ಹಾಸನ : ಪ್ರಯಾಣಿಕರ ಬಹುದಿನಗಳ ಬೇಡಿಕೆಯ ಬೆಂಗಳೂರು-ಮಂಗಳೂರು ಹೆದ್ದಾರಿ ಹಾಸನ ಜಿಲ್ಲೆಯ ಸಕಲೇಶಪುರ – ಮಾರನಹಳ್ಳಿ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭವಾಗಿದೆ, ಇದರೊಂದಿಗೆ ಕರ್ನಾಟಕದ ಭಾಗದಲ್ಲಿ ಹೆಚ್ಚು ಹದಗೆಟ್ಟ ರಸ್ತೆಯೆಂದು ಕುಖ್ಯಾತಿ ಯಾಗಿದ್ದ ರಸ್ತೆಯು ದುರಸ್ತಿ ಬಾಗ್ಯ ಕಂಡಿದೆ.
ರಾಜಧಾನಿ – ಬಂದರು ಪ್ರಯಾಣಿಕರು ಮತ್ತು ವ್ಯಾಪಾರಿಗಳು ರಸ್ತೆ ಕಾಮಗಾರಿ ಬಹಳ ಅನಕೂಲವಾಗಲಿದ್ದು .
ಮಾರನಹಳ್ಳಿಯಿಂದ ಮುಂದಿನ ರಸ್ತೆಯ ಭಾಗವು ಅತ್ಯುತ್ತಮ ಸ್ಥಿತಿಯಲ್ಲಿದ್ದರೂ, ಸಕಲೇಶಪುರ ಮತ್ತು ಮಾರನ ಹಳ್ಳಿ ನಡುವಿನ ಭಾಗ ಹೆಚ್ಚು ಹಾನಿಗೊಳಗಾಗಿತ್ತು , ಪ್ರಯಾಣಿಕರ ಹಿಡಿಶಾಪ ಹಾಕೇ ಹೋಗುವಂತಿತ್ತು , ಈ ದುರಸ್ತಿ ಕಾಮಾಗಾರಿಯು ಪ್ರಯಾಣಿಕರಿಗೆ ನೆಮ್ಮದಿ ತಂದಂತಿದೆ .
ರಸ್ತೆ ಕಾಮಗಾರಿ ನಡೆಸುವಂತೆ ಪ್ರಯಾಣಿಕರು ಮತ್ತು ವ್ಯಾಪಾರಿಗಳು ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಪ್ರತಿಭಟನೆ ನಡೆಸಿ ಮನವಿಗಳನ್ನು ಸಲ್ಲಿಸಿದ್ದರು.
ಕಳೆದ ಎರಡು ತಿಂಗಳಿನಿಂದ ಕಾಮಗಾರಿ ಆರಂಭಗೊಂಡಿದ್ದು, ರಸ್ತೆ ರಿಪೇರಿ ಜೊತೆಗೆ ಡಾಂಬರೀಕರಣ ನಡೆಯುತ್ತಿದೆ.
ಮಾತನಾಡಿದ ; ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಎಂ ಡಿ ಇನ್ ಪ್ರೋ ಇಂಡಿಯಾ ಫ್ ಪ್ರೈವೇಟ್ ಲಿಮಿಟೆಡ್ ಡೈರೆಕ್ಟರ್ ಹೇಳಿದರು, ನಾವು ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಿದ್ದೇವೆ. ಗುಂಡಿಗಳನ್ನು ತುಂಬಲಾಗುತ್ತಿದೆ. ಸಕಲೇಶಪುರ- ಮಾರನಹಳ್ಳಿ ರಸ್ತೆ ನಡುವಿನ 11 ಕಿಮೀ ವ್ಯಾಪ್ತಿಯಲ್ಲಿ 11 ಕೋಟಿ ರೂ ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ.
ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.