದ್ದರು. , ಘಟನೆ : ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ಕಾರೊಂದು ನುಗ್ಗಿದ ಘಟನೆ ಬೆಳಗಿನ ಜಾವ ನಡೆದಿದೆ.

LEAVE A REPLY

Please enter your comment!
Please enter your name here