ರಸ್ತೆ ಅಪಘಾತ: ಗ್ರಾಮ ಪಂಚಾಯಿತಿ ಅಧ್ಯಕ್ಷರ ಮಗ ಸಿವಿಲ್ ಎಂಜಿನಿಯರ್ ಚಂದನ್ (27ವರ್ಷ) ಸಾವು

0

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ಕಾರೇಹಳ್ಳಿ ಗ್ರಾಮಕ್ಕೆ ಬರುವಾಗ ಭಾನುವಾರ ಮುಂಜಾನೆ 3ರ ಸಮಯದಲ್ಲಿ ಕಾರು ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಚಾಲಕ ನಾಗೇಶ್ ಪ್ರಾಣಪಾಯದಿಂದ ಪಾರಾಗಿದ್ದು, ಚಂದನ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ

ಕೊನೆ ಉಸಿರೆಳೆದಿದ್ದಾರೆ , ಜಂಬೂರು ಕಾಲೋನಿ ಸಮೀಪ ಭಾನುವಾರ ಮುಂಜಾನೆ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಬಾಗೂರು ಹೋಬಳಿ ಕಾರೇಹಳ್ಳಿಯ ಸಿವಿಲ್ ಎಂಜಿನಿಯರ್ ಚಂದನ್ (27) ಮೃತಪಟ್ಟರು., ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಕಾರೇಹಳ್ಳಿಯಲ್ಲಿ ನಡೆಯಿತು. ಶಾಸಕ ಸಿಎನ್ ಬಾಲಕೃಷ್ಣ ದಂಪತಿ ಸೇರಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು , ಕಾರೇಹಳ್ಳಿ ಗ್ರಾಮದ ಪಿಎಲ್‌ ಡಿ ಬ್ಯಾಂಕ್ ನಿರ್ದೇಶಕ ಕೆ.ಟಿ. ನಟೇಶ್ ಅವರ ಪುತ್ರನಾಗಿರುವ ಚಂದನ್,

ಚನ್ನರಾಯಪಟ್ಟಣದಿಂದ ಕಾರೇಹಳ್ಳಿ ಗ್ರಾಮಕ್ಕೆ ಬರುವ ಸಂದರ್ಭದಲ್ಲಿ ಮುಂಜಾನೆ 3 ಗಂಟೆ ಸಮಯದಲ್ಲಿ ಜಂಬೂರು ಕಾಲೋನಿ ತಿರುವಿನಲ್ಲಿ ಐ 20 ಕಾರು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಗುದ್ದಿದೆ. ಚಾಲಕ ನಾಗೇಶ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಚಂದನ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ.

LEAVE A REPLY

Please enter your comment!
Please enter your name here