ಹಾಸನದಲ್ಲಿ SSLC ಪರೀಕ್ಷೆಗೆ ಕುಳಿತವರಲ್ಲಿ 18,599 ಪಾಸ್ 695 ಫೇಲ್

0

ಹಾಸ‌ನ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ ಜಿಲ್ಲೆ ಮೂರನೇ ಸ್ಥಾನ ಹಾಗೂ ತೇರ್ಗಡೆ ಪ್ರಮಾಣದಲ್ಲು ಹೆಚ್ಚಳ, ಜಿಲ್ಲೆಯಲ್ಲಿ ಸಕಲೇಶಪುರ ಫಸ್ಟ್ ಹೊಳೆನರಸೀಪುರ ಸೆಕಂಡ್

ಕಳೆದ ಬಾರಿ ಶೇ 95.60ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದ ಹಾಸನ ಜಿಲ್ಲೆ, ಈ ಬಾರಿ ಶೇ 96.08 ರಷ್ಟು ಫಲಿತಾಂಶ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದುವ. ಕಳೆದ ವರ್ಷಕ್ಕಿಂತ ಶೇ 1.08 ಫಲಿತಾಂಶ ಏರಿಕೆಯಾಗಿದೆ

ಈ ಬಾರಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಾಸನದಲ್ಲಿ 9,409 ಬಾಲಕರು, 9,885 ಬಾಲಕಿಯರು ಸೇರಿದಂತೆ ಒಟ್ಟು 19,294 ವಿದ್ಯಾರ್ಥಿಗಳು ಹಾಜರಾಗಿ,  8,997 ಬಾಲಕರು ಮತ್ತು 9,602 ಬಾಲಕಿಯರು ಸೇರಿದಂತೆ ಒಟ್ಟು 18,599 ವಿದ್ಯಾರ್ಥಿಗಳು ಉತ್ತೀರ್ಣರಾದರು

ಜಿಲ್ಲೆಯಲ್ಲಿ 2,461 ವಿದ್ಯಾರ್ಥಿಗಳು ಎ ಪ್ಲಸ್ ☑, 5,036 ವಿದ್ಯಾರ್ಥಿಗಳು ಎ ಶ್ರೇಣಿ ☑, 5,128 ವಿದ್ಯಾರ್ಥಿಗಳು ಬಿ ಪ್ಲಸ್ ಶ್ರೇಣಿ☑, 3,881 ವಿದ್ಯಾರ್ಥಿಗಳು ಬಿ ಶ್ರೇಣಿ☑, 1,946 ವಿದ್ಯಾರ್ಥಿಗಳು ಸಿ ಪ್ಲಸ್ ಶ್ರೇಣಿ☑, 147 ವಿದ್ಯಾರ್ಥಿಗಳು ಸಿ ಶ್ರೇಣಿ☑ಯನ್ನು ಪಡೆದಿರುತ್ತಾರೆ. 695 ವಿದ್ಯಾರ್ಥಿಗಳು ಅನುತ್ತೀರ್ಣ(ಫೇಲ್)ರಾಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಗರಿಷ್ಟ ಅಂಕ ಪಡೆದವರು :
• ಹಾಸನ ನಗರದ ಎಲೈಟ್‌ ಸ್ಕೂಲ್‌ನ ಮೇಘನಾ ಕೆ.ಎಲ್., ಗ್ಯಾರೆಹಳ್ಳಿ ತಮ್ಮಯ್ಯ ವರ್ಲ್ಡ್ ಅಕಾಡೆಮಿಯ ಯಮುನಾ ಯು ಎನ್. 624 ಅಂಕ
• ಯುನೈಟೆಡ್‌ ಹೈಸ್ಕೂಲ್‌ನ ಗುಣಶ್ರೀ ಜಿ.ಎಸ್., ಸಂಜನಾ ರಾಜ್ ಎ.ವೈ. ಹಾಗೂ ಹೋಲಿ ಚಿಲ್ಡ್ರನ್‌ ಸ್ಕೂಲ್‌ನ ಎಚ್.ಎಸ್. ನವೀಕ್ಷಾ 623 ಅಂಕ

ಒಟ್ಟು ಎಂಟು ವಿದ್ಯಾರ್ಥಿಗಳು 622 ಅಂಕಗಳನ್ನು ಪಡೆದಿರುತ್ತಾರೆ.

ನಮ್ಮ ಮಕ್ಕಳ ಸಾಧನೆ ಇಷ್ಟವಾದಲ್ಲೇ ಪ್ರೋತ್ಸಾಹಿಸಲು ಶೇರ್ ಮಾಡಿ .

LEAVE A REPLY

Please enter your comment!
Please enter your name here