ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಹಳೇಕೋಟೆ ( ಮೈಸೂರು-ಹಾಸನ ಹೆದ್ದಾರಿ) ರಸ್ತೆಯಲ್ಲಿ ಮೈಸೂರಿನಿಂದ ಹಾಸನದತ್ತ ಬರುತ್ತಿದೆ ಎನ್ನಲಾದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನವೊಂದು , ಭರ್ತಿ ಬಣ್ಣ ತುಂಬಿದ ಡಬ್ಬಿಗಳಿದ್ದು ., ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಯಾತಪ್ಪಿ ಬಿದ್ದಿದೆ ., ಅದೃಷ್ಟವಶಾತ್
ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು ., ಯಾವುದೇ ಪ್ರಾಣಾಪಾಯ ಇಲ್ಲ . ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ., ವೇಗಕ್ಕೆ ಒತ್ತು ನೀಡಿದ ಚಾಲಕ ತಿರುವಿನಲ್ಲಿ ತಕ್ಷಣ ಬ್ರೇಕ್ ಹಿಡಿತಕ್ಕೆ ಸಿಗದ ಕಾರಣ
ಹ್ಯಾಂಡ್ ಬ್ರೇಕ್ ಬಳಸಿದ ಮರುಕ್ಷಣ ವಾಹಮ ಮಗುಚಿದೆ ಎಂದು ಸ್ಥಳೀಯರು ತಿಳಿಸಿದ್ದು ., ಪೊಲೀಸ್ ತನಿಖೆ ನಂತರ ಘಟನೆಯ ಸಂಪೂರ್ಣ ವಿವರ ತಿಳಿಯಲಿದೆ .
ಘಟನೆಯಿಂದ ಮಾಲೀಕರಿಗೆ ಅಂದಾಜು 3ಲಕ್ಷ ರೂ ಮೌಲ್ಯದ ವಸ್ತು ನಾಶವಾಗಿದೆ .